ವಾರಭವಿಷ್ಯ24.05.2026 ರಿಂದ 30.05.2026ರವರೆಗೆ

Picture of RB NEWS

RB NEWS

Bureau Report

ವಾರಭವಿಷ್ಯ
24.05.2026 ರಿಂದ 30.05.2026ರವರೆಗೆ


ಮೇಷ
ಮನಸ್ಸಿಗೆ ಸಂತೋಷ ನೀಡುವ ಅನೇಕ ಘಟನೆಗಳು ಸಂಭವಿಸಲಿವೆ. ಹಣ ಹೂಡಿಕೆ ಮಾಡುವಾಗ ಎಚ್ಚರಿಕೆ ಅಗತ್ಯ. ಕಲಾ ಕ್ಷೇತ್ರದಲ್ಲಿರುವವರಿಗೆ ಉತ್ತಮ ಅವಕಾಶಗಳು ದೊರೆಯಲಿವೆ. ಸಹೋದರಿಯೊಂದಿಗೆ ಅಲ್ಪ ಬೇಸರ ಉಂಟಾಗುವ ಸಾಧ್ಯತೆ ಇದೆ. ಅತಿಯಾದ ಆತ್ಮವಿಶ್ವಾಸದಿಂದ ದೂರವಿರಿ.
ವೃಷಭ
ದೈವಾನುಗ್ರಹ ಉತ್ತಮವಾಗಿರುವುದರಿಂದ ಸಕಾರಾತ್ಮಕ ಚಿಂತನೆಗಳು ಆರೋಗ್ಯ ವೃದ್ಧಿಗೆ ಕಾರಣವಾಗಲಿವೆ. ಆದಾಯ ಉತ್ತಮವಾಗಿದ್ದರೂ ತಪ್ಪು ನಿರ್ಧಾರಗಳಿಂದ ತೊಂದರೆ ಉಂಟಾಗುವ ಸೂಚನೆ ಇದೆ. ಕೃಷಿ ಚಟುವಟಿಕೆಗಳಲ್ಲಿ ಲಾಭ ಹೆಚ್ಚಾಗಲಿದೆ.
ಮಿಥುನ
ಇನ್ನೂ ಕೆಲವೇ ದಿನಗಳಲ್ಲಿ ದೈವಾನುಗ್ರಹ ಹೆಚ್ಚಾಗಲಿದೆ. ಪಿತ್ರಾರ್ಜಿತ ಆಸ್ತಿ ಲಾಭದ ಸಾಧ್ಯತೆ ಇದೆ. ನಿಮ್ಮ ಯೋಜನೆಗಳನ್ನು ಹಿರಿಯರೊಂದಿಗೆ ಚರ್ಚಿಸುವುದು ಒಳಿತು. ಶೀತ, ಕಫ ಸಂಬಂಧಿತ ಸಮಸ್ಯೆಗಳು ಕಾಡಬಹುದು.
ಕರ್ಕಾಟಕ
ಹಿತಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ನಡೆದುಕೊಳ್ಳಿ. ವೃತ್ತಿ ಹಾಗೂ ವ್ಯವಹಾರದಲ್ಲಿ ಕುಲದೇವರ ಪ್ರಾರ್ಥನೆಯೊಂದಿಗೆ ಮುಂದುವರಿಯಿರಿ. ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ ಉತ್ತಮ ಅವಕಾಶಗಳು ದೊರೆಯಲಿವೆ. ಮನೆ ಅಥವಾ ವ್ಯವಹಾರ ಸ್ಥಳ ಬದಲಾವಣೆಯ ಸಾಧ್ಯತೆ ಇದೆ.
ಸಿಂಹ
ಜೂನ್ 02ರವರೆಗೆ ಉತ್ತಮ ದೈವಾನುಗ್ರಹ ಇರುವುದು. ನಿಮ್ಮ ಒಳ್ಳೆಯತನವನ್ನು ಇತರರು ದುರುಪಯೋಗಪಡಿಸಿಕೊಳ್ಳದಂತೆ ಜಾಗ್ರತೆ ವಹಿಸಿ. ನಿರ್ಲಕ್ಷ್ಯದಿಂದ ಉತ್ತಮ ಅವಕಾಶಗಳು ಕೈ ತಪ್ಪಬಹುದು. ಅನಾವಶ್ಯಕ ಸಂಘರ್ಷಗಳಿಂದ ದೂರವಿರಿ.
ಕನ್ಯಾ
ಶನಿ ಹಾಗೂ ಕುಜರಿಗೆ ಪರಿಹಾರ ಅಗತ್ಯ. ಗುಣಾತ್ಮಕ ಚಿಂತನೆಗಳಿಂದ ಮನಸ್ಸನ್ನು ಹಗುರವಾಗಿಡಿ. ನಿರೀಕ್ಷಿಸದ ಬದಲಾವಣೆಗಳು ಸಂಭವಿಸಬಹುದು. ಮೃತ್ಯುಂಜಯ ಜಪ ಮಾಡುವುದು ಒಳಿತು. ಆರ್ಥಿಕವಾಗಿ ವ್ಯರ್ಥ ಖರ್ಚು ಸಂಭವಿಸುವ ಸಾಧ್ಯತೆ ಇದೆ.
ತುಲಾ
ಜೂನ್ 02ರವರೆಗೆ ಉತ್ತಮ ದೈವಾನುಗ್ರಹ ಇರುವ ಸಮಯ. ಪ್ರೀತಿಪಾತ್ರರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಕಷ್ಟಗಳು ಶಾಶ್ವತವಲ್ಲ. ಸಾಮಾಜಿಕ ಕ್ಷೇತ್ರದಲ್ಲಿಯೂ ಗೌರವ ಹೆಚ್ಚಾಗಲಿದೆ.
ವೃಶ್ಚಿಕ
ವೃತ್ತಿ ಹಾಗೂ ವ್ಯವಹಾರದಲ್ಲಿ ವಿಳಂಬ ನೀತಿ ಬೇಡ. ಆಭರಣ ಖರೀದಿಸುವ ಆಸೆ ಇದ್ದರೂ ಅದು ಸಾಧ್ಯವಾಗದಿರಬಹುದು. ತಾಯಿಯವರ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಮಕ್ಕಳ ವಿಷಯದಲ್ಲಿ ಬೇಸರ ಉಂಟಾಗಬಹುದು. ದೇವಿ ಸ್ತೋತ್ರ ಪಾರಾಯಣ ಒಳಿತು.
ಧನು
ಶನಿ ಹಾಗೂ ಕುಜರ ಪ್ರಾರ್ಥನೆ ಅಗತ್ಯ. ಸಪ್ತಮದಲ್ಲಿ ಗುರು-ಶುಕ್ರ ಇರುವುದರಿಂದ ದಾಂಪತ್ಯದಲ್ಲಿ ಅಲ್ಪ ಕಿರಿಕಿರಿ ಉಂಟಾಗಬಹುದು. ಜೂನ್ 02ರಿಂದ ದೈವಾನುಗ್ರಹ ಸ್ವಲ್ಪ ಕಡಿಮೆಯಾಗಲಿದೆ. ವಾಹನ ಚಾಲನೆಯಲ್ಲಿ ಜಾಗ್ರತೆ ವಹಿಸಿ. ಮೈಕೈ ನೋವು ಕಾಣಿಸಬಹುದು.
ಮಕರ
ಪ್ರಗತಿಗೆ ಸಂಬಂಧಿಸಿದ ಹೊಸ ಅವಕಾಶಗಳು ದೊರೆಯಲಿವೆ. ವಿಶ್ವಾಸಪಾತ್ರ ಮಿತ್ರರೇ ವಿರೋಧಿಗಳಾಗುವ ಸಾಧ್ಯತೆ ಇದೆ. ಉದರ ಸಂಬಂಧಿತ ಅನಾರೋಗ್ಯಗಳು ಕಾಡಬಹುದು. ಯೋಚನೆಯಿಲ್ಲದ ಹೂಡಿಕೆಗಳಿಂದ ಆರ್ಥಿಕ ಸಂಕಷ್ಟ ಉಂಟಾಗಬಹುದು. ಕಾನೂನು ಹೋರಾಟದಲ್ಲಿ ಜಯ ನಿಮ್ಮದಾಗಲಿದೆ.
ಕುಂಭ
ಸಾಡೇಸಾತ್ ಶನಿಯ ಪ್ರಭಾವದಿಂದ ಕೆಲಸಗಳಲ್ಲಿ ವಿಳಂಬ ಉಂಟಾಗಬಹುದು. ಮೈಗಳ್ಳತನ ಪ್ರಗತಿಗೆ ಅಡ್ಡಿಯಾಗಲಿದೆ. ಆಟಿಕೋಪ ದಾಂಪತ್ಯ ಜೀವನದಲ್ಲಿ ಸಮಸ್ಯೆ ತರಬಹುದು. ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಒಳಿತು.
ಮೀನಾ
ಜನ್ಮ ಶನಿಯಿಂದ ಮನಸ್ಸಿಗೆ ಅಶಾಂತಿ ಉಂಟಾಗಬಹುದು. ಆರ್ಥಿಕ ಸುಧಾರಣೆ ಕಂಡುಬರಲಿದೆ. ಉದ್ಯೋಗದಲ್ಲಿರುವವರಿಗೆ ಪದೋನ್ನತಿ ಸಾಧ್ಯತೆ ಇದೆ. ಜೂನ್ 02ರಿಂದ ಗುರು ಪಂಚಮಕ್ಕೆ ಬಂದು ಅನುಗ್ರಹ ದೊರೆಯಲಿದೆ. ವಿವಾಹ ನಿರೀಕ್ಷೆಯಲ್ಲಿರುವವರಿಗೆ ಶುಭ ಸುದ್ದಿ ಸಿಗಬಹುದು.


ಕಂಪ್ಯೂಟರ್ ಜಾತಕ, ವಾಸ್ತು ಸಲಹೆ, ವಿವಾಹ ಹೊಂದಾಣಿಕೆ, ಶುಭ ಮುಹೂರ್ತ, ಕವಡೆ ಪ್ರಶ್ನೆ ಮುಂತಾದ ಸಲಹೆಗಳಿಗೆ ಸಂಪರ್ಕಿಸಿರಿ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top