ಕಾರ್ಕಳ : ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯಸ್ಮರಣೆಯ ಅಂಗವಾಗಿ ʻಏಕ್ ಪೇಡ್ ಮಾ ಕೆ ನಾಮ್ʼ ತಾಯಿಯ ಹೆಸರಿನಲ್ಲಿ ಗಿಡ ನೆಡುವ ಅಭಿಯಾನದ ಭಾಗವಾಗಿ ಇಂದು ನನ್ನ ಮನೆಯಲ್ಲಿ ನನ್ನ ತಾಯಿಯೊಂದಿಗೆ ಸಸಿ ನೆಡಲಾಯಿತು ಎಂದು ಶಾಸಕ ವಿ.ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಸಕಲ ಜೀವಜಂತುಗಳ ಸಲಹುವ ಭೂಮಿ ತಾಯಿಯನ್ನು ಸಂರಕ್ಷಿಸುವ ನಮ್ಮ ಕರ್ತವ್ಯ ನಿಭಾಯಿಸೋಣ ಎಂದು ಶಾಸಕ ವಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.






































