ಪರ್ಪಲೆ ಕಲ್ಕುಡ ದೈವಸ್ಥಾನದ ಉತ್ಸವದಲ್ಲಿ ಸ್ವಯಂ ಸೇವಕರಾಗಿ…


ಕಾರ್ಕಳ : ಪರ್ಪಲೆಯಲ್ಲಿ ಮೇ 17ರಿಂದ 19ರವರೆಗೆ ಶ್ರೀ ಕಲ್ಕುಡ ಕಲ್ಲುರ್ಟಿ ತೂಕತ್ತೇರಿ ಧರ್ಮ ದೈವಗಳ ಶಿಲಾಮಯ ಗರ್ಭ ಗೃಹ ಸಮರ್ಪಣೆ ಮತ್ತು ದೈವ ಬಿಂಬ ಪುನಃ ಪ್ರತಿಷ್ಠೆ ಸಾನಿಧ್ಯ ಕಲಶೋತ್ಸವ, ಮಹಾ ಅನ್ನ ಸಂತರ್ಪಣೆ ಹಾಗು ಸಿರಿ ಸಿಂಗಾರ ನೇಮೋತ್ಸವ ನಡೆಯಲಿದೆ.
ಈ ಪುಣ್ಯ ಕಾರ್ಯದಲ್ಲಿ ಸಾವಿರಾರು ಮಂದಿ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುವವರು ತಮ್ಮ ಹೆಸರನ್ನು ನೋಂದಾಯಿಸಿ ದೈವಗಳ ಕೃಪೆಗೆ ಪಾತ್ರರಾಗ ಬೇಕಾಗಿ ಸಮಿತಿ ವಿನಂತಿ ಮಾಡಿದೆ.
7892976977
8197503102
9986069141





















