
ವಾರಭವಿಷ್ಯ
20.09.2026 ರಿಂದ 26.09.2026ರವರೆಗೆ
ವಿಶೇಷ ದಿನಗಳು
25.09.2026 : ಅನಂತ ಚತುರ್ದಶಿ
26.09.2026 : ಬುಧನು ತುಲಾ ರಾಶಿಗೆ ಪ್ರವೇಶ
ಮೇಷ
ರಾಜಕೀಯ ಕ್ಷೇತ್ರದಲ್ಲಿರುವವರಿಗೆ ವಿಶ್ವಾಸ ವೃದ್ಧಿಯಾಗಲಿದೆ. ಮಕ್ಕಳು ಶೈಕ್ಷಣಿಕ ಪ್ರಗತಿಯನ್ನು ತೋರಿಸಲಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ಆದಾಯಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ನೌಕರ ವರ್ಗದವರಿಗೆ ವಿದೇಶ ಪ್ರಯಾಣದ ಯೋಗವಿದೆ. ಮನೆ, ವಾಹನ ಹಾಗೂ ಭೂಮಿ ಖರೀದಿಗೆ ಅನುಕೂಲಕರ ಸಮಯವಾಗಿದೆ. ತಾಯಿಯವರ ಹಾಗೂ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ಉದ್ಯೋಗದಲ್ಲಿ ಪ್ರಶಂಸೆ ದೊರೆಯುವ ಸಾಧ್ಯತೆ ಇದೆ. ಸ್ವತಂತ್ರವಾಗಿ ಯೋಚಿಸುವ ಶಕ್ತಿಯನ್ನು ಬೆಳೆಸಿಕೊಳ್ಳಿರಿ.
ವೃಷಭ
ಸಹೋದರ ವರ್ಗದವರೊಂದಿಗೆ ಕಲಹ ಉಂಟಾಗುವ ಸಾಧ್ಯತೆ ಇದೆ. ಕೌಟುಂಬಿಕ ವಿಚಾರಗಳಲ್ಲಿ ಹಿರಿಯರೊಂದಿಗೆ ಸಮಾಲೋಚನೆ ನಡೆಸುವಿರಿ. ಮಾನಸಿಕ ಒತ್ತಡವನ್ನು ಅನುಭವಿಸುವ ವಾರವಾಗಬಹುದು. ಖರ್ಚು ವೆಚ್ಚಗಳನ್ನು ನಿಯಂತ್ರಿಸುವುದು ಅಗತ್ಯ. ಮಕ್ಕಳ ವಿಚಾರವಾಗಿ ಬೇಸರ ಉಂಟಾಗುವ ಸಾಧ್ಯತೆ ಇದೆ. ಮನೆ ಬದಲಾವಣೆ ಮಾಡುವ ಯೋಗವಿದೆ. ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಮುಂದುವರಿಯಲಿದೆ.
ಮಿಥುನ
ನಿಮ್ಮಿಷ್ಟದಂತೆ ಸಫಲತೆ ಕಾಣುವ ಸಮಯವಾಗಿದೆ. ನಿಮ್ಮ ನಿಜವಾದ ಸಾಮರ್ಥ್ಯ ಸಮಾಜಕ್ಕೆ ತಿಳಿಯಲಿದೆ. ಮಾತಿನಲ್ಲಿ ಹಿಡಿತವಿರಲಿ. ಹಣದ ಹೂಡಿಕೆ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ತೀರ್ಥಯಾತ್ರೆ ಹಾಗೂ ದೇವತಾ ಕಾರ್ಯಗಳಿಂದ ಯಶಸ್ಸು ಹೆಚ್ಚಾಗಲಿದೆ. ಅನಾವಶ್ಯಕ ಚಿಂತೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೊಸ ಮಿತ್ರರ ಆಗಮನದಿಂದ ಕೆಲವು ಕಾರ್ಯಗಳು ಸುಗಮವಾಗಿ ನೆರವೇರುವ ಸಾಧ್ಯತೆ ಇದೆ.
ಕರ್ಕಾಟಕ
ಕುಲದೇವತಾ ಪ್ರಾರ್ಥನೆಯಿಂದ ರಾಹು ಮತ್ತು ಶನಿಯ ದೋಷ ಪರಿಹಾರಕ್ಕೆ ಅನುಕೂಲವಾಗಲಿದೆ. ಮಾಡುವ ಕಾರ್ಯ ಹಾಗೂ ವ್ಯವಹಾರದಲ್ಲಿ ಪ್ರಾಮಾಣಿಕತೆ ಇರಲಿ. ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಲರ್ಜಿ ಹಾಗೂ ಆಹಾರದಲ್ಲಿನ ವ್ಯತ್ಯಾಸದ ಬಗ್ಗೆ ಎಚ್ಚರ ವಹಿಸಿರಿ. ನೆರೆಮನೆಯವರೊಂದಿಗೆ ನಿಷ್ಠುರತೆ ಉಂಟಾಗದಂತೆ ನೋಡಿಕೊಳ್ಳಿರಿ. ಅವಿವಾಹಿತರು ಪ್ರೀತಿ, ಪ್ರೇಮದ ವಿಚಾರದಲ್ಲಿ ಆಸಕ್ತಿ ಬೆಳೆಸಿಕೊಳ್ಳುವ ಸಾಧ್ಯತೆ ಇದೆ. ಉದ್ಯೋಗ ಪ್ರಾಪ್ತಿಯ ಯೋಗವಿದೆ. ನಾಗದೇವರ ಯಥಾಶಕ್ತಿ ಸೇವೆ ಮಾಡುವುದು ಉತ್ತಮ.
ಸಿಂಹ
ಜೀವನದಲ್ಲಿ ಈ ಹಿಂದೆ ಮಾಡಿರುವ ಕೆಲವು ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಈ ವಾರ ಅವಕಾಶ ದೊರೆಯಲಿದೆ. ಸಹೋದರರನ್ನು ದೂರ ಮಾಡಿಕೊಳ್ಳದಂತೆ ಎಚ್ಚರವಹಿಸಿರಿ. ದೈವಾನುಗ್ರಹದ ಕೊರತೆಯ ಅನುಭವವಾಗಬಹುದು. ಸಂಗಾತಿಯನ್ನು ಗೌರವದಿಂದ ನಡೆಸಿಕೊಳ್ಳುವುದು ಅಗತ್ಯ. ಇತರರ ವಿರೋಧ ಅಥವಾ ಅಪಸ್ವರದ ಸಂದರ್ಭಗಳಲ್ಲಿ ಸಂಗಾತಿಯು ನಿಮಗೆ ಆಸರೆಯಾಗಿ ನಿಲ್ಲಲಿದ್ದಾರೆ. ಕೆಲವು ಘಟನೆಗಳಿಂದ ಧನಾದಾಯದಲ್ಲಿ ಕೊರತೆ ಉಂಟಾಗಬಹುದು. ಸ್ವತಂತ್ರ ದುಡಿಮೆಗೆ ಈ ಸಮಯದಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ.
ಕನ್ಯಾ
ಹಿತಶತ್ರುಗಳು ನಿಮ್ಮ ಸುತ್ತಲೂ ಇರುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ವ್ಯವಹರಿಸಿರಿ. ಬೆಲೆಬಾಳುವ ವಸ್ತುಗಳನ್ನು ಖರೀದಿಸುವ ಯೋಗವಿದೆ. ಬರುತ್ತಿರುವ ಆದಾಯದಲ್ಲಿ ಯಾವುದೇ ಕೊರತೆ ಇರುವುದಿಲ್ಲ. ಜೀವ ವಿಮೆ ವಿಭಾಗದಲ್ಲಿ ಮಾಡುವ ಹೂಡಿಕೆಗಳಲ್ಲಿ ಲಾಭದ ನಿರೀಕ್ಷೆಯಿದೆ. ಮಕ್ಕಳೊಂದಿಗೆ ವಿರಸ ಮಾಡಿಕೊಳ್ಳುವುದರಿಂದ ಮಾನಸಿಕ ನೆಮ್ಮದಿ ಹಾಳಾಗಬಹುದು. ವಿದ್ಯಾರ್ಥಿಗಳು ಯಶಸ್ಸು ಗಳಿಸಲಿದ್ದಾರೆ. ಅನ್ಯ ಮಹಿಳೆಯರ ವಿಚಾರದಲ್ಲಿ ಎಚ್ಚರಿಕೆಯಿಂದ ವರ್ತಿಸುವುದು ಒಳಿತು.
ತುಲಾ
ದೈವಾನುಗ್ರಹದ ಕೊರತೆಯ ಅನುಭವವಾಗಬಹುದಾದ್ದರಿಂದ ವ್ಯವಹಾರದಲ್ಲಿ ಹೆಚ್ಚಿನ ಶ್ರಮ ಅಗತ್ಯವಿದೆ. ಮುಂಗೋಪ ಹಾಗೂ ಅಸಹನೆಯನ್ನು ನಿಯಂತ್ರಿಸಿರಿ. ಖರ್ಚು ವೆಚ್ಚಗಳ ಬಗ್ಗೆ ಎಚ್ಚರ ವಹಿಸಬೇಕು. ಹಿರಿಯರ ಆರೋಗ್ಯದ ಬಗ್ಗೆಯೂ ಕಾಳಜಿ ಅಗತ್ಯ. ಅವಿವಾಹಿತರ ವಿವಾಹ ವಿಚಾರದಲ್ಲಿ ಹಲವು ಅಡಚಣೆಗಳು ಎದುರಾಗಬಹುದು. ತಾಯಿಯವರ ಗಂಟುನೋವು ನಿಮ್ಮ ಮನಸ್ಸಿಗೆ ಬೇಸರ ತರಬಹುದು. ಸಕ್ಕರೆ ಹಾಗೂ ರಕ್ತದೊತ್ತಡದ ಸಮಸ್ಯೆ ಇರುವವರು ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಿರಿ. ಮೂಲವ್ಯಾಧಿ ಇರುವವರು ಸಾಕಷ್ಟು ನೀರು ಸೇವಿಸುವುದು ಹಾಗೂ ವೈದ್ಯರ ಸಲಹೆ ಪಾಲಿಸುವುದು ಉತ್ತಮ.
ವೃಶ್ಚಿಕ
ಶುಕ್ರನು ವ್ಯಯ ಸ್ಥಾನದಲ್ಲಿರುವುದರಿಂದ ಸಂಗಾತಿಯ ಕಿರಿಕಿರಿ ಹೆಚ್ಚಾಗುವ ಸಾಧ್ಯತೆ ಇದೆ. ತ್ರಿಪುರ ಸುಂದರಿ ಪಾರಾಯಣವನ್ನು ಒಂದು ತಿಂಗಳ ಕಾಲ ಮಾಡುವುದು ಒಳಿತು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಅನುಕೂಲಕರ ಸಮಯವಾಗಿದೆ. ಮಕ್ಕಳನ್ನು ಗದರಿಸುವ ಬದಲು ಪ್ರೀತಿಯಿಂದ ಮಾರ್ಗದರ್ಶನ ಮಾಡಿರಿ. ಗುರು ಹಾಗೂ ಕುಜನ ಸ್ಥಾನಮಾನದಿಂದಾಗಿ ಕೆಲವು ವಿಚಾರಗಳಲ್ಲಿ ಹೊಂದಾಣಿಕೆಯ ಕೊರತೆ ಉಂಟಾಗಬಹುದು. ಹಿರಿಯರ ಅನಾರೋಗ್ಯದ ವಿಚಾರ ನಿಮ್ಮನ್ನು ಅಸಹಾಯಕ ಸ್ಥಿತಿಗೆ ತರಬಹುದು. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಕಿರಿಕಿರಿ ಎದುರಾಗುವ ಸಾಧ್ಯತೆ ಇದೆ.
ಧನು
ಪರಿವರ್ತನೆಯ ಕಾಲಘಟ್ಟವಾಗಿರುವುದರಿಂದ ಸವಾಲುಗಳು ಹೆಚ್ಚಾಗಬಹುದು. ಅಷ್ಟಮ ಸ್ಥಾನದಲ್ಲಿರುವ ಗುರು ಹಾಗೂ ಕುಜನ ಪ್ರಭಾವದಿಂದ ತಾಳ್ಮೆಯ ಪರೀಕ್ಷೆ ಎದುರಾಗಲಿದೆ. ವಿಷ್ಣು ಸಹಸ್ರನಾಮ ಹಾಗೂ ಲಲಿತಾ ಸಹಸ್ರನಾಮ ಪಾರಾಯಣ ಮಾಡುವುದು ಒಳಿತು. ಹಲವಾರು ಮೂಲಗಳಿಂದ ಧನ ಆದಾಯ ಬರುವ ಸಾಧ್ಯತೆ ಇದೆ. ಪಿತ್ರಾರ್ಜಿತ ಸಂಪತ್ತು ದೊರೆಯುವ ಕಾಲವಾಗಿದೆ. ಅವಿವಾಹಿತರು ವಿವಾಹ ವಿಚಾರದಲ್ಲಿ ಡಿಸೆಂಬರ್ ತಿಂಗಳವರೆಗೆ ಕಾಯುವುದು ಒಳಿತು. ಸಂಗಾತಿಯೊಂದಿಗೆ ಹೊಂದಾಣಿಕೆ ಅತ್ಯಂತ ಅಗತ್ಯ. ಮನೆಯಲ್ಲಿ ಘರ್ಷಣೆಯ ವಾತಾವರಣ ನಿರ್ಮಾಣವಾಗದಂತೆ ಎಚ್ಚರವಹಿಸಿರಿ.
ಮಕರ
ಸಾಡೇಸಾತ್ ಶನಿಯ ಪ್ರಭಾವ ಇರುವ ಸಮಯವಾಗಿದೆ. ಕುಜ ಹಾಗೂ ಗುರುಗಳ ಪ್ರಭಾವದಿಂದ ಸಂಸಾರದಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಶೀತಲ ಸಮರ ನಡೆಯುವ ಸಾಧ್ಯತೆ ಇದೆ. ಸಾಮಾಜಿಕ ಹಾಗೂ ಕೌಟುಂಬಿಕ ಬದ್ಧತೆಗಳಿಗೆ ಆದ್ಯತೆ ನೀಡಿರಿ. ಪ್ರಭಾವಿ ವ್ಯಕ್ತಿಗಳ ಭೇಟಿಯಿಂದ ಮನೋಬಲ ಹೆಚ್ಚಾಗಲಿದೆ. ಭೂ ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ಸಾಂಸಾರಿಕವಾಗಿ ಸುಖಮಯ ಜೀವನವನ್ನು ಅನುಭವಿಸುವ ಸಾಧ್ಯತೆ ಇದೆ. ಉತ್ತಮರ ಸಂಗವನ್ನು ಬೆಳೆಸಿಕೊಳ್ಳಿರಿ.
ಕುಂಭ
ಈ ಸಮಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವುದು ಅಗತ್ಯ. ಯಾರೊಂದಿಗೂ ಅನಗತ್ಯ ಕಲಹ ಉಂಟಾಗದಂತೆ ನೋಡಿಕೊಳ್ಳಿರಿ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಇನ್ನೂ ಒಂದು ತಿಂಗಳ ಕಾಲ ಅನುಕೂಲಕರ ಸಮಯ ಮುಂದುವರಿಯಲಿದೆ. ನೀವು ಬಯಸುವ ಕೆಲವು ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಹೊಸ ಉದ್ಯೋಗ ಪ್ರಾಪ್ತಿಯ ಯೋಗವಿದೆ. ಚಿತ್ರನಟರು ಹಾಗೂ ಸಂಗೀತ ಕ್ಷೇತ್ರದಲ್ಲಿರುವವರಿಗೆ ಉತ್ತಮ ಅವಕಾಶಗಳು ದೊರೆಯಬಹುದು. ಕೃಷಿಕರಿಗೆ ಅನುಕೂಲಕರ ಕಾಲವಾಗಿದೆ. ಸಾಡೇಸಾತ್ ಶನಿಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು ಒಳಿತು.
ಮೀನ
ವಿದ್ವಾಂಸರ ಸಲಹೆಗಳನ್ನು ಕಾರ್ಯ ಹಾಗೂ ವ್ಯವಹಾರಗಳಲ್ಲಿ ಅಳವಡಿಸಿಕೊಂಡರೆ ಒಳಿತು. ಅತ್ಯಂತ ಅಗತ್ಯವಾದ ವಿಷಯಗಳಿಗೆ ಮಹತ್ವ ನೀಡಿರಿ. ಟೀಕೆಗಳಿಗೆ ಹೆದರಿ ಮಂಕಾಗದೆ ಆತ್ಮವಿಶ್ವಾಸದಿಂದ ಮುಂದುವರಿಯಿರಿ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳೊಂದಿಗೆ ತಾಳ್ಮೆಯಿಂದ ವರ್ತಿಸಬೇಕು. ವಿಷ್ಣು ಸಹಸ್ರನಾಮ ಹಾಗೂ ಲಲಿತಾ ಸಹಸ್ರನಾಮ ಪಾರಾಯಣ ಮಾಡುವುದು ಒಳಿತು. ಸಂಗಾತಿಯ ಕಡೆಯಿಂದ ಉತ್ತಮ ಸಹಕಾರ ದೊರೆಯಲಿದೆ.
ಜ್ಯೋತಿಷ್ಯ ಸೇವೆಗಳು
ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು. ಶುಭಕಾರ್ಯಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು. ಕವಡೆ ಪ್ರಶ್ನೆಯ ಮೂಲಕ ಸಲಹೆ ಹಾಗೂ ವಾಸ್ತು ಸಲಹೆ ನೀಡಲಾಗುವುದು. ವಿವಾಹ ಹೊಂದಾಣಿಕೆ ಮತ್ತು ಜಾತಕ ವಿಮರ್ಶೆ ಮಾಡಲಾಗುವುದು.







































