ಕಲ್ಯಾ ಕೈರಬೆಟ್ಟು : ಅಕ್ರಮ ಮದ್ಯ ವಶ

Picture of RB NEWS

RB NEWS

Bureau Report

ಕಲ್ಯಾ ಕೈರಬೆಟ್ಟು : ಅಕ್ರಮ ಮದ್ಯ ವಶ


ಕಾರ್ಕಳ: ಚುನಾವಣಾ ಸಂದರ್ಭದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಅಬಕಾರಿ ಪೊಲೀಸರು, ಅಕ್ರಮ ಮದ್ಯದ ಬಾಟಲಿಗಳನ್ನು ಕಲ್ಯಾ ಗ್ರಾಮದ ಕೈರಬೆಟ್ಟು ನೆಲ್ಲಿಗುಡ್ಡೆ ಎಂಬಲ್ಲಿ ಭಾನುವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.
ಸ್ಥಳೀಯ ನಿವಾಸಿ ಬಾಲಕೃಷ್ಣ ಪೂಜಾರಿ ಎಂಬವರಿಗೆ ಸೇರಿದ ಮದ್ಯ ಇದಾಗಿದ್ದು, ದಾಳಿ ನಡೆಸಿದ ವೇಳೆ ಆರೋಪಿ ಪರಾರಿಯಾಗಿದ್ದಾನೆ. ಆತ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ೪೨.೬೨ ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ೨೦ ವರ್ಷಗಳಿಂದ ಅಕ್ರಮ ಮದ್ಯ ಮಾರಾಟದಲ್ಲಿ ಈ ಆರೋಪಿ ತೊಡಗಸಿಕೊಂಡಿದ್ದು, ಅನೇಕ ಬಾರಿ ಪ್ರಕರಣ ದಾಖಲಿಸಿದ್ದರೂ ಪ್ರಯೋಜನವಾಗಿಲ್ಲ. ಈ ಬಾರಿ ಚುನಾವಣೆಯ ನಿರ್ಬಂಧವಿದ್ದರೂ, ಮಾರಾಟ ನಿಲ್ಲಿಸದೆ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top