ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಜಂಟಿಯಾಗಿ ಡ್ರೋನ್‌ಗಳನ್ನು ಬಳಸಿಕೊಂಡು ವೈಮಾನಿಕ ಮಾದರಿ ಸಾರಿಗೆ ಮೂಲಕ ಆರೋಗ್ಯ ವಿತರಣಾ (ಮಾದರಿ -ಸ್ಯಾಂಪಲ್)ವ್ಯವಸ್ಥೆಯ ಉದ್ಘಾಟನೆ
ಇಂದು ಮೊದಲ ಮಾದರಿ (ಸ್ಯಾಂಪಲ್) ಅನ್ನು ಕಾರ್ಕಳದ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆಯಿಂದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ರವಾನಿಸಲಾಯಿತು.


ಮಣಿಪಾಲ, 10 ಏಪ್ರಿಲ್ 2024: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ ), ಮಣಿಪಾಲ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐ ಸಿ ಎಂ ಆರ್ ) ಡ್ರೋನ್ ಮೂಲಕ ಬಹು ಅಗತ್ಯ ವೈಮಾನಿಕ ಆಧಾರಿತ ಆರೋಗ್ಯ ವಿತರಣಾ ವ್ಯವಸ್ಥೆಯ ಯೋಜನೆಯನ್ನು ಜಂಟಿಯಾಗಿ ಉದ್ಘಾಟಿಸಲಾಯಿತು . ಕರ್ನಾಟಕದ ಪೆರಿಫೆರಲ್ ಮತ್ತು ಟರ್ಷಿಯರಿ ಕೇರ್ ಆಸ್ಪತ್ರೆಗಳ ನಡುವೆ ಆಂಕೊಪಾಥೋಲಾಜಿಕಲ್ ಮಾದರಿ (ಸ್ಯಾಂಪಲ್)ಗಳನ್ನು ಸಾಗಿಸಲು ಡ್ರೋನ್‌ಗಳನ್ನು ಬಳಸಿಕೊಳ್ಳುವ ಗುರಿಯನ್ನು ಈ ಯೋಜನೆಯು ಹೊಂದಿದೆ.
ಈ ಉಪಕ್ರಮದ ಮುಖ್ಯ ಉದ್ದೇಶವು ಫ್ರೋಜನ್ ಮಾದರಿ (ಸ್ಯಾಂಪಲ್) ಗಳಂತಹ ವಸ್ತುಗಳನ್ನು ದೂರದ ಸ್ಥಳಗಳ ಬಾಹ್ಯ ಆಸ್ಪತ್ರೆಗಳಿಂದ ಟರ್ಷಿಯರಿ ಕೇರ್ ಆಸ್ಪತ್ರೆಗಳಿಗೆ ವೈಮಾನಿಕ ವಿಧಾನಗಳನ್ನು ಬಳಸಿಕೊಂಡು ವರ್ಗಾಯಿಸುವ ಕಾರ್ಯಸಾಧ್ಯತೆಯನ್ನು ನಿರ್ಣಯಿಸುವುದು. ಈ ಪ್ರಯತ್ನವು ಶಸ್ತ್ರಚಿಕಿತ್ಸಕರು ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಮಾದರಿಗಳನ್ನು ಪರೀಕ್ಸಿಸಿ ಅಗತ್ಯವಿರುವ ಕಾರ್ಯವಿಧಾನಗಳನ್ನು ನಿರ್ವಹಿಸಲು ಅನುವು ಮಾಡಿಕೊಡುವ ಮೂಲಕ ಆರೋಗ್ಯ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ನಿರೀಕ್ಷಿಸಲಾಗಿದೆ.
ಮಾನವರಹಿತ ವೈಮಾನಿಕ ವಾಹನಗಳು (UAVs), ಸಾಮಾನ್ಯವಾಗಿ ಡ್ರೋನ್‌ಗಳು ಎಂದು ಕರೆಯಲ್ಪಡುತ್ತವೆ, ಆರೋಗ್ಯ ರಕ್ಷಣೆ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಭಾರತದಲ್ಲಿ, ಗ್ರಾಮೀಣ ಪ್ರದೇಶಗಳಿಂದ ಇಂಟ್ರಾಆಪರೇಟಿವ್ ಮಾದರಿ (ಸ್ಯಾಂಪಲ್ ) ಸಾರಿಗೆಯ ಕೊರತೆಯನ್ನು ಇವುಗಳು ನೀಗಿಸುತ್ತವೆ. ಈ ಯೋಜನೆಯು ತ್ವರಿತ ಸಾರಿಗೆ ಉದ್ದೇಶಕ್ಕಾಗಿ ಡ್ರೋನ್‌ಗಳನ್ನು ಬಳಸಿಕೊಳ್ಳುವ ಕಾರ್ಯಸಾಧ್ಯತೆ, ಉಪಯುಕ್ತತೆ ಮತ್ತು ವೆಚ್ಚ-ಪರಿಣಾಮಕಾರಿತ್ವವನ್ನು ಅನ್ವೇಷಿಸಲು ಪ್ರಯತ್ನಿಸುತ್ತದೆ. ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ, ಮಾದರಿಗಳನ್ನು ತ್ವರಿತವಾಗಿ ಸಾಗಿಸಬಹುದು, ಶಸ್ತ್ರಚಿಕಿತ್ಸಾ ವಿಧಾನಗಳ ಸಮಯದಲ್ಲಿ ಫ್ರೋಜನ್ ಮಾದರಿಗಳ ಪರೀಕ್ಷೆ ಮೂಲಕ ಸುಧಾರಿತ ರೋಗನಿರ್ಣಯಗಳಿಗೆ ತಕ್ಷಣದ ಪ್ರವೇಶವನ್ನು ಒದಗಿಸುತ್ತದೆ. ಈ ಯೋಜನೆಯು ಯಶಸ್ವಿಯಾದರೆ, ಈ ಸಂಶೋಧನೆಯು ಗ್ರಾಮೀಣ ಆಸ್ಪತ್ರೆಗಳು ಮತ್ತು ಪ್ರಯೋಗಾಲಯ ಸೌಲಭ್ಯಗಳ ನಡುವೆ ಸಂಪರ್ಕವನ್ನು ಸ್ಥಾಪಿಸುವ ಮೂಲಕ ಆರೋಗ್ಯ ವಿತರಣೆಯಲ್ಲಿ ಕ್ರಾಂತಿಗೊಳಿಸಬಹುದು, ಇದರಿಂದಾಗಿ ಭೌಗೋಳಿಕವಾಗಿ ಪ್ರವೇಶಿಸಲಾಗದ ಪ್ರದೇಶಗಳಲ್ಲಿ ರೋಗಿಗಳಿಗೆ ಸಂಕೀರ್ಣವಾದ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಸುಗಮಗೊಳಿಸುತ್ತದೆ.
ಡಾ . ರಾಜೀವ್ ಬಹ್ಲ್, ಕಾರ್ಯದರ್ಶಿ, ಆರೋಗ್ಯ ಸಂಶೋಧನಾ ವಿಭಾಗ, ಭಾರತ ಸರ್ಕಾರ ಮತ್ತು ಡೈರೆಕ್ಟರ್ ಜನರಲ್ ಐ ಸಿ ಎಂ ಆರ್ ಹಾಗೂ ಡಾ ಅತುಲ್ ಗೋಯೆಲ್, ಆರೋಗ್ಯ ಸೇವೆಗಳ ಮಹಾನಿರ್ದೇಶಕರು, DGHS, MoHFW ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು . ಡಾ. ಸಂಘಮಿತ್ರ ಪತಿ, ಹೆಚ್ಚುವರಿ ಮಹಾನಿರ್ದೇಶಕರು (ADG),ಐ ಸಿ ಎಂ ಆರ್ ಮತ್ತು ನಿರ್ದೇಶಕರು, ICMR-RMRC, ಭುವನೇಶ್ವರ್, ಶ್ರೀಮತಿ ಅನು ನಗರ್ , ಜಂಟಿ ಕಾರ್ಯದರ್ಶಿ, ಆರೋಗ್ಯ ಸಂಶೋಧನಾ ಇಲಾಖೆ, ಭಾರತ ಸರ್ಕಾರ. ಡಾ. ಕಾಮಿನಿ ವಾಲಿಯಾ, ವಿವರಣಾತ್ಮಕ ಸಂಶೋಧನೆ ವಿಭಾಗ, ಐಸಿಎಂಆರ್-ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್, ಕುಲಪತಿಗಳು ಮಾಹೆ ಮಣಿಪಾಲ , ಡಾ ಶರತ್ ಕೆ ರಾವ್, ಸಹ ಕುಲಪತಿ (ಆರೋಗ್ಯ ವಿಜ್ಞಾನ) ಮಾಹೆ, ಮಣಿಪಾಲ ಗೌರವ ಅತಿಥಿಗಳಾಗಿದ್ದು, ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ ಎಚ್ ಎಸ್ ಬಲ್ಲಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಡ್ರೋನ್ ಯೋಜನೆಯನ್ನು ಉದ್ಘಾಟಿಸಿದ ಡಾ. ರಾಜೀವ್ ಬಹ್ಲ್, ಅವರು ಆರೋಗ್ಯ ರಕ್ಷಣೆಯ ವಿತರಣಾ ಉಪಕ್ರಮದ ನವೀನ ವಿಧಾನವನ್ನು ಶ್ಲಾಘಿಸಿದರು, ವಿಶೇಷವಾಗಿ ಕಡಿಮೆ ಸಾರಿಗೆ ವ್ಯವಸ್ಥೆಯುಳ್ಳ ಗ್ರಾಮೀಣ ಪ್ರದೇಶಗಳಲ್ಲಿ ಮಾದರಿ( ಸ್ಯಾಂಪಲ್) ಗಳನ್ನು ಸಾಗಿಸಲು ಇರುವ ಸಾರಿಗೆ ತೊಡಕುಗಳು ಮತ್ತು ಈ ಯೋಜನೆಯ ಮೂಲಕ ರೋಗನಿರ್ಣಯ ಸೇವೆಗಳನ್ನು ಕ್ರಾಂತಿಗೊಳಿಸುವ ಸಾಮರ್ಥ್ಯವನ್ನು ಎತ್ತಿ ತೋರಿಸಿದರು.






































