ಕಾರ್ಕಳ : ಅತ್ತೂರು ಪರ್ಪಲೆಗಿರಿಯಲ್ಲಿ ಕಲ್ಕುಡ, ಕಲ್ಲುರ್ಟಿ, ತೂಕತ್ತೆರಿ ಸಪರಿವಾರ ದೈವಗಳ ಗುಡಿಗಳು ; ಮೇ 17ರಿಂದ 19ರ ವರೆಗೆ ದೈವ ಬಿಂಬ ಪ್ರತಿಷ್ಠೆ, ಸಿರಿ ಸಿಂಗಾರ ನೇಮೋತ್ಸವ

ಕಾರ್ಕಳ : ಅತ್ತೂರು ಪರ್ಪಲೆಗಿರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕಲ್ಕುಡ, ಕಲ್ಲುರ್ಟಿ, ತೂಕತ್ತೆರಿ ಸಪರಿವಾರ ದೈವಗಳ ಗುಡಿಯಲ್ಲಿ ಮೇ 17ರಿಂದ 19ರವರೆಗೆ ದೈವ ಬಿಂಬ ಪ್ರತಿಷ್ಠೆ, ಸಿರಿ ಸಿಂಗಾರ ನೇಮೋತ್ಸವ ನಡೆಯಲಿದೆ.
ಕರಿಯಕಲ್ಲಿನ ಮೇಲೆ ತಲೆಯೆತ್ತಿ ನಿಂತಿರುವ ಸಂಸ್ಕೃತಿ ಸಂಸ್ಕಾರಗಳನ್ನು ಎಲ್ಲೆಡೆ ಪಸರಿಸಿದ ಖ್ಯಾತಿವೆತ್ತ ಕಾರ್ಕಳ ಧರ್ಮಕಾರ್ಯದ ಪುಣ್ಯಭೂಮಿ.
ಇಲ್ಲಿರುವ ದೇವಸ್ಥಾನ, ದೈವಸ್ಥಾನ ಗಳು ವಿಶ್ವದ ಎಲ್ಲೆಡೆ ಕೂಡ ಹೆಸರನ್ನು ಪಡೆದವುಗಳು. ಕಾರ್ಕಳದ ಎತ್ತರದ ಪ್ರದೇಶದಲ್ಲಿ ಒಂದೆಡೆ 1432ನೇ ಸಾಲಿನಲ್ಲಿ ಬೃಹತ್ ಗೋಮಟೇಶ್ವರನ ಮೂರ್ತಿ ಸ್ಥಾಪನೆಯಾದರೆ ಇನ್ನೊಂದೆಡೆ ಗೋಮಟೇಶ್ವರ ಬೆಟ್ಟದಿಂದ ಸ್ವಲ್ಪವೇ ದೂರವಿರುವ ಪರ್ಪಲೆ ಬೆಟ್ಟ ಋಷಿ ಮುನಿಗಳ ತಪೋಭೂಮಿ. ಇಲ್ಲಿ ಮುನಿ ಗಳು ಯಾವ ರೀತಿಯಲ್ಲಿ ತಪಸ್ಸು ಮಾಡುತ್ತಿದ್ದರು ಎಂಬುದಕ್ಕೆ ಇಲ್ಲಿರುವ ಗುಹೆಗಳೇ ಸಾಕ್ಷಿ ಹೇಳುತ್ತವೆ. ಈ ಗುಹೆಯೊಳಗೆ ಹೊಕ್ಕಾಗ ಆಗುವ ಮನಶಾಂತಿ, ಏಕಾಗ್ರತೆ ಹಾಗೂ ಸುಂದರ ಪರಿಸರ ಇವೆಲ್ಲವೂ ಕೂಡ ಇಲ್ಲಿ ಸಾವಿರಾರು ವರ್ಷಗಳಿಂದಲೂ ಧರ್ಮ ಪ್ರಭಾವನೆ ಆಗುತ್ತಲೇ ಬರುತ್ತಿತ್ತು ಎಂಬು ದರ ಸ್ಪಷ್ಟ ನಿದರ್ಶನವಾಗಿದೆ.
1432ರಲ್ಲಿ ಕಾರ್ಕಳದಲ್ಲಿ ಗೋಮಟೇಶ್ವರನ ಬೃಹತ್ ಮೂರ್ತಿ ಸ್ಥಾಪನೆ ಆದ ಬಳಿಕ ಈ ವಿಗ್ರಹವನ್ನು ಕೆತ್ತಿದ ಬೀರ ಕಲ್ಕುಡನಿಗೆ ಉಡುಗೊರೆ ರೂಪದಲ್ಲಿ ಪರ್ಪಲೆಯ ಭೂಮಿಯನ್ನು ಉಡುಗೊರೆಯಾಗಿ ನೀಡುವುದಾಗಿ ಅರಸರು ಆಶ್ವಾಸನೆ ನೀಡಿದ್ದರಂತೆ.
ವಿಶೇಷ ಶಕ್ತಿಗಳನ್ನು ಹೊಂದಿದ್ದ ಕಲ್ಕುಡ ಹಾಗೂ ಆತನ ತಂಗಿ ಕಲ್ಲುರ್ಟಿ ತಿರುಪತಿ ಯಾತ್ರೆ ಮುಗಿಸಿ ಬಂದ ಬಳಿಕ ಪರ್ಪಲೆ ಗುಡ್ಡಕ್ಕೆ ಕಾಲಿಟ್ಟು ಇಲ್ಲಿಂದಲೇ ಮೂಡುಭಾಗದಲ್ಲಿ ಕಾಣುವ ಅರಸರ ಮನೆಗೆ ದೃಷ್ಟಿ ನೆಟ್ಟರು ಎಂದು ಜನಪದೀಯ ಐತಿಹ್ಯಗಳಿವೆ. ಹೀಗಾಗಿ ಇಂದಿಗೂ ಕೂಡ ಪರ್ಪಲೆ ಗಿರಿ ಬಹಳ ಪ್ರಾಮುಖ್ಯತೆ ಪಡೆದ ಬೆಟ್ಟವಾಗಿದೆ. ಇಂತಹ ಬೆಟ್ಟದ ಪುಣ್ಯ ಭೂಮಿಯು ಈ ತಲೆ ಮಾರಿನ ಭಕುತ ಜನರ ಭಕ್ತಿಗೆ ಪೂರಕವಾಗಿ ಪರ್ಪಲೆ ಕ್ಷೇತ್ರವಾಗಿ ತಲೆ ಎತ್ತಿ ನಿಲ್ಲಲು ಪ್ರಾರಂಭವಾಗಿದೆ.
ಪರ್ಪಲೆ ಪ್ರದೇಶವೇ ಒಂದು ಸುಂದರ ಪರಿಸರವಾಗಿದೆ. ಎತ್ತರದ ಪ್ರದೇಶದ ಮೇಲೆ ಹೋದವರಿಗೆ ಮಾತ್ರ ಈ ಬೆಟ್ಟದ ಅರಿವು ಮೂಡಲು ಸಾಧ್ಯ. ಈ ಬೆಟ್ಟದ ಮೇಲಕ್ಕೆ ಹೋದಾಗ ಸುತ್ತ ಮುತ್ತಲು ಕಾಣುವ ಹಲವಾರು ನಗರಗಳು ಬೆಳಗ್ಗಿನ ಹೊತ್ತು ಹಾಗೂ ಸಾಯಂ ಕಾಲದ ಹೊತ್ತು ಕಾಣುವ ಸಮುದ್ರ ಹಾಗೂ ಸೂರ್ಯನ ಸುಂದರ ರೂಪ ಇಲ್ಲಿ ಬೀಸುವ ತಂಪಾದ ಗಾಳಿ ಇವೆಲ್ಲವೂ ಏಕಾಗ್ರತೆ ಹಾಗೂ ಧರ್ಮ ಇವೆಲ್ಲವೂ ಇಲ್ಲಿ ಇರುವ ಪುಣ್ಯದ ಪ್ರತೀಕವಾಗಿದೆ.
ಅಭಿವೃದ್ಧಿ ಕಾರ್ಯ
ಇಂತಹ ಸುಂದರದ ಪ್ರದೇಶದಲ್ಲಿ ಕಲ್ಕುಡ ಹಾಗೂ ಸಪರಿವಾರ ದೈವಗಳ ಗುಡಿ ನಿರ್ಮಾಣದ ಕಾರ್ಯ ಭರದಿಂದ ಸಾಗಿ ಸಂಪೂರ್ಣ ಗೊಳ್ಳುತ್ತಿದೆ
ದಾನಿಗಳು ನೀಡುತ್ತಿರುವ ಸಹಕಾರ ದಿಂದ ದೈವದ ಗುಡಿಗಳ ನಿರ್ಮಾಣಕ್ಕೆ ಕೆತ್ತನೆ ಕಾರ್ಯ ಸಂಪೂರ್ಣ ಗೊಳ್ಳುತ್ತಿದೆ.
ಈ ಕ್ಷೇತ್ರದಲ್ಲಿನ ಒಂದು ವಿಚಾರ ಮಾತ್ರ ಬಹಳ ವಿಶೇಷವಾದುದು. ಕಲ್ಕುಡ ಗುಡಿಯನ್ನು ದಾನಿಗಳ ಸಹಕಾರದಿಂದ ಹಾಗೂ ಶಿಲ್ಪಿಗಳ ಸಹಕಾರದಿಂದಲೇ ನಿರ್ಮಾಣ ಮಾಡಲಾಗುತ್ತಿರುವುದು ಮಾತ್ರ ಧಾರ್ಮಿಕ ವಿಶೇಷವಾಗಿದೆ.
ವೇದಮೂರ್ತಿ ಶ್ರೀ ಕೇಂಜ ಶ್ರೀಧರ ತಂತ್ರಿಗಳು, ಕುತ್ಯಾರು ಇವರ ಮಾರ್ಗ ದರ್ಶನದಲ್ಲಿ ಪೂಜಾದಿ ಕಾರ್ಯಗಳು, ದೇವತಾ ಕಾರ್ಯಗಳು ಆರಂಭವಾಗಿದೆ. ಪ್ರಮಲ್ ಕುಮಾರ್ ವಾಸ್ತು ವಿನ್ಯಾಸ ನೀಡಿದ್ದಾರೆ.
ಪ್ರತಿ ತಿಂಗಳ ಸಂಕ್ರಾಂತಿಯ ದಿನ ಭಕ್ತರು ಈ ಕ್ಷೇತ್ರಕ್ಕೆ ಬಂದು ದೈವದ ಸಿರಿಮುಡಿ ಗಂಧ ಪ್ರಸಾದವನ್ನು ಪಡೆಯುತ್ತಾರೆ. ಈ ಕ್ಷೇತ್ರದಲ್ಲಿ ಹಲವಾರು ಪವಾಡಗಳು ನಡೆಯುತ್ತಿರುವ ಅನುಭವ ಹಲವರಿಗೆ ಆಗಿದ್ದು ಇದೊಂದು ವಿಶೇಷ ಕ್ಷೇತ್ರವಾಗಿ ರೂಪುಗೊಳ್ಳುವ ಲಕ್ಷಣವಾಗಿದೆ. ಈ ಕ್ಷೇತ್ರದ ಅಭಿವೃದ್ದಿಗಾಗಿ ಎಲ್ಲಾ ಜನರ ಸಹಕಾರವನ್ನು ಸಮಿತಿ ಕೋರಿದೆ.
ಈ ಬೆಟ್ಟ ಅತೀ ಎತ್ತರವಾದ ಬೆಟ್ಟ ವಾದುದರಿಂದ ಇಲ್ಲಿ ಎಲ್ಲಾ ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸಬೇಕಿದೆ. ಹೀಗಾಗಿ ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದು ಬಹಳ ತ್ರಾಸದಾಯಕ. ಹೀಗಾಗಿ ಎಲ್ಲಾ ಭಕ್ತರು ಒಗ್ಗೂಡಿ ಈ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕಾರ ನೀಡ ಬೇಕಿದೆ.
ಕಲ್ಲಿನ ವ್ಯಾಪಾರಿಗಳು ಕಲ್ಲು, ಶಿಲ್ಪಿಗಳು ಕೆತ್ತನೆ ಕೆಲಸ, ಕಲ್ಲಿನ ವ್ಯಾಪಾರಿಗಳು ಕಲ್ಲನ್ನು ತುಂಡರಿಸುವ ಕೆಲಸ, ಮರದ ಕೆತ್ತನೆಯ ಶಿಲ್ಪಿಯ ಉದಾರ ಕೊಡುಗೆ, ಕ್ರೇನ್ಗಳ ಉಚಿತ ಸೇವೆ, ಲಾರಿ ಮುಂತಾದ ಉಚಿತ ಸೇವೆ ಸೇರಿದಂತೆ ಕಲ್ಕುಡ, ಕಲ್ಲುರ್ಟಿ, ತೂಕತ್ತೇರಿ ದೈವಗಳ ಗರ್ಭಗುಡಿಯ ಕೆಲಸ ಅವರವರ ವೃತ್ತಿ ವ್ಯಾಪಾರಿಗಳಿಂದ ಉಚಿತವಾಗಿ ನಡೆಯುತ್ತಿದೆ. ಉಳಿದಂತೆ ಸುತ್ತು ಪೌಳಿಯ ಕೆಲಸ, ಅಂಗಣಕ್ಕೆ ನೆಲಹಾಸು, ದೀಪಗೋಪುರ, ಕೊಡಿಯಡಿಗಳನ್ನು ಊರ ಪರವೂರ ದಾನಿಗಳು ನಿರ್ಮಿಸಿ ಕೊಟ್ಟಿದ್ದಾರೆ.
ಸಮಿತಿಗಳು
ಶ್ರೀ ಕ್ಷೇತ್ರ ಅತ್ತೂರು ಕೃಷ್ಣಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ (ರಿ) ಕಾರ್ಕಳ
ಶ್ರೀ ಸುಭಾಸ್ ಚಂದ್ರ ಹೆಗ್ಡೆ ಅಧ್ಯಕ್ಷರು, ಶ್ರೀ ಸತ್ಯೇಂದ್ರ ಭಟ್ ಕಾರ್ಯದರ್ಶಿ,
ಶ್ರೀ ಚೇತನ್ ಕೋಟ್ಯಾನ್ ಕೋಶಾಧಿಕಾರಿ, ಶ್ರೀ ಬಾಲಕೃಷ್ಣ ಹೆಗ್ಡೆ ಗುರುಸ್ವಾಮಿ ಟ್ರಸ್ಟಿ,
ಶ್ರೀ ಮನ್ಮಥ ಜೆ. ಶೆಟ್ಟಿ ಟ್ರಸ್ಟಿ, ಶ್ರೀ ಚಂದ್ರಶೇಖರ ಶೆಟ್ಟಿ ಟ್ರಸ್ಟಿ, ಶ್ರೀ ಪ್ರಶಾಂತ್ ನಾಯಕ್ ಟ್ರಸ್ಟಿ
ಅತ್ತೂರು ಪರ್ಪಲೆಗಿರಿ ಪುನರುತ್ಥಾನ ಸಮಿತಿ, ಕಾರ್ಕಳ
ಗೌರವಾಧ್ಯಕ್ಷರು: ಶ್ರೀ ವಿ. ಸುನಿಲ್ ಕುಮಾರ್ ಶಾಸಕರು, ಕಾರ್ಕಳ, ಶ್ರೀ ಬೋಳ ಪ್ರಭಾಕರ ಕಾಮತ್ ಉದ್ಯಮಿಗಳು, ಕಾರ್ಕಳ, ಶ್ರೀ ಎಮ್. ಕೆ. ವಿಜಯ ಕುಮಾರ್ ಹಿರಿಯ ವಕೀಲರು, ಕಾರ್ಕಳ, ಶ್ರೀ ಎನ್. ವಿನಯ ಹೆಗ್ಡೆ ಅಧ್ಯಕ್ಷರು, ನಿಟ್ಟೆ ವಿದ್ಯಾಸಂಸ್ಥೆ, ಶ್ರೀ ವಿಠಲ ಶೆಟ್ಟಿ ಬಲಿಪಗುತ್ತು, ಅತ್ತೂರು, ಶ್ರೀ ಕೆ. ಜಯರಾಮ ಪ್ರಭು ಆಡಳಿತ ಮೊಕ್ತೇಸರರು, ಶ್ರೀ ವೆಂಕಟರಮಣ ದೇವಸ್ಥಾನ, ಕಾರ್ಕಳ
ಕಾರ್ಯಕಾರಿ ಸಮಿತಿ
ಡಾ| ರವೀಂದ್ರ ಶೆಟ್ಟಿ ಬಜಗೋಳಿ ಅಧ್ಯಕ್ಷರು,
ಶ್ರೀ ಬೋಳ ಪ್ರಶಾಂತ್ ಕಾಮತ್ ಕಾರ್ಯಾಧ್ಯಕ್ಷರು,
ಶ್ರೀ ಎಸ್.ನಿತ್ಯಾನಂದ ಪೈ ಕೋಶಾಧಿಕಾರಿ,
ವೇದಮೂರ್ತಿ ಕುತ್ಯಾರು ಕೇಂಜ ಶ್ರೀಧರ ತಂತ್ರಿ
ಶ್ರೀ ಕ್ಷೇತ್ರದ ತಂತ್ರಿಗಳು,
ಶ್ರೀ ಪ್ರಸಾದ್ ಶೆಟ್ಟಿ ಕುತ್ಯಾರು ಶ್ರೀ ಕ್ಷೇತ್ರದ ಇಂಜಿನಿಯರ್,
ಶ್ರೀ ಕುಡುಪು ಕೃಷ್ಣರಾಜ ತಂತ್ರಿ ದೇವಾಲಯದ ವಾಸ್ತು ತಜ್ಞರು,
ಶ್ರೀ ಪ್ರಮಲ್ ಕುಮಾರ್ ಕಾರ್ಕಳ ದೈವಾಲಯದ ವಾಸ್ತು ತಜ್ಞರು
ಗೌರವ ಸಲಹೆಗಾರರು: ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಶಾಸಕರು, ಕಾಪು, ಶ್ರೀ ಯಶ್ಪಾಲ್ ಸುವರ್ಣ ಶಾಸಕರು, ಉಡುಪಿ, ಶ್ರೀ ರಘುಪತಿ ಭಟ್ ಮಾಜಿ ಶಾಸಕರು, ಉಡುಪಿ, ಶ್ರೀ ಉದಯ ಕುಮಾರ್ ಶೆಟ್ಟಿ ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಮುನಿಯಾಲು, ಶ್ರೀ ಭಾಸ್ಕರ್ ಎಸ್. ಕೋಟ್ಯಾನ್ ಅಧ್ಯಕ್ಷರು, ವಿ.ಹಿಂಪ. ಕಾರ್ಕಳ ತಾಲೂಕು ಶ್ರೀ ಸುಹಾಸ್ ಹೆಗ್ಡೆ ಚಾವಡಿಮನೆ ನಂದಳಿಕೆ, ಶ್ರೀ ವಿನೋದ್ ದೇವದಾಸ ಕಾಮತ್, ಮೂಲ್ಕಿ, ಶ್ರೀ ಸೋಮದೇವ ನಾರಾಯಣ ಮರಾಠೆ. ಜ್ಯೋತಿಷಿಗಳು, ಧಾರವಾಡ, ಶ್ರೀ ಗಣಪತಿ ಹೆಗ್ಡೆ, ಉದ್ಯಮಿಗಳು, ಕಾರ್ಕಳ, ಶ್ರೀ ಬೋಳ ಶ್ರೀನಿವಾಸ ಕಾಮತ್, ಗಾಯತ್ರಿ ಎಕ್ಸ್ಪೋರ್ಟ್ಸ್, ಗುಂಡ್ಯಡ್ಕ, ಶ್ರೀ ಮಹೇಶ್ ಶೆಟ್ಟಿ, ಕುಡುಪುಲಾಜೆ, ಉದ್ಯಮಿಗಳು, ಮುಂಬೈ, ಶ್ರೀ ರಾಜೇಶ್ ಶೆಣೈ ಪಂಚಮಿ ಕ್ಯಾಶ್ಯೂಸ್, ಕಾರ್ಕಳ, ಡಾ| ಸುಧಾಕರ ಶೆಟ್ಟಿ ಅಧ್ಯಕ್ಷರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್, ಗಣಿತನಗರ, ಶ್ರೀ ಕಡಂದಲೆ ಸುರೇಶ್ ಭಂಡಾರಿ, ಸಂಸ್ಥಾಪಕ ಅಧ್ಯಕ್ಷರು ವಿಶ್ವ ಭಂಡಾರಿ ಮಹಾಮಂಡಲ ಫೌಂಡೇಶನ್, ಶ್ರೀ ಬೆಳ್ವೆ ಗಣೇಶ್ ಕಿಣಿ, ಉದ್ಯಮಿಗಳು ಹೆಬ್ರಿ, ಡಾ| ಸುಧೀರ್ ಹೆಗ್ಡೆ, ಕಾಬೆಟ್ಟು, ನೇತ್ರ ತಜ್ಞರು, ಮಂಗಳೂರು, ಶ್ರೀ ರಾಮಕೃಷ್ಣ ಆಚಾರ್ಯ ಆಡಳಿತ ನಿರ್ದೇಶಕರು, S.k f ಅಲಂಗಾರು, ಶ್ರೀ ಮಹೇಶ್ ಠಾಕೂರ್, ಮೊಕ್ತೇಸರರು, ಶ್ರೀ ಉಮಾಮಹೇಶ್ವರ ದೇವಸ್ಥಾನ ಶಿವಪಾಡಿ, ಮಣಿಪಾಲ

ಕಾರ್ಕಳದ ಅತ್ತೂರು ಪರ್ಪಲೆಗಿರಿಯ ಕಲ್ಕುಡ, ಕಲ್ಲುರ್ಟಿ, ತೂಕತ್ತೇರಿ ಹಾಗು ಸ ಪರಿವಾರ ದೈವಗಳ ಹಸಿರು ಹೊರೆ ಕಾಣಿಕೆ ಮೆರವಣಿಗೆಯು ಮೇ 17 ರಂದು ಶನಿವಾರ ನಡೆಯಲಿದೆ.
ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಕಾರ್ಕಳದ ಬಂಡಿ ಮಠದಲ್ಲಿ ಹಸಿರು ಹೊರೆ ಕಾಣಿಕೆಯನ್ನು ಸ್ವೀಕಾರ ಮಾಡಲಾಗುವುದು ಎಂದು ಸಮಿತಿ ತಿಳಿಸಿದೆ.
ಹೊರೆ ಕಾಣಿಕೆಗೆ ಅಕ್ಕಿ ನೀಡುವವರು ಸೋನಾ ಮಸೂರಿಯ ಸೋನಾ ಬ್ರಾಂಡ್ ಅಥವಾ ಆಪಲ್ ಬ್ರಾಂಡ್ ನೀಡುವಂತೆ ಸಮಿತಿ ಮನವಿ ಮಾಡಿದೆ
ಮಾಹಿತಿಗಾಗಿ
7760561629
9986069141
9945857561





















