ಕಾರ್ಕಳ : ಹೆರ್ಮುಂಡೆ ತರುಣ ಭಾರತ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಉದ್ಘಾಟನೆ ಮತ್ತು ಶೈಕ್ಷಣಿಕ ಪ್ರೋತ್ಸಾಹ ಧನ – 2024 ವಿತರಣಾ ಸಮಾರಂಭವನ್ನು ಹೆರ್ಮುಂಡೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಯಿತು.
ಭಾರತೀಯ ಭೂಸೇನೆಯ ಮಾಜಿ ಸೈನಿಕ ಗಣೇಶ ಪೂಜಾರಿಯವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಗೌರವ ಸಲ್ಲಿಸಿದರು.
ಬೆಳ್ಮಣ್ಣು ಸರ್ವಜ್ಞ ತಂತ್ರಿ ಇವರು ದೀಪ ಪ್ರಜ್ವಲಿಸಿ ಉದ್ಘಾಟನಾ ಕಾರ್ಯವನ್ನು ನೆರವೇರಿಸಿದರು.
ಎಚ್. ಆನಂದ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರಜ್ವಲ್ ಕುಮಾರ್ ಜೈನ್ ಜಾರ್ಕಳ-ಮುಂಡ್ಲಿ, ಜಯಲಕ್ಮಿ ನಾಯ್ಕ ಶಿವರಾಜ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೀಕ್ಷ ಮತ್ತು ಬಳಗ ಪ್ರಾರ್ಥನೆಗೈದರು. ಶ್ರೀಪಾದ ಹೆಗ್ಡೆ ಸ್ವಾಗತಿಸಿದರು. ಸತೀಶ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. , ಮಿಥುನ್ ನಾಯ್ಕ ಶೈಕ್ಷಣಿಕ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮಬ ನಿರ್ವಹಿಸಿದರು. ಶಿವರಾಜ ಶೆಟ್ಟಿ ಧನ್ಯವಾದವಿತ್ತರು. ಅಭಿಷಾ ಪೂಜಾರಿ ಮತ್ತು ವಿಷ್ಣುಪ್ರಸಾದ ಆಚಾರ್ಯ ನಿರೂಪಿಸಿರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.





















