ಸ್ಪಾ(spa)ದಲ್ಲಿ ನಡೆಯುತ್ತಿತ್ತು ವೇಶ್ಯಾವಾಟಿಕೆ : ಐವರು ಯುವತಿಯರ ರಕ್ಷಿಣೆ

Picture of RB NEWS

RB NEWS

Bureau Report

ಮೈಸೂರು : ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಪಾ (spa) ಹೆಸರಲ್ಲಿ ನಡೆಸುತ್ತಿದ್ದ ವೇಶ್ಯಾವಾಟಿಕೆ ದಂಧೆ ಅಡ್ಡೆಗೆ ಪೊಲೀಸರು ದಾಳಿ ನಡೆಸಿ ಐವರು ಯುವತಿಯರನ್ನು ರಕ್ಷಿಸಿದ್ದಾರೆ‌.

ಇಬ್ಬರು ಪಶ್ಚಿಮ ಬಂಗಾಳದವರಾಗಿದ್ದು, ಓರ್ವ ಹುಡುಗಿ ಮಡಿಕೇರಿ ಮೂಲದವಳು. ಇನ್ನುಳಿದ ಇಬ್ಬರು ಯುವತಿಯರು ಸ್ಥಳೀಯರು ಎಂದು ತಿಳಿದು ಬಂದಿದೆ.

ದಾಳಿಯಲ್ಲಿ ಓರ್ವ ದಂಧೆ ಕೋರ ಮಹಿಳೆ, ಒಬ್ಬ ಪಿಂಪ್ ಹಾಗೂ ಇಬ್ಬರು ಗಿರಾಕಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಜಯನಗರ ಪೊಲೀಸ್‌ ಠಾಣೆಯ ಆರಕ್ಷಕ ನಿರೀಕ್ಷಕ ಪ್ರದೀಪ್ ರವರ ನೇತೃತ್ವದಲ್ಲಿ ಪೊಲೀಸ್ ಕಾರ್ಯಚರಣೆ ನಡೆದಿದೆ.

.ಸ್ನಾ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯು ಮಾಹಿತಿ ಕಲೆಹಾಕಿ ಸಹಾಯಕ ಪೊಲೀಸ್‌ ಆಯುಕ್ತರಾದ ಗಜೇಂದ್ರ ಪ್ರಸಾದ್ ಅವರಿಗೆ ದೂರು (complaint) ನೀಡಿತ್ತು.

ಕಾರ್ಯಚರಣೆ ವೇಳೆ ಪೊಲೀಸ್ ಸಿಬ್ಬಂದಿಗಳು, ಒಡನಾಡಿ ಸಂಸ್ಥೆಯ ನಿರ್ದೇಶಕರಾದ ಸ್ಪ್ಯಾನ್ಸಿ, ಪರಶು ಹಾಗೂ ಒಡನಾಡಿ ಸಂಸ್ಥೆ ಸಿಬ್ಬಂದಿಗಳಾದ ಪ್ರದೀಪ್.ಕೆ, ಸುಮಾ, ಶಶಾಂಕ್ ಹಾಗೂ ಬಾಲುಕುಮಾ‌ರ್ ಇದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top