ಹೊಂಡಕ್ಕೆ‌ ಮುಕ್ತಿ ಯಾವಾಗ?

Picture of RB NEWS

RB NEWS

Bureau Report


ಕಾರ್ಕಳ : ಅಮೃತಾ ಯೋಜನೆಯಡಿಯಲ್ಲಿ ಪೈಪ್ ಅಳವಡಿಸಿದ ಸಂದರ್ಭದಲ್ಲಿ ತೋಡಲಾಗಿದ್ದ ಹೊಂಡದ ಕೆಲ‌ಭಾಗಗಳಲ್ಲಿ ಹಾಗೆ ಬಿಟ್ಟು ಹೋಗಿದ್ದು, ಸ್ಥಳೀಯರು ವಿನೂತನ ರೀತಿಯಲ್ಲಿ ಪ್ರತಿಭಟಿಸಿದ ಘಟನೆ ನಡೆದಿದೆ.
ಕಾರ್ಕಳ ನ್ಯಾಯಾಲಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕಳೆದ ಎರಡು ವಾರದ ಹಿಂದೆ‌ ಪೈಪ್ ಅಳವಡಿಸಲೆಂದು ಇದೇ ರಸ್ತೆಯಲ್ಲಿ ಹೊಂಡ ತೋಡಾಲಾಗಿತ್ತು.
ಕೆಲ ಭಾಗಗಳಲ್ಲಿ ಹೊಂಡ ಮುಚ್ಚದೇ ಹೋದುದರಿಂದ ನ್ಯಾಯಾಲಯ ರಸ್ತೆ ಅಪಾಯಕಾರಿ ರಸ್ತೆಯಾಗಿ ಪರಿಣಮಿಸಿದೆ‌.
ಕರ್ನಾಟಕ ಕುಡಿಯುವ ನೀರು ಹಾಗೂ ಒಳಚರಂಡಿ ಮಂಡಳಿಯು ಈ ಕಾಮಗಾರಿ ನಡೆಸಿದೆ. ಈ ಕುರಿತು‌ ಇಲಾಖಾ ಸಹಾಯಕ ಇಂಜಿನಿಯರ್ ಹಾಗೂ ಪುರಸಭಾ ಆಡಳಿತದ ಗಮನಕ್ಕೆ‌ ತಂದಿದ್ದರೂ ಯಾವುದೇ ಪ್ರಯೋಜನ ವಾಗದೇ ಇದ್ದಾಗ ಸ್ಥಳೀಯರು ಪ್ರತಿಭಟನೆ ನಡೆಸಿ ಫಲಕ ಅಳವಡಿಸಿದ್ದಾರೆ.

ಕಾರ್ಕಳ ಪುರಸಭಾ ಮಾಜಿ ಕೌನ್ಸಿಲರ್ ಪ್ರಕಾಶ್ ರಾವ್ ನೇತೃತ್ವದಲ್ಲಿ ವಿನೂತ‌ನ ಪ್ರತಿಭಟನಾ ಕಾರ್ಯಕ್ರಮ ನಡೆದಿದೆ.

ವಕೀಲ ಪದ್ಮಪ್ರಸಾದ್ ಜೈನ್, ಸುರೇಶ್ ಶೆಣೈ, ಬ್ರಿಜೇಶ್, ರೇಷ್ಮಾ, ಪಾವನ ಆ ಸಂದರ್ಭದಲ್ಲಿ ಇದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top