ಹೊಸ್ಮಾರಿಗೆ ಅಗಮಿಸಲಿರುವ ಪರಮಪೂಜ್ಯ ಆರ್ಯಿಕ ಶ್ರೀ 105 ಮುಕ್ತಿ ಶ್ರೀ ಮಾತಾಜೀ
ಕಾರ್ಕಳ : ಪರಮಪೂಜ್ಯ ಆರ್ಯಿಕ ಶ್ರೀ 105 ಮುಕ್ತಿ ಶ್ರೀ ಮಾತಾಜಿ ಯವರ37 ನೇ ಚಾತುರ್ಮಾಸ ವರ್ಷಾಯೋಗ ವನ್ನು ಹೊಸ್ಮಾರು ಶ್ರೀ ಕ್ಷೇತ್ರ ಸಿದ್ಧರವನ ಭಗವಾನ್ ಶ್ರೀ 1008ಮಹಾವೀರ ಸ್ವಾಮಿ ಬಸದಿಯಲ್ಲಿ ಆಚರಿಸುವ ನಿರ್ಧರಿಸಲಾಗಿದೆ.
ಆ ಪ್ರಯುಕ್ತ ಪೂಜ್ಯ ಮಾತಾಜಿಯವರು ಜುಲಾಯಿ 17ರ ಬೆಳಿಗ್ಗೆ 7:30 ಕ್ಕೆ ಉದ್ಯಮಿ ಪ್ರೇಮ್ ಕುಮಾರ್ ರವರ ಮನೆಯಿಂದ ಮಂಗಲ ವಿಹಾರ ಹೊರಟು ಬೆಳಿಗ್ಗೆ 8:30ಕ್ಕೆ ಬಸದಿಗೆ ಪುರಪ್ರವೇಶ ಮಾಡಲಿದ್ದಾರೆ.
ಧರ್ಮ ಪ್ರೇಮಿ ಬಂಧುಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಮಯಕ್ಕೆ ಸರಿಯಾಗಿ ಆಗಮಿಸಿ ಈ ಶುಭಕಾರ್ಯದಲ್ಲಿ
ಭಾಗವಹಿಸಿ, ಮೆರವಣಿಗೆಯ ಮೆರಗನ್ನು ಹೆಚ್ಚಿಸುವ ಮೂಲಕ ಧರ್ಮಪ್ರಭಾವನೆಯ ಜೊತೆಗೆ ಪುಣ್ಯಲಾಭವನ್ನು ಪಡೆದುಕೊಳ್ಳಬೇಕಾಗಿ ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮ ಪೂರ್ವಭಾಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಪ್ರೇಮ್ ಕುಮಾರ್ (ಅಧ್ಯಕ್ಷರು ಚಾತುರ್ಮಾಸ ಸಮಿತಿ) ಶಿಶುಪಾಲ್ ಜೈನ್ ಬೈರ್ನಡೆ ಗುತ್ತು (ಕಾರ್ಯದರ್ಶಿಗಳು ಚಾತುರ್ಮಾಸ ಸಮಿತಿ ) ಅರುಣಾ ಭೋಜರಾಜ್ ಹೆಗ್ಡೆ ( ಕೋಶಾಧಿಕಾರಿಗಳು
ಚಾತುರ್ಮಾಸ ಸಮಿತಿ) ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಆಡಳಿತ ಸಮಿತಿ ಸಿದ್ಧರವನ ಬಸದಿ ಹೊಸ್ಮಾರು ಉಪಸ್ಥಿತರಿದ್ದರು.






































