ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಸಂರಕ್ಷಣೆ : ತೆರೆದಮನೆ ಮಾಹಿತಿ
RB NEWS
Bureau Report
ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಸಂರಕ್ಷಣೆ : ತೆರೆದಮನೆ ಮಾಹಿತಿ
ಅಜೆಕಾರು : ವಿದ್ಯಾರ್ಥಿಗಳ ಸುರಕ್ಷತೆ,ಬಾಲ ಹಕ್ಕುಗಳ ತಿಳುವಳಿಕೆ,ಸೈಬರ್ ಅಪರಾಧಗಳ ಜಾಗೃತಿ, ಮಕ್ಕಳ ಮತ್ತು ಮಹಿಳಾ ಸುರಕ್ಷತೆ, ಮಾದಕ ದ್ರವ್ಯ ವಿರೋಧಿ ಅಭಿಯಾನ,ಸಂಚಾರಿ ನಿಯಮಗಳ ಪಾಲನೆ, ತುರ್ತು ಸಹಾಯದ ಕುರಿತಾದ ಮಹತ್ವದ ಮಾಹಿತಿಯನ್ನು ಅಜೆಕಾರು ಠಾಣಾಧಿಕಾರಿ ಮಹೇಶ್ ನೀಡಿದರು.
ಅಜೆಕಾರು ಪದ್ಮನಗರ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಸಂರಕ್ಷಣೆ ಯ ಕುರಿತು ತೆರೆದಮನೆ ಮಾಹಿತಿ ಕಾರ್ಯಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಎಎಸ್ಐ ಲಕ್ಷ್ಮಣ್ ಪ್ರಭು ಮಾತನಾಡಿ, ವಿದ್ಯಾರ್ಥಿಗಳ ಸುರಕ್ಷತೆ, ಸಂರಕ್ಷಣೆ , ತುರ್ತು ಸಹಾಯದ ಕುರಿತಾಗಿ ಸಲಹೆ ಸೂಚನೆಯನ್ನು ನೀಡಿದರು.
ಕಾನ್ಸ್ಟೇಬಲ್ ರೂಪ ಅವರು ಪೋಕ್ಸೋ ಕಾಯಿದೆ , ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿಯನ್ನು ತಿಳಿಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸಿದರು.
ಅಧಿಕಾರಿಗಳ ಸಮ್ಮುಖದಲ್ಲಿ, ಎಲ್ಲಾ ವಿದ್ಯಾರ್ಥಿಗಳು “ನಾನು ಕಾನೂನನ್ನು ಗೌರವಿಸುತ್ತೇನೆ, ಹಾಗೂ ಪಾಲಿಸುತ್ತೇನೆ , ಮಾದಕ ದ್ರವ್ಯಗಳಿಂದ ದೂರವಿರುತ್ತೇನೆ ಮತ್ತು ಜವಾಬ್ದಾರಿಯುತ ನಾಗರಿಕನಾಗುತ್ತೇನೆ ಎಂದು ಪ್ರಮಾಣ ವಚನವನ್ನು ಸ್ವೀಕರಿಸಿದರು.
ಅಜೆಕಾರು ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಸಂತೋಷ್ ಮಾತನಾಡಿ, ಪ್ರಸಕ್ತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಅನೇಕ ಸಾಮಾಜಿಕ ಸವಾಲುಗಳ ನಡುವೆ ಬದುಕಬೇಕಾಗಿದೆ. ಇಂತಹ ಸಂದರ್ಭದಲ್ಲಿ ತಮ್ಮ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನಹರಿಸಬೇಕೆಂದರು. ಉಪಪ್ರಾಂಶುಪಾಲೆ ಆರತಿ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಮಚಂದ್ರ ನೆಲ್ಲಿಕಾರು, ಶಿಕ್ಷಕ ವೃಂದ , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.