ಶರಣಾಗತಿ ನಕ್ಸಲೀಯರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು
ಕಾರ್ಕಳ :ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾಗಿ ಮುಖ್ಯವಾಹಿನಿಗೆ ಸೇರ್ಪಡೆಗೊಂಡ 6 ಮಂದಿ ನಕ್ಸಲರ ಪೈಕಿ ನಾಲ್ವರನ್ನು ಫೆ. 25ರಂದು ಕಾರ್ಕಳ ನ್ಯಾಯಾಲಯದಲ್ಲಿ ಮಂಗಳವಾರದಂದು ಹಾಜರು ಪಡಿಸಿದ್ದಾರೆ.




ಶರಣಾಗಿ ನ್ಯಾಯಾಂಗ ಬಂಧನದಲ್ಲಿರುವ ನಕ್ಸಲಿಯರನ್ನು ಕಾರ್ಕಳ ಉಪವಿಭಾಗದ ಠಾಣೆ ಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯಲ್ಲಿ ಹಾಜರಪಡಿಸಲಾಗಿದೆ.
ಇವರೆಲ್ಲರ ವಿರುದ್ಧ ವಿವಿಧ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದ್ದು, ಶರಣಾಗತಿ ಪ್ರಕ್ರಿಯೆಯ ಬಳಿಕ ಅವರನೆಲ್ಲ ಬಂಧನ ಮಾಡಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಪೊಲೀಸರ ತನಿಖೆಯ ಹಿನ್ನೆಲೆಯಲ್ಲಿ ನ್ಯಾಯಾಲಯವು ಅವರನ್ನೆಲ್ಲ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾರಪ್ಪ (ಜಯಣ್ಣ) ಲತಾ (ಮುಂಡಗಾರು ಲತಾ) ವನಜಾಕ್ಷಿ (ಜ್ಯೋತಿ) ಸುಂದರಿ (ಗೀತಾ, ಜೆನ್ನಿ)ಯನ್ನು ಅವರನ್ನು ಸೋಮವಾರ ಕರೆದು ತರಲಾಗಲಾಗಿತ್ತು. ರಾತ್ರಿಯಿಡಿ ಭದ್ರತೆಯ ಮೇಲ್ವಿಚಾರಣೆಯನ್ನು ನಗರ ಠಾಣಾ ಎಸ್ ಐ ಸಂದೀಪ್ ಶೆಟ್ಟಿ ನಿರ್ವಹಿಸಿದರು.
ಶರಣಾಗತಿ ನಕ್ಸಲೀಯರನ್ನು ಕಾರ್ಕಳ ನ್ಯಾಯಾಲಯಕ್ಕೆ ಹಾಜರು ಪಡಿಸುವ ಎಲ್ಲಾ ಜವಾಬ್ದಾರಿಗಳನ್ನು ಎಎಸ್ಪಿ ಡಾ. ಹರ್ಷ ಪ್ರಿಯಂವದ ವಹಿಸಿಕೊಂಡಿದ್ದಾರೆ.
ಕಾರ್ಕಳ ಗ್ರಾಮಾಂತರ, ಹೆಬ್ರಿ, ಅಜೆಕಾರು ಠಾಣಾ ವ್ಯಾಪ್ತಿಗಳಲ್ಲಿ ಆರೋಪಿಗಳ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಲಿಧ.






































