ಹೊತ್ತಿ ಉರಿದ ಹಳೆಯ ಕಟ್ಟಡ : ಆನೆಕೆರೆ ಪರಿಸರದಲ್ಲಿ ಘಟನೆ

Picture of RB NEWS

RB NEWS

Bureau Report


ಕಾರ್ಕಳ: ನಗರದ ಆನೆಕೆರೆ ಪರಿಸರದಲ್ಲಿ ಹಳೆಯದಾದ ಕಟ್ಟಡವೊಂದರಲ್ಲಿ ಅಗ್ನಿ ಕಾಣಿಸಿಕೊಂಡಿದ್ದು, ಕ್ಷಣಮಾತ್ರದಲ್ಲಿ ಇಡೀ ಕಟ್ಟಡವನ್ನೇ ಆವರಿಸಿಕೊಂಡಿದ್ದು, ಅಗ್ನಿಶಾಮಕದಳದವರು ನಡೆಸಿದ ಕಾರ್ಯಚರಣೆಯಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದೆ.
ಉದ್ಯಮಿ ಗಣಪತಿ ಹೆಗ್ಡೆ ಎಂಬವರಿಗೆ ಸೇರಿದ ಕಟ್ಟಡದಲ್ಲಿ ಸದಾ ನಾಮಾಂಕಿತದ ಕುಶನ್ ವರ್ಕ್ಸ್ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದೆ.
ಅಗ್ನಿಶಾಮಕದಳದವರು ಅಗಮಿಸಿ ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿರುವುದರಿಂದ ಪರಿಸರದ ಹಲವು ವ್ಯಾಪಾರ ಮಳಿಗೆಗಳಿಗೆ ತಗಲುತ್ತಿದ್ದ ಬೆಂಕಿಯ ಜ್ವಾಲೆ ಹತೋಟಿಗೆ ಬಂದಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top