ಸರ್ವಧರ್ಮ ಸಮಭಾವದ ಪ್ರತಿಪಾದಕ ನಾರಾಯಣ ಗುರುಗಳ ಸ್ಮರಣೆ ಮಾಡುವುದು ಬಹಳ ಪುಣ್ಯಕಾರ್ಯ- ಶಾಸಕ ಉಮಾನಾಥ ಕೋಟ್ಯಾನ್

Picture of RB NEWS

RB NEWS

Bureau Report

ಮೂಡುಬಿದಿರೆ: ಸ್ಥಳೀಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ವಾಹಿನಿಯ ಮೂಡುಬಿದಿರೆ ತಾಲೂಕು ಘಟಕ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರ ರಚನೆ, ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮ ಆಳ್ವಾಸ್ ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್ ಅವರು ಸಮಾನತಾವಾದಿ, ಸರ್ವಧರ್ಮ ಸಮಭಾವದ ಪ್ರತಿಪಾದಕ ನಾರಾಯಣ ಗುರುಗಳ ಸ್ಮರಣೆ ಮಾಡುವುದು ಬಹಳ ಪುಣ್ಯಕಾರ್ಯ. ಇಂತಹ ಪುಣ್ಯವಂತರ ಭಾವಚಿತ್ರ ಬಿಡಿಸುವುದು, ಅವರ ವಿಚಾರಗಳನ್ನು ಪ್ರಬಂಧಗಳಲ್ಲಿ ಬರೆಯುವುದು, ವಿಷಯವನ್ನು ಭಾಷಣದಲ್ಲಿ ಪ್ರಸ್ತುತಪಡಿಸುವುದು ಬಹಳ ಶ್ರೇಯಸ್ಕರ ಕಾರ್ಯ. ಮಕ್ಕಳಲ್ಲಿ ಅಂತಹ ಉತ್ತಮ ಭಾವನೆಗಳನ್ನು ಮೂಡಿಸುವುದಕ್ಕೆ ಇಂತಹ ಸ್ಪರ್ಧೆಗಳು ಅತ್ಯಂತ ಹೆಚ್ಚು ಸಮಂಜಸ ಮತ್ತು ಇಂದಿನ ದಿನಗಳಿಗೆ ಅತಿ ಅಗತ್ಯದ ಕಾರ್ಯವಾಗಿದೆ. ಅಂತಹ ಕಾರ್ಯವನ್ನು ನಡೆಸಿಕೊಂಡು ಹೋಗುತ್ತಿರುವ ಯುವ ವಾಹಿನಿ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಶುಭವನ್ನು ಕೋರಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಉದ್ಯಮಿ ನಾರಾಯಣ ಪಿ ಎಂ., ಹಾಗೂ ಯುವ ವಾಹಿನಿಯ ಪದಾಧಿಕಾರಿಗಳು ಹಾಜರಿದ್ದರು. ಪತ್ರಿಕಾ ಮಾಧ್ಯಮದ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top