ವೈದ್ಯನ ಕಿಡ್ನಾಪ್ : ಆರೋಪಿಗೆ ಗುಂಡೇಟು

ಬಳ್ಳಾರಿ: ಜನವರಿ 25 ರಂದು ಜಿಲ್ಲಾಸ್ಪತ್ರೆ ಮಕ್ಕಳ ತಜ್ಞ ಡಾ. ಸುನೀಲ್ ರನ್ನು ಕಿಡ್ನಾಪ್ ಮಾಡಿದ್ದ ಆರೋಪಿ ಮೇಲೆ ಬಳ್ಳಾರಿ ಪೊಲೀಸರು ಬುಧವಾರದಂದು ಫೈರಿಂಗ್ ಮಾಡಿದ್ದಾರೆ.
ಬಳ್ಳಾರಿ ತಾಲೂಕಿನ ಮೋಕಾ ರಸ್ತೆಯ ಬಳಿ ಆರೋಪಿಗಳನ್ನು ಬಂಧಿಸುತ್ತಿದ್ದ ವೇಳೆ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಆರೋಪಿಗಳು ಮುಂದಾಗಿದ್ದು, ಈ ವೇಳೆ ಸಿಪಿಐ ಮಲ್ಲಿಕಾರ್ಜುನ ಸಿಂಧೂರ ಅವರು ಆರೋಪಿ ಶ್ರೀಕಾಂತ್ ಬಲಗಾಲಿಗೆ ಕಾಲಿಗೆ ಗುಂಡೇಟು ಹಾಕಿದ್ದಾರೆ.
ಗುಂಡೇಟಿನಿಂದ ಗಾಯವಾದ ಆರೋಪಿ ಶ್ರೀಕಾಂತ್ ಗೆ ಬಳ್ಳಾರಿಯ ಟ್ರಾಮಾ ಕೇರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಪಿಗಳಿಂದ ಹಲ್ಲೆಗೆ ಒಳಗಾದ ಪೊಲೀಸ್ ಪೇದೆ ಕಾಳಿಂಗ ಅವರಿಗೆ ವಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಳ್ಳಾರಿಯ ಆರು ಮಂದಿ, ಓರ್ವ ಆಂಧ್ರ ಮೂಲದ ಆರೋಪಿ ಸೇರಿ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣದ ಪ್ರಮುಖ ಆರೋಪಿ ಶ್ರೀಕಾಂತ್, ರಾಕೇಶ್, ತರುಣ್, ಅರುಣ್, ಭೋಜರಾಜ್, ಸಾಯಿಕುಮಾರ್ ಮತ್ತು ಇನ್ನೊಬ್ಬ ಆಂಧ್ರ ಮೂಲದ ಆರೋಪಿ ಬಂಧಿತರು.





















