ಉಡುಪಿ : ಭಾರತೀಯ ಮಹಿಳೆಯರಲ್ಲಿ ಹೆಚ್ಚಾಗಿ ಸ್ತನ ಹಾಗೂ ಗರ್ಭಕೋಶದ ಕ್ಯಾನ್ಸರ್ ಕಂಡು ಬರುತ್ತದೆ. ಸಮಸ್ಸೆ ಕಾಣಿಸಿಕೊಂಡಾಗ ವೈದ್ಯರ ಬಳಿ ಹೋಗುವುದಕ್ಕೂ ಮುನ್ನಾ ಸಮಸ್ಯೆಗಳು ಬಾರದಂತೆ ಮುಂಜಾಗರೂಕತೆ ವಹಿಸಿಕೊಳ್ಳುವುದು ಅತೀ ಅಗತ್ಯ ಎಂದು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ರಿಪ್ರೊಡಕ್ಟಿವ್ ಮೆಡಿಸಿನ್ ನ ಅಸೋಸಿಯೇಟ್ ಪ್ರೊಫೆಸರ್ ಡಾ. ಅಂಜಲಿ ಸುನಿಲ್ ಮುಂಡ್ಕೂರು ಹೇಳಿದರು.
ಉಡುಪಿಯ ಬ್ರಾಹ್ಮಿ ಸಭಾಭವನದಲ್ಲಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಹಮ್ಮಿಕೊಂಡ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ ಹಾಗೂ ವಿಪ್ರ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಆರೋಗ್ಯ ಬಗ್ಗೆ ಮಾಹಿತಿ ನೀಡಿದರು.
ಲೇಖಕಿ, ಸಾಹಿತಿ, ಎಂಜಿಎಂ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ರವರು ಮಾತನಾಡಿ, ಸ್ತ್ರೀಯರನ್ನು ಪುರುಷ ಸಮಾಜ ದೇವರನ್ನಾಗಿ ಮಾಡಿ ಕಟ್ಟುಪಾಡುಗಳಿಂದ ಬಂದಿಯಾಗಿಸುವ ಬಗೆಗಿನ ಹಿಂದಿನ ಕಾಲದ ಚಿಂತನೆ ನಂತರದ ಸುಧಾರಣೆ, ಕಾಯ್ದೆಗಳ ಕುರಿತು ಮಾತನಾಡಿ,ಈಗಲೂ ಅಂತಹ ಕೆಲವು ಮೂಢ ಆಚರಣೆಗಳು ಹಳ್ಳಿಯ ಪ್ರದೇಶದಲ್ಲಿ ಕಾಣಸಿಗುತ್ತವೆ. ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ತಿಳಿ ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೂವರು ಮಹಿಳೆಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಭರತನಾಟ್ಯ ವಿಷಾರದೆ ವಿದುಷಿ ಯಶಾರಾಮಕೃಷ್ಣ, ಅಂಚೆ ಸಹಾಯಕಿ, ಸಾಹಿತಿ ಫಿಲಾಟಲಿ ಮತ್ತು ಕಾರ್ಯಕ್ರಮ ನಿರ್ವಹಣೆ ಇತ್ಯಾದಿ ಸಾಮಾಜಿಕ ಕಾರ್ಯಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಪೂರ್ಣಿಮಾ ಜನಾರ್ಧನ್, ರಾಷ್ಟ್ರೀಯ ಈಜು ಪಟು- ವಾಣಿ ಬಾಲಚಂದ್ರ ಸನ್ಮಾನ ಸ್ವೀಕರಿಸಿದರು.
ಆರೋಗ್ಯ ಸುರಕ್ಷಾ ಕಾರ್ಡ್ ನ ಪ್ರಯೋಜನ ಹಾಗೂ ಇನ್ನಿತರ ಮಾಹಿತಿಯನ್ನು ಅದರ ಸಂಚಾಲಕ ಚೈತನ್ಯ ಎಂ ಜಿ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.
ಅಯೋಧ್ಯೆಯ ಬಾಲರಾಮನನ್ನು ಕಂಡು ಬೆಳ್ಳಿ ಕಲಶದೊಂದಿಗೆ ಅಷ್ಟಾವಧಾನ ಸೇವೆ ಮಾಡಲು ಅನುವು ಮಾಡಿಕೊಟ್ಟ ಪರಿಷತ್ತಿಗೆ ಹಾಗೂ ಸದಸ್ಯರಿಗೆ ಆಭಾರಿಯಾಗಿದ್ದೇವೆ ಎಂದು ತಿಳಿಸಿದರು.
ರಾಧಿಕಾ ಚಂದ್ರಕಾಂತ್ ಅಧ್ಯಕ್ಷತೆ ವಹಿಸಿ ಮಹಿಳಾ ದಿನಾಚರಣೆಯ ಮಾತನಾಡಿ, ಸಂಸ್ಥೆ ಗಿರುವ ಕಳಕಳಿಯನ್ನು ಸ್ಮರಿಸಿದರು.
ಸನ್ಮಾನಿತರ ಪರವಾಗಿ ವಿದುಷಿ ಯಶಾ ರಾಮಕೃಷ್ಣ ಇವರು ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಸಮಾಜದಲ್ಲಿ ಸಾಧಕರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವುದು ಬಹಳ ಸಂತಸ ತಂದಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ 18 ಕ್ಕೂ ಹೆಚ್ಚು ನೂತನ ಮಹಿಳಾ ಸದಸ್ಯರು ಪರಿಷತ್ತಿಗೆ ಸೇರ್ಪಡೆಗೊಂಡರು.
ಆರೋಗ್ಯ ಕಾರ್ಡಿನ ನಿರ್ವಹಣೆಯನ್ನು ಮಾಡಿದ ರಘುಪತಿ ರಾವ್, ಮುರಳಿ ಅಡಿಗ, ಜನಾರ್ದನ್ ಭಟ್ ಮತ್ತು ಹರಿಪ್ರಸಾದ್ ರವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಆಶಾ ರಘುಪತಿ ರಾವ್ ಸ್ವಾಗತಿಸಿದರು. ಶಶಿಪ್ರಭ ಕಾರಂತ್ ವಂದಿಸಿದರು. ಅಮಿತಾ ಕ್ರಮಾಧಾರಿ ಹಾಗೂ ಜ್ಯೋತಿ ಲಕ್ಷ್ಮಿ ನಿರ್ವಹಿಸಿದರು.
ವಸುಧ ಕೃಷ್ಣರಾಜ , ರೂಪಾಶ್ರೀ ರಾಜೇಶ್ ಹಾಗೂ ಪದ್ಮಲತಾ ವಿಷ್ಣು, ದಿವ್ಯಾ ವಿ ಪಾಡಿಗಾರು ಹಾಗೂ ಸುನಿತಾ ಚೈತನ್ಯ ಸನ್ಮಾನಿತರನ್ನು ಮತ್ತು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.
ಪರಿಷತ್ತಿನ ಅಧ್ಯಕ್ಷ ಚಂದ್ರಕಾಂತ ಕೆ.ಎನ್., ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ, ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ ಮತ್ತು ಆರೋಗ್ಯ ಕಾರ್ಡ್ ನ ಸಂಚಾಲಕ ಚೈತನ್ಯ ಎಂ.ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಸುಮನಾ ಕಕ್ಕುಂಜೆಯವರ ನೇತೃತ್ವದಲ್ಲಿ ಮಹಿಳಾ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಕಾರ್ಕಳ : ಭಾರತೀಯ ಮಹಿಳೆಯರಲ್ಲಿ ಹೆಚ್ಚಾಗಿ ಸ್ತನ ಹಾಗೂ ಗರ್ಭಕೋಶದ ಕ್ಯಾನ್ಸರ್ ಕಂಡು ಬರುತ್ತದೆ. ಸಮಸ್ಸೆ ಕಾಣಿಸಿಕೊಂಡಾಗ ವೈದ್ಯರ ಬಳಿ ಹೋಗುವುದಕ್ಕೂ ಮುನ್ನಾ ಸಮಸ್ಯೆಗಳು ಬಾರದಂತೆ ಮುಂಜಾಗರೂಕತೆ ವಹಿಸಿಕೊಳ್ಳುವುದು ಅತೀ ಅಗತ್ಯ ಎಂದು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ರಿಪ್ರೊಡಕ್ಟಿವ್ ಮೆಡಿಸಿನ್ ನ ಅಸೋಸಿಯೇಟ್ ಪ್ರೊಫೆಸರ್ ಡಾ. ಅಂಜಲಿ ಸುನಿಲ್ ಮುಂಡ್ಕೂರು ಹೇಳಿದರು.