ಕಾರ್ಕಳ : ಸಮಾಜಕ್ಕೆ ಮಾರ್ಗದರ್ಶನ ನೀಡುವ ಶಿಕ್ಷಣದ ಪಠ್ಯಕ್ರಮ ರಚನೆಯಾಗಿ, ಮೌಲ್ಯಗಳನ್ನು ಅಳವಡಿಸುವಂತಾಗಬೇಕು ಎಂದು ನೈಋತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಎಸ್ ಭೋಜೆಗೌಡ ಹೇಳಿದರು.
ಕ್ರಿಯೇಟಿವ್ ನಿನಾದ ಸಂಚಿಕೆ-6 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಕ್ರಿಯೇಟಿವ್ ನಿನಾದ ಸಂಚಿಕೆ-6 ನ್ನು ಬಿಡುಗಡೆಗೊಳಿಸಿ ಮಾತನಾಡಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರ ಬೆಳೆಯಬೇಕಾದರೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯದ ಅಧ್ಯಯನ ನಡೆಸಬೇಕು. ಹಿರಿಯರ ಜೀವನ ದರ್ಶನವನ್ನು ಅನುಸರಿಸಬೇಕು. ಆಗ ಬದುಕಿನ ಹೊಸತನಗಳು ತೆರೆದುಕೊಳ್ಳುತ್ತವೆ. ಜೀವನವನ್ನು ಧೈರ್ಯದಿಂದ ಎದುರಿಸುವ ದೃಢತೆ ನಮ್ಮಲ್ಲಿ ಉಂಟಾಗುತ್ತದೆ. ಶಿಕ್ಷಣವಂತ ಸಮಾಜವು ಆಶಿಸಿದರು.
ಇದೇ ಸಂದರ್ಭದಲ್ಲಿ ಕ.ಸಾ.ಪ.ದ ವಿವಿಧ ಪದಾಧಿಕಾರಿಗಳು, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರಾದ ಅಶ್ವತ್ ಎಸ್.ಎಲ್. , ಅಮೃತ್ ರೈ, ಗಣಪತಿ ಭಟ್ ಕೆ.ಎಸ್, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.






































