ಕೋಟ್ಯಾಂತರ ರೂ. ಮೌಲ್ಯದ ಆಸ್ತಿ ತ್ಯಜಿಸಿ ಜೈನ ಸನ್ಯಾಸತ್ವ ಸ್ವೀಕರಿಸಿದ ತಾಯಿ-ಮಗ

Picture of RB NEWS

RB NEWS

Bureau Report

ಸೂರತ್: ಕೋಟ್ಯಾಂತರ ರೂ. ಮೌಲ್ಯದ ಆಸ್ತಿಯನ್ನು ತ್ಯಜಿಸಿದ ತಾಯಿ-ಮಗ ಜೈನ ಸನ್ಯಾಸ ದೀಕ್ಷೆ ಪಡೆದಿದ್ದಾರೆ.

ಬೆಂಗಳೂರು ಮೂಲದ ಉದ್ಯಮಿ ಮನೀಶ್ ಎಂಬುವವರ ಪತ್ನಿ ಸ್ವೀಟಿ (30) ಹಾಗೂ 11 ವರ್ಷದ ಮಗ ಹೃಧನ್ ಇತ್ತೀಚೆಗೆ ಜೈನ ಸನ್ಯಾಸ ದೀಕ್ಷೆ ಪಡೆದಿದ್ದಾರೆ. ತಾಯಿ-ಮಗನ ದೀಕ್ಷಾ ಸಮಾರಂಭವು ಗುಜರಾತ್‌ನ ಸೂರತ್‌ನಲ್ಲಿ ಜನವರಿಯಲ್ಲಿ ಬಹಳ ವಿಜೃಂಭಣೆಯಿಂದ ನಡೆದಿದೆ. ಇವರಿಬ್ಬರೂ ಈಗ ಸೂರತ್‌ನಲ್ಲಿ ನೆಲೆಸಿದ್ದಾರೆ.

ಜೈನ ದೀಕ್ಷೆಯ ನಂತರ ತಾಯಿ ಸ್ವೀಟಿಗೆ ಭಾವಶುದ್ಧಿ ರೇಖಾ ಶ್ರೀ ಜಿ ಹಾಗೂ ಮಗ ಹೃದನ್‌ಗೆ ಹಿತಶಯ್ ರತನವಿಜಯ್ ಜಿ. ಎಂದು ಮರು ನಾಮಕರಣ ಮಾಡಲಾಗಿದೆ. ಇದೀಗ ತಾಯಿ-ಮಗ ದೀಕ್ಷೆ ಸ್ವೀಕಾರ ಮಾಡಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top