ಶಬರಿಮಲೆ: ದಿವ್ಯಪಡಿಯಲ್ಲಿಯೇ ದೇವರ ಪಾದ ಸೇರಿದ ಭಕ್ತ !

Picture of RB NEWS

RB NEWS

Bureau Report

ಮಂಗಳೂರು : ತನ್ನ ಇಷ್ಟಾರ್ಥ ನೆರವೇರಿದ ಹಿನ್ನಲ್ಲೆಯಲ್ಲಿ ತೀರ್ಥಯಾತ್ರೆಗೆ ಹೋಗಿದ್ದ ಅಯ್ಯಪ್ಪ ಮಾಲಾಧಾರಿಯೋರ್ವರು  ಶಬರಿಮಲೆಯ ದಿವ್ಯ ಪಡಿ (ಮೆಟ್ಟಲು) ಏರುತ್ತಿದ್ದಂತೆ ದೇವರ ಪಾದ ಸೇರಿದ ಘಟನೆ ನಡೆದಿದೆ.

  ಕಾಟಿಪಳ್ಳ ಗಣೇಶಪುರ ನಿವಾಸಿ ಸಂದೀಪ್ ಕಾಟಿಪಳ್ಳ (35)  ಹೃದಯಾಘಾತದಿಂದ ಮೃತಪಟ್ಟವರು.


ಸಂದೀಪ್ ತನ್ನ ಒಬ್ಬ ಮಗನ ಹೆಸರಿನಲ್ಲಿ ಮಾಡಿಕೊಂಡ  ಹರಕೆ ನೆರವೇರಿದ್ದು, ಅದರ ಹಿನ್ನಲ್ಲೆಯಲ್ಲಿ  ಶಬರಿಮಲೆಗೆ ತೆರಳಿದ್ದರು. ಶನಿವಾರದಂದು ದೇವರ ದರ್ಶನ  ಪಡೆಯಲು ಹದಿನೆಂಟು ಮೆಟ್ಟಿಲು ಹತ್ತುತ್ತಿದ್ದಾಗ   ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಸಂದೀಪ್ ಅವರು ನಿತ್ಯಾನಂದ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿಯಾಗಿದ್ದು, ಸೇವಾ ಟ್ರಸ್ಟ್ ಹಾಗೂ ಕೇಸರಿ ಗೆಳೆಯರ ಬಳಗದ ಸದಸ್ಯರಾಗಿ ಸಮಾಜಮುಖಿ ಕಾರ್ಯದಲ್ಲಿ ಸಕ್ರಿಯರಾಗಿದ್ದರು. ಎಂಆರ್‌ಪಿಎಲ್‌ನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಚಾಲಕನಾಗಿ ಕೆಲಸ ಮಾಡುತ್ತಿದ್ದರು.

 ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top