[t4b-ticker]

ವಾರಭವಿಷ್ಯ 09.08.2026 ರಿಂದ 15.08.2026ರ ವರೆಗೆ

Picture of RB NEWS

RB NEWS

Bureau Report

ಮೇಷ : ಆರ್ಥಿಕವಾಗಿ ಅತೀ ಹೆಚ್ಚಿನ ಜಾಗ್ರತೆವಹಿಸಬೇಕಾಗುತ್ತದೆ. ಹೆಚ್ಚಿನ ಹೂಡಿಕೆಗಳು ಈಗಿನ ಪರಿಸ್ಥಿತಿಯಲ್ಲಿ ಸಮಸ್ಯೆಗಳನ್ನು ತಂದುಕೊಡಲಿವೆ, ವಿದ್ಯಾರ್ಥಿಗಳಿಗೆ ಆಗಾಗ ಉದಾಸೀನತೆ ಬಂದು ಹಿನ್ನೆಡೆಯನ್ನು ಅನುಭವಿಸಲಿದ್ದೀರಿ. ಸಹೋದರ ವರ್ಗದವರ ಸಹಕಾರ ಪಡೆಯಲಿದ್ದೀರಿ. ಮನೆ ವಾಹನ ಭೂಮಿ ಖರೀಧಿ ಮಾಡುವ ಯೋಚನೆ ಮಾಡಲಿರುವಿರಿ, ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ.

ವೃಷಭ : ಕಾರ್ಯ ಕ್ಷೇತ್ರದ ಒತ್ತಡ, ದೇಹಾರೋಗ್ಯದ ಮೇಲೆ ಪರಿಣಾಮ ಉಂಟಾಗಲಿದೆ. ಕೌಟುಂಬಿಕವಾಗಿ ಮಾತಿನ ಕಲಹ ಉಂಟಾಗಲಿದೆ. ಅವಿವಾಹಿತರ ವೈವಾಹಿಕ ಪ್ರಸ್ತಾವನೆಗಳು ನಿಧಾನಗತಿಯನ್ನು ಹೊಂದಲಿವೆ. ನೀಚ ಶುಕ್ರನನ್ನು ಪ್ರಾರ್ಥಿಸಿರಿ. ಕರ್ಮ ಸ್ಥಾನದ ರಾಹು ಆರ್ಥಿಕ ಸ್ಥಿತಿಯನ್ನು ವ್ಯತ್ಯಾಸ ಮಾಡಲಿದ್ದಾನೆ. ಶನಿಯ ವಕ್ರಗತಿಯೂ ಮುಂದುವರಿಯಲಿದೆ.

ಮಿಥುನ : ದೈವಾನುಗ್ರಹ ಪಡೆದಿರುವ ನೀವು ಭಾಗ್ಯಶಾಲಿಗಳು ಕುಜ ಜನ್ಮರಾಶಿಯಲ್ಲಿ ಇದ್ದುಕೊಂಡು ಆರೋಗ್ಯದ ಕಡೆಗೆ ಗಮನ ಕೊಡುವಂತೆ ಸೂಚನೆ ಕೊಡುತ್ತಿದ್ದಾನೆ. ಅಹಂಕಾರ ಬಿಟ್ಟು ನ್ಯಾಯವಾದ ರೀತಿಯಲ್ಲಿ ಮುಂಡುವರಿಯಿರಿ, ಆತ್ಮವಿಶ್ವಾಸ ನಿಮ್ಮಲ್ಲಿರಲಿ, ಮನೆಯಲ್ಲಿ ಶುಭ ಮಂಗಳ ಕಾರ್ಯದ ನಿಮಿತ್ತ ಓಡಾಟ ಇರುತ್ತದೆ. ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸದ ಕನಸು ನನಸಾಗಲಿದೆ.

ಕರ್ಕಾಟಕ : ವ್ಯಾಪಾರ ವ್ಯವಹಾರಗಳು ನಿರೀಕ್ಷಿತ ರೀತಿಯಲಿ ಅಭಿವೃದ್ಧಿದಾಯಕವಾಗಿ ಮುಂಡುವರಿಯಲಿವೆ. ಆದರೂ ಕುಜ ರಾಹು ಶನಿ ಸೂಚಿಸುವಂತೆ ಎಚ್ಚರಿಕೆಯ ಹೆಜ್ಜೆ ಅಗತ್ಯವಾಗಿದೆ. ಮಾನಸಿಕ ಒತ್ತಡ ಹೆಚ್ಚಾಗಿರುತ್ತದೆ. ಅಲರ್ಜಿ ಕೆಮ್ಮು ಜ್ವರ ಕಾಡಲಿದೆ. ವಿವಾಹ ಹೊಂದಾಣಿಕೆ ನೀವು ತಿಳಿದಷ್ಟು ಸುಲಭವಾಗಿರುವುದಿಲ್ಲ. ನಾಗ ದೇವರ ಪ್ರಾರ್ಥನೆ ಅಗತ್ಯವಿರುತ್ತದೆ.

ಸಿಂಹ : ನೀವು ಬಹಳ ವಿದ್ಯಾವಂತರಿದ್ದರೂ ನಿಮ್ಮಲ್ಲಿರುವ ಅಹಂಕಾರ ಕಣ್ಣಿಗೆ ಬಟ್ಟೆ ಕಟ್ಟಿದಂತಾಗಲಿದೆ. ಗುರು ರವಿ ಬುಧ ವ್ಯಯದಲ್ಲಿ ಇರುವ ಕಾರಣ ಕೇತು ಜನ್ಮ ರಾಶಿಯಲ್ಲಿ ಇದ್ದು ಋಣಾತ್ಮಕ ಚಿಂತನೆ ಮಾಡಲಿರುವಿರಿ. ನಿಮ್ಮ ಅಭಿವೃದ್ಧಿಗೆ ಬಂಧು ವರ್ಗದವರು ಅಸೂಯೆ ಪಡಲಿದ್ದಾರೆ. ಆರೋಗ್ಯದ ಬಗ್ಗೆ ಹಳೆಯ ಕಾಯಿಲೆ ಮತ್ತೆ ಕಂಡು ಬರಲಿದೆ. ವೃತ್ತಿರಂಗದಲ್ಲಿ ಭಡ್ತಿಯ ಅವಕಾಶವನ್ನು ಕಳೆದುಕೊಳ್ಳಲಿದ್ದೀರಿ.

ಕನ್ಯಾ : ನೀಚ ಶುಕ್ರನ ದೃಷ್ಟಿ ಶನಿಯ ಮೇಲೆ ಇರುವುದರಿಂದ ಮಹಿಳೆಯರ ಬಗ್ಗೆ ಬಹಳ ಎಚ್ಚರವಹಿಸಬೇಕಾಗಿದೆ ಗುರುವಿನ ಪೂರ್ಣಾನುಗ್ರಹ ಇರುವುದರಿಂದ ಅನೇಕ ಮೂಲಗಳಿಂದ ಲಾಭವನ್ನು ಗಳಿಸಳಿದ್ದೀರಿ. ಒಣ ಜಂಬದಿಂದಾಗಿ ಸಂಸಾರದಲ್ಲಿ ಖರ್ಚು ಹೆಚ್ಚಾಗಲಿದೆ. ವಿದ್ಯಾರ್ಥಿಗಳು ಪ್ರೀತಿ ಪ್ರೇಮದ ಸಾಗರದಲ್ಲಿ ಈಜಾಡಲಿದ್ದಾರೆ. ಸಂಚಾರ ಹಾಗೂ ಆರೋಗ್ಯದ ಬಗ್ಗೆ ಎಚ್ಚರವಿರಲಿ.

ತುಲಾ : ಶುಕ್ರ ವ್ಯಯದಲ್ಲಿ ಬಂದಿರುವುದರಿಂದ ಷುಗರ್ ಸಮಸ್ಯೆ ಹೆಚ್ಚಾಗಲಿದೆ.ಮಹಿಳೆಯರಿಗೆ ಆರೋಗ್ಯದ ಸಮಸ್ಯೆ ಉಂಟಾಗಲಿದೆ, ರೈತರಿಗೆ ಬೆಳೆಯಲ್ಲಿ ನಷ್ಟ ಕಂಡು ಬರಲಿದೆ. ವಿದ್ಯಾರ್ಥಿಗಳು ಹಿರಿಯರಲ್ಲಿ ಕಲಹ ಮಾಡಲಿದ್ದಾರೆ. ಸಂಗೀತ ನೃತ್ಯ ಇತ್ಯಾದಿ ಕಲೆಗಳಲ್ಲಿ ಇರುವವರಿಗೆ ವಿಶೇಷ ಅವಕಾಶಗಳು ಒದಗಿ ಬರಲಿದೆ. ಮಕ್ಕಳ ವಿಷಯದಲ್ಲಿ ಎಚ್ಚರವಾಗಿರಿ.

ವೃಶ್ಚಿಕ : ಅಷ್ಟಮದಲ್ಲಿ ಕುಜ ಬಂದಿದ್ದಾನೆ. ದಾಂಪತ್ಯದಲ್ಲಿ ಕಿರಿಕಿರಿ ಹೆಚ್ಚಾಗಲಿದೆ. ಶನಿ ರಾಹು ಮಕ್ಕಳಲ್ಲಿ ಕಲಹವನ್ನು ತರಲಿದ್ದಾನೆ. ಕೌಟುಂಬಿಕವಾಗಿ ಆಗಾಗ ನೆರೆಹೊರೆಯವರ ಕಿರಿಕಿರಿ ಚಾಡಿ ಮಾತುಗಳು ತಲೆಕೆಡಿಸಲಿವೆ. ದೈವಾನುಗ್ರಹ ಉತ್ತಮವಾಗಿದೆ. ಅನೇಕ ಮೂಲಗಳಿಂದ ಆದಾಯ ಬರಲಿದೆ. ನಿಮ್ಮ ಮೇಲೆ ಅಸೂಯೆ ಪಡುವವರಿದ್ದಾರೆ. ರಕ್ತ ಸಂಬಂಧಿ ಆರೋಗ್ಯ ಸಮಸ್ಯೆ ಕಾಡಲಿದೆ.

ಧನು : ಸಪ್ತಮದಲ್ಲಿ ಕುಜನಿರುವುದು ಅಷ್ಟಮದಲ್ಲಿ ಗುರು ರವಿ ಬುಧನಿರುವುದು ನೀವು ಎಚ್ಚರದಿಂದ ಇರಬೇಕಾದ ಅವಶ್ಯಕತೆಯನ್ನು ತಿಳಿಸುತ್ತಿದ್ದಾರೆ. ತಾಯಿಯವರ ಅನಾರೋಗ್ಯ ಸ್ಥಿತಿಯನ್ನು ತಿಳಿಸುತ್ತಿದ್ದಾರೆ. ಇದ್ದುದರಲ್ಲಿಯೇ ತೃಪ್ತಿಯನ್ನು ಹೊಂದಿರಿ, ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಉತ್ತಮ ಹುದ್ದೆ ಹೊಂದಲು ಹರ ಸಾಹಸ ಪಡ ಬೇಕಾಗುತ್ತದೆ. ಉದ್ಯೋಗದಲ್ಲಿ ಮಹಿಳೆಯರ ಬಗ್ಗೆ ಎಚ್ಚರವಿರಲಿ.

ಮಕರ : ಗುರುವಿನ ಅನುಗ್ರಹದಿಂದಾಗಿ ಸಾಮಾಜಿಕ ರಂಗದಲ್ಲಿ ಗೌರವ ದೊರೆಯಲಿದೆ. ವೃತ್ತಿರಂಗದಲ್ಲಿ ಹೊಸ ಅವಕಾಶಗಳು ಒದಗಿ ಬರಲಿದೆ. ಆರ್ಥಿಕವಾಗಿ ಋಣ ಭಾಧೆ ಕಾಡಲಿದೆ. ಕುಜ ಭೂಮಿಯ ಬಗ್ಗೆ ಕಲಹವನ್ನು ತರುವ ಸಾಧ್ಯತೆ ಇರುತ್ತದೆ. ನಿಮಗೆ ಅನಾರೋಗ್ಯವನ್ನು ತರುವ ಸಾಧ್ಯತೆ ಇರುತ್ತದೆ. ಸದಾ ತಲೆನೋವು ಕಾಡಲಿದೆ. ಗಣಪತಿ ಅಷ್ಟೋತ್ತರ ಪಾರಾಯಣ ಅಗತ್ಯವಿದೆ. ಹೆಣ್ಣು ಮಗುವಿನ ಜನನ ಆಗುವ ಸಾಧ್ಯತೆ ಇರುತ್ತದೆ.

ಕುಂಭ : ದೈವಾನುಗ್ರಹದ ಕೊರತೆ ಹಾಗೂ ಜನ್ಮ ರಾಶಿಯಲ್ಲಿ ಇರುವ ಶನಿ ರಾಹು ಹೆಜ್ಜೆ ಹೆಜ್ಜೆಗೂ ಕಾಡಲಿದೆ. ರಾಜಕೀಯ ಹಿನ್ನೆಡೆಯನ್ನು ಅನುಭವಿಸುವಿರಿ. ಶತ್ರುಗಳ ಕಿರಿಕಿರಿ ಸದಾ ಕಾಡಲಿದೆ. ಕಷ್ಟಕರ ವಾತಾವರಣವನ್ನು ಎದುರಿಸಬೇಕಾಗುತ್ತದೆ. ಮಕ್ಕಳ ಕಿರಿಕಿರಿ ಬೇಸರ ತರಲಿದೆ. ಆದರೂ ನಿಮ್ಮ ಮನೋಬಲ ನಿಮ್ಮನ್ನು ಕಾಪಾಡಲಿದೆ. ಧನದ ಚಿಂತೆ ಹತ್ತು ಹಲವಾರು ಸಮಸ್ಯೆಗಳನ್ನು ತರಲಿವೆ.

ಮೀನಾ : ವಯಕ್ತಿಕವಾಗಿ ಮಾಡಿದ ತಪ್ಪುಗಳ ವಿಮರ್ಶೆ ಮಾಡಬೇಕಾಗಿದೆ. ದೈವಾನುಗ್ರಹ ಉತ್ತಮವಾಗಿದ್ದರೂ ಕುಜ ಸುಖ ಭಾವದಲ್ಲಿ ಇದ್ದುಕೊಂಡು ಅನಾರೋಗ್ಯವನ್ನೂ ತರಲಿದ್ದಾನೆ. ಜೊತೆಗೆ ಸಪ್ತಮದಲ್ಲಿ ನೀಚ ಶುಕ್ರ ದಾಂಪತ್ಯದಲ್ಲಿ ಕಿರಿಕಿರಿ ಬರುವಂತೆ ಮಾಡಲಿದ್ದಾನೆ. ದೇವಿಯ ಅಷ್ಟೋತ್ತರ ಪಾರಾಯಣ ಅಗತ್ಯವಿದೆ. ಸಂಗಾತಿಯೊಂದಿಗೆ ಅನುಮಾನ ಪಡುವುದು ಒಳ್ಳೆಯ ಲಕ್ಷಣವಲ್ಲ.

.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top