ಸಾಣೂರು : ಪ್ರತಿಭಟನೆಯ ಬಿಸಿ; ಕೃತಕ ನೆರೆಗೆ ಎರಡೇ ದಿನಗಳಲ್ಲಿ ಶಾಶ್ವತ ಪರಿಹಾರ

Picture of RB NEWS

RB NEWS

Bureau Report

ಸಾಣೂರು ರಾ.ಹೆ – 169 : ಪ್ರತಿಭಟನೆಯ ಬಿಸಿಗೆ ಎಚ್ಚೆತ್ತ ರಾ.ಹೆ. ಇಲಾಖೆ ; ಕೃತಕ ನೆರೆಗೆ ಎರಡೇ ದಿನಗಳಲ್ಲಿ ಶಾಶ್ವತ ಪರಿಹಾರ

ಸಾಣೂರು : ಕಳೆದ ವಾರ ಶನಿವಾರ (ಏಪ್ರಿಲ್ 20) ಮುಂಜಾವಿನಲ್ಲಿ ಸುರಿದ ಭಾರಿ ಮಳೆಗೆ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಮರತಂಗಡಿ ಶುಂಠಿಗುಡ್ಡೆ ಅಡ್ಡರಸ್ತೆಯಲ್ಲಿ ಕೃತಕ ನೆರೆ ಉಂಟಾಗಿ ಸಂಚಾರ ಅಸ್ತವ್ಯಸ್ತವಾಗಿತ್ತು.

ನಾಲ್ಕು ತಿಂಗಳ ಹಿಂದೆಯೇ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರ ಕಂಪನಿಗೆ ಸ್ಥಳೀಯ ನಾಗರಿಕರು ಸಂಭಾವ್ಯ ಕೃತಕ ನೆರೆಯ ಬಗ್ಗೆ ಎಚ್ಚರಿಸಿದ್ದರೂ…

… ಮಳೆ ನೀರು ಹರಿದು ಹೋಗಲು ಯಾವುದೇ ಚರಂಡಿ ವ್ಯವಸ್ಥೆಯನ್ನು ಮಾಡದೆ ಇದ್ದುದರಿಂದ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರೋಡ್ ಗಿಂತ ಕೆಳಮಟ್ಟದಲ್ಲಿದ್ದ ಮುರತಂಗಡಿ _ ಶುಂಠಿ ಗುಡ್ಡೆ ರಸ್ತೆಯಲ್ಲಿ ನೀರು ನಿಂತು ಸುಮಾರು ಇನ್ನೂರು ಮೀಟರ್ ರಸ್ತೆ ಸಂಪೂರ್ಣ ಜಲಾವೃತವಾಗಿ ವಾಹನ ಸಂಚಾರ ಮತ್ತು ಪ್ರಯಾಣಿಕರಿಗೆ ಸಂಚರಿಸಲು ತೊಡಕುಂಟಾಗಿತ್ತು.

ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮತ್ತು ಗುತ್ತಿಗೆದಾರ ಕಂಪನಿಯ ಈ ಬೇಜವಾಬ್ದಾರಿಯುತ ನಡವಳಿಕೆಗೆ ಸಾರ್ವಜನಿಕರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿ ಮಾಧ್ಯಮಗಳಲ್ಲಿ ಈ ಬಗ್ಗೆ ವಿವರಗಳು ಪ್ರಕಟವಾಗಿ ಲೋಕಸಭಾ ಚುನಾವಣೆಯ ನಂತರ ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದರು.

ಇದನ್ನು ಮನಗಂಡ ಗುತ್ತಿಗೆದಾರ ಕಂಪನಿಯು ಕೂಡಲೇ ಎಚ್ಚೆತ್ತುಕೊಂಡು ಕಾರ್ಯ ಪ್ರವೃತ್ತರಾಗಿ ಎರಡೇ ದಿನಗಳಲ್ಲಿ ಮರತಂಗಡಿ ಶುಂಠಿ ಗುಡ್ಡೆ ಅಡ್ಡರಸ್ತೆಯ ಸುಮಾರು 200 ಮೀಟರ್ ಭಾಗವನ್ನು ಎತ್ತರಿಸಿ ಡಾಮರೀಕರಣ ಗೊಳಿಸಲಾಗಿದೆ.

ಇನ್ನು ಮಳೆ ಸುರಿದರೆ ರಸ್ತೆಯಲ್ಲಿ ನೀರು ನಿಲ್ಲದಿದ್ದರೂ ಕೂಡಲೇ ಮಳೆ ನೀರು ಹರಿದು ಹೋಗಲು ಶಾಶ್ವತವಾದ ಚರಂಡಿ ನಿರ್ಮಾಣ ಕಾರ್ಯ ಮಾಡದಿದ್ದರೆ, ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಮಳೆ ನೀರು ನುಗ್ಗಿ ತೊಂದರೆಯಾಗಬಹುದು.

ತ್ವರಿತ ರಸ್ತೆ ನಿರ್ಮಾಣದ ರೀತಿಯಲ್ಲಿಯೇ ಕೂಡಲೇ ಸೂಕ್ತವಾದ ಚರಂಡಿ ವ್ಯವಸ್ಥೆಯನ್ನು ಮಾಡಿದರೆ, ಮಳೆಗಾಲದಲ್ಲಿ ಯಾವುದೇ ತೊಂದರೆ ಇಲ್ಲದೆ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗಬಹುದು ಎಂದು ಸಾಣೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ಮಾಧ್ಯಮಕ್ಕೆ ತಿಳಿಸಿರುತ್ತಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top