







ವಾರ ಭವಿಷ್ಯ
ದಿನಾಂಕ 12.01.2025 ರಿಂದ ದಿನಾಂಕ 18.01.2025 ರ ವರೆಗೆ
ವಿಶೇಷ ದಿನಗಳು : 14.01.2025……ಮಕರ ಸಂಕ್ರಮಣ ;ತಿಲ ಸಂಕ್ರಾಂತಿ :
17.01.2025…..ಸಂಕಷ್ಟಹರ ಚತುರ್ಥಿ
ಮೇಷ : ಕುಜ 21.01.2025 ರಂದು ಮಿಥುನ ರಾಶಿಯನ್ನು ,ರವಿ ಯು ಮಕರರಾಶಿಯನ್ನು
14.01.2025 ರಂದು ಪ್ರವೇಶ ಮಾಡುತ್ತಿದ್ದಾರೆ. ಗುರುವಿನ ಅನುಗ್ರಹ ಪೂರ್ಣವಾಗಿ ಪಡೆಯುತ್ತಿದ್ದೀರಿ.
ನೀವು ಮಾಡುತ್ತಿರುವ ಉದ್ಯೋಗ,ವ್ಯವಹಾರ ದಲ್ಲಿ ಸ್ಥಾನಮಾನ ,ಭಡ್ತಿ ಗೌರವ ಪ್ರಾಪ್ತಿ ಆಗಲಿದೆ.
ಪ್ರಶಂಸೆ ಬರಲಿದೆ ವಿದ್ಯಾರ್ಥಿಗಳಿಗೆ ಸಂತೋಷದ ಸಮಯ .ಆರೋಗ್ಯದಲ್ಲಿ ಚೇತರಿಕೆ ಕಂಡು ಬರುವ
ಸಮಯವಾಗಿದೆ. ಅವಿವಾಹಿತರಿಗೆ ವಿವಾಹದ ಬಗ್ಗೆ ಮಾತುಕತೆ ನಡೆಯಲಿದೆ. ನಿಮ್ಮ ವರ್ತನೆಯಲ್ಲಿ
ಬದಲಾವಣೆಯನ್ನು ಕಾಣುವ ಸಮಯವಾಗಿದೆ .ಧನಲಾಭದ ಸೂಚನೆ ಇರುತ್ತದೆ. ಸಾಡೇ ಸಾತ್ ಶನಿಯ
ಪ್ರಭಾವದ ಆರಂಭ ಮಾರ್ಚ್ 29 ,2025 ರಿಂದ ಆರಂಭವಾಗಲಿದೆ. ವಿಷ್ಣು ಸಹಸ್ರನಾಮ ಪಾರಾಯಣ
ಈಗದಿಂದಲೇ ಆರಂಭ ಮಾಡಿರಿ.
ವೃಷಭ : ಕುಜ ದ್ವಿತೀಯಾಕ್ಕೆ ಬರುತ್ತಿದ್ದಾನೆ .ರವಿ ಭಾಗ್ಯಕ್ಕೆ ಶನಿಯ ಮನೆಗೆ ಬರುವ ಸಮಯ.
ಬದಲಾವಣೆ ಜಗತ್ತಿನ ನಿಯಮ. ನಿಮ್ಮನ್ನು ಹೊಗಳಿ ಕೊಂಡಾಡುತ್ತಿರುವವರು ಒಮ್ಮೆಲೇ ತೆಗಳಲು
ಆರಂಭಿಸುವರು .ಬದಲಾವಣೆಯನ್ನು ತಾಳ್ಮೆಯಿಂದ ಗಮನಿಸಿರಿ. ಯಾರಲ್ಲಿಯೂ ನಿಷ್ಠುರ ಮಾಡಿಕೊಳ್ಳದೆ
ಮುಂದುವರಿಯುವುದು ನಿಮ್ಮ ಕೈಯಲ್ಲಿದೆ. ಸಾಲ ಮಾಡುವುದು , ಕೊಡುವುದು ,ಹಣ ತೊಡಗಿಸುವುದು
ಸಧ್ಯಕ್ಕೆ ಬೇಡ. ಗಣಪತಿ ಅಥರ್ವಶೀರ್ಷ ಪಾರಾಯಣ ಅಗತ್ಯವಾಗಿದೆ. ನಿಮ್ಮ ದೊಡ್ಡಣ್ಣನವರಿಗೆ
,ತಂದೆಯವರಿಗೆ ಆರೋಗ್ಯದ ಸಮಸ್ಯೆ ಬರುವ ಸಮಯವಾಗಿದೆ .ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕಂತೆ ಫಲ
ದೊರೆಯಲಿದೆ.
ಮಿಥುನ : ಕುಜ ನಿಮ್ಮ ರಾಶಿಗೆ ವಕ್ರಿಯಾಗಿ ಬರುತ್ತಿದ್ದಾನೆ ರವಿ ಮಕರ ರಾಶಿಗೆ ಬರುತ್ತಿದ್ದಾನೆ. ನಿಮ್ಮ
ಯೋಜನೆಗಳೆಲ್ಲ ನೀವು ನಿರ್ಧರಿಸುವ ವೇಳೆಗೆ ,ಅದರ ಅವಧಿ ಮುಗಿದಿರುತ್ತದೆ. ಕುಟುಂಬದಲ್ಲಿ ಅಭಿಪ್ರಾಯ
ಭೇಧ ಬರಲಿದೆ. ಆತ್ಮೀಯರೊಡನೆ ತಾತ್ವಿಕ ಕಲಹ ಮಕ್ಕಳಿಗೆ ಆರೋಗ್ಯ ಹಾನಿ ಆಗುವ ಸಾಧ್ಯತೆ ಇರುತ್ತದೆ.
ನೀವು ಮಾಡುವ ಯಾವುದೇ ವ್ಯವಹಾರ,ಉದ್ಯೋಗದಲ್ಲಿ ಹಿತ ಶತ್ರುಗಳ ಕಾಟ ಇರುತ್ತದೆ.ಮಹಾ
ಸುಧರ್ಶನ ಮಂತ್ರ ಪಾರಾಯಣ ಅದ್ಭುತ ಪರಿಣಾಮವನ್ನು ನೀಡಲಿದೆ. ಅನೇಕ ರೀತಿಯ ಖರ್ಚು ಭಾಧೆಗಳು
ಬರಲಿವೆ .ಎಲ್ಲ ರೀತಿಯಲ್ಲಿ ಜಾಗ್ರತೆಯಿಂದ ಮುಂದುವರಿದಲ್ಲಿ ಯಶಸ್ವಿಯಾಗುವಿರಿ.
ಕರ್ಕಾಟಕ : ಕುಜ ಮಿಥುನ ರಾಶಿಗೆ ,ರವಿ ಯು ಮಕರ ರಾಶಿಗೆ ಸಂಚಾರ ಮಾಡುತ್ತಿದ್ದು ಅನೇಕ
ಬದಲಾವಣೆಗಳನ್ನು ಕಾಣುವಿರಿ. ಮನೆಯಲ್ಲಿ ಸಂಗಾತಿಯ ಕಿರಿಕಿರಿ ಮಾತು ಮಾತಿಗೆ ಇರುತ್ತದೆ. ನಿಮ್ಮ
ವ್ಯವಹಾರ ,ಉದ್ಯೋಗದಲ್ಲಿ ತಡೆ ಯಾ ವಿಳಂಬ ಇರುತ್ತದೆ.ಮೃತ್ಯುಂಜಯ ಜಪ ,ವಿಷ್ಣು ಸಹಸ್ರ ನಾಮ
ಪಾರಾಯಣ ಮಾಡುತ್ತಾ ಬನ್ನಿರಿ. ಪಿತ್ತ ಉಷ್ಣ, ಪೀಡೆ ತೋರಿಬಂದು ಆರೋಗ್ಯ ಕೊಂಚ ಹದಗೆಡುವ ಸಾಧ್ಯತೆ ಇರುತ್ತದೆ. ವಿವಾಹವಾಗುವ ಅಪೇಕ್ಷಿತರು ಎಚ್ಚರವಹಿಸಿರಿ. ಪಾಲುಗಾರಿಕೆ ವ್ಯವಹಾರ ಕೂಡಿ
ಬರುವುದಿಲ್ಲ. ವಿದ್ಯಾರ್ಥಿಗಳಿಗೆ ದೂರ ಪ್ರಯಾಣ ಯೋಗವಿದೆ. ತಾಳ್ಮೆ ಅತೀ ಅಗತ್ಯವಿದೆ.
ಸಿಂಹ : ದಿನಾಂಕ 02.04.2025 ರವರೆಗೆ ಕುಜನ ಪೂರ್ಣ ಅನುಗ್ರಹ ನಿಮ್ಮ ಮೇಲಿರುತ್ತದೆ. ನಿಮ್ಮ ಕನಸಿನ
ಮನೆಯ ನಿರ್ಮಾಣ,ಭೂಮಿ ಖರೀಧಿ.ವಾಹನ ಖರೀಧಿ ನಡೆಯಲಿದೆ. ರವಿಯ ಮಕರ ರಾಶಿ ಪ್ರವೇಶ ನಿಮ್ಮ
ಜೀವನದಲ್ಲಿ ಒಂದು ತಿಂಗಳು ಅತ್ಯಂತ ಸಂತೋಷದ ಸಮಯ. ರಾಜಕೀಯ ವ್ಯಕ್ತಿಗಳಿಗೆ ವಿಶೇಷ ಸ್ಥಾನ
ಮಾನ ದೊರೆಯುವ ಸಮಯವಾಗಿದೆ.ಉದ್ಯೋಗ ವ್ಯವಹಾರಗಳಲ್ಲಿ ಮೂಲಧನಕ್ಕೆ ತೊಂದರೆ ಆಗದಂತೆ
ಎಚ್ಚರ ವಹಿಸಿಕೊಂಡು ಮುಂದುವರಿಯಿರಿ. ಅಧಿಕಾರಿ ವರ್ಗದವರ ಜೊತೆಗೆ ಕಲಹ ಬರದಂತೆ
ಎಚ್ಚರವಹಿಸಿರಿ. ಅಹಂ ‘ಕಾರದಿಂದ ಹೊರಗೆ ಬನ್ನಿರಿ. ಯೋಗ್ಯ ವಯಸ್ಕರಿಗೆ ವೈವಾಹಿಕ ಭಾಗ್ಯಕ್ಕೆ ಮೇ
14, 2025 ರ ವರೆಗೆ ಕಾಯಬೇಕಾದ ಅನಿವಾರ್ಯತೆ ಕಂಡು ಬರುತ್ತಿದೆ.
ಕನ್ಯಾ : ಭಾಗ್ಯದ ಗುರು ಜೀವನದಲ್ಲಿ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸನ್ನು ನೀಡಲಿದ್ದಾನೆ. ರವಿ
ಮತ್ತು ಕುಜನ ಹೊಸ ರಾಶಿಗೆ ಚಲನೆ ಶುಭ ಅಶುಭ ಫಲವನ್ನು ಉದ್ಯೋಗ ಕ್ಷೇತ್ರದಲ್ಲಿ ನೀಡಲಿದ್ದಾರೆ.
ಸಹೋದರ ತನ್ನ ಆರೋಗ್ಯದ ಬಗ್ಗೆ ಎಚ್ಚರದಲ್ಲಿ ಇರುವಂತೆ ತಿಳಿಸಿರಿ .ಆರೋಗ್ಯದಲ್ಲಿ ಪಿತ್ತ ಉಷ್ಣ
ವಾಯು ಪ್ರಕೋಪ ತೋರಿಬರಲಿದೆ. ರವಿ ಮಕ್ಕಳೊಂದಿಗೆ ವಿರಸವನ್ನು ತರಬಹುದು. ರಾಹು ಕೇತು ಗ್ರಹರು
ಸಂಸಾರದಲ್ಲಿ ಕಿರಿಕಿರಿಯನ್ನು ತಂದರೂ ಗುರುವಿನ ಅನುಗ್ರಹದಿಂದ ಅನುಕೂಲವಾಗಲಿದೆ. ಭೂಮಿಯ
ವ್ಯವಹಾರ ಎಚ್ಚರಿಕೆಯಿಂದ ಮಾಡಿದಲ್ಲಿ ಲಾಭವಾಗಲಿದೆ. ಶನಿಯ ಜೊತೆಗಿನ ಶುಕ್ರ ಶುಭ ಚಿಂತನೆಗೆ ,ಧನ
ಆದಾಯಕ್ಕೆ ಕಾರಣನಾಗಲಿದ್ದಾನೆ .ಶಿವನ ಸ್ಮರಣೆ ಅಗತ್ಯವಾಗಿದೆ.
ತುಲಾ : ನಿಮಗೆ ಪ್ರಸ್ತುತ ಭಾಗ್ಯದಲ್ಲಿ ಕುಜ ಅಷ್ಟಮದಲ್ಲಿ ಗುರು ,ಚತುರ್ಥದಲ್ಲಿ ರವಿ ,ಪಂಚಮದಲ್ಲಿ
ಶನಿ, ಶುಕ್ರ ,ವ್ಯಯದಲ್ಲಿ ಕೇತು ಕಷ್ಟದ ಸಮಯವನ್ನು ,ನೀಡುತ್ತಿದ್ದಾರೆ. ನಿತ್ಯವೂ ಶಿವ ಸ್ಮರಣೆಯನ್ನು
ಮಾಡುವಂತೆ ತಿಳಿಸುತ್ತಿದ್ದಾರೆ.ಸ್ವಪ್ರಯತ್ನ ಎಷ್ಟೇ ಮಾಡಿದರೂ ಫಲ ಶೂನ್ಯತೆಯನ್ನು ಕಂಡಾಗ
ಮನಸ್ಸಿಗೆ ಒತ್ತಡ ಉಂಟಾಗಲಿದೆ .ಸಾಲ ಮಾಡಲು ಹೋಗಬೇಡಿರಿ. ನಿಷ್ಠುರ ಮಾತುಗಳು ಬೇಡ. ಕುಲ
ದೇವಾಲಯಕ್ಕೆ ಹೋಗಿ ಬನ್ನಿರಿ. ಮೇ 14 ರ ನಂತರ ಅನೇಕ ಶುಭ ಬದಲಾವಣೆಗಳನ್ನು ಕಾಣಲಿದ್ದೀರಿ.
ವಿದ್ಯಾರ್ಥಿಗಳು ನಾಗ ದೇವರ ಪ್ರಾರ್ಥನೆ ಮಾಡಿರಿ. ಯಶಸ್ಸನ್ನು ಕಾಣುವಿರಿ.
ವೃಶ್ಚಿಕ : ಗುರುವಿನ ದೈವಾನುಗ್ರಹದಿಂದ ಧೈರ್ಯ ,ನೆಮ್ಮದಿ ನಿಮ್ಮ ಮುನ್ನೆಡೆಗೆ ಸಹಾಯಕವಾಗಲಿದೆ.
ಕುಜ 6ನೇ ಯವನು 8 ಕ್ಕೆ ಬರುತ್ತಿದ್ದಾನೆ. ಶತ್ರು ಭಾಧೆ ,ಅನಾರೋಗ್ಯ ಭಾಧೆ ಬರುವ ಸಮಯವಾಗಿದೆ
02.04.2025 ರ ವರೆಗೆ ಎಚ್ಚರವಾಗಿರಬೇಕು. “ಉಗ್ರಮ್ ವೀರಮ್ ……..”ನರಸಿಂಹ ದೇವರ
ಮಂತ್ರವನ್ನು 108 ಬಾರಿ ನಿತ್ಯವೂ ಪಾರಾಯಣ ಮಾಡಬೇಕು. ರವಿಯ ಮಕರ ರಾಶಿ ಪ್ರವೇಶ ರಾಜಕೀಯ
ಗಣ್ಯರಿಗೆ ಅದ್ಭುತ ಶುಭ ಫಲವನ್ನು ನೀಡಲಿದೆ. ಉತ್ತಮ ಸ್ಥಾನ ಮಾನ ಲಭಿಸಲಿದೆ. ಹೊಸ ಯೋಜನೆಗಳಿಗೆ
ಧನ ವಿನಿಮಯ ಆಗುವ ಸಮಯವಾಗಿದೆ. ಅಧಿಕಾರಿ ವರ್ಗದವರಿಗೆ ಮುಂಬಡ್ತಿ ಆಗುವ ಸಮಯವಾಗಿದೆ.
ಶನಿಯ ಜೊತೆಗೆ ಶುಕ್ರ ಇರುವುದರಿಂದ ಶುಭ ಫಲವೇ ಸಿಗಲಿದೆ. ಬರುವ ಆದಾಯಕ್ಕೆ ಯಾವುದೇ ಕೊರತೆ
ಇರುವುದಿಲ್ಲ.
ಧನು : ಕುಜ ಸಪ್ತಮಕ್ಕೆ ಬರುತ್ತಿದ್ದಾನೆ. ರವಿ ಮಕರ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. ಗುರುವಿನ
ಅನುಗ್ರಹದ ಕೊರತೆ ಇದೆ. ಸಂಸಾರದಲ್ಲಿ ಮತ್ತು ಸಂಗಾತಿಯೊಂದಿಗೆ ತಾಳ್ಮೆಯೊಂದಿಗೆ, ಹಣದ
ವಿಷಯದಲ್ಲಿ ಹಿಡಿತದೊಂದಿಗೆ ಸಾಗುವುದು ಅಗತ್ಯವಾಗಿದೆ. ಭೀತಿಯಿಂದಲೇ ಜೀವನ ಮುಂದೆ ಸಾಗಲಿದೆ.
ಬಂಧುಗಳಿಗೆ ಉಪಕಾರ ಮಾಡಲು ಹೋಗಿ ತಾನೇ ತೊಂದರೆಗೆ ಒಳಗಾಗುವಿರಿ. ಚರ್ಚೆ, ವಿಚಾರ
ವಿನಿಮಯದಿಂದ, ಕಾರ್ಯ ಸಿದ್ಧಿ. ಧಾರ್ಮಿಕ ವಿಚಾರಗಳಲ್ಲಿ ಬಿಡುವಿಲ್ಲದ ದುಡಿಮೆ.ಬಿಪಿ ಷುಗರ್
ಇದ್ದಲ್ಲಿ ವೈದ್ಯರಿಂದ ತಪಾಸಣೆ ಮಾಡಿಕೊಳ್ಳಿರಿ. ಮನೆಯಲ್ಲಿ ಅಂತ: ಕಲಹಕ್ಕೆ ಕಾರಣರಾಗದಿರಿ. ಶುಕ್ರ
ಮತ್ತು ಶನಿ ನಿಮ್ಮ ಜೊತೆಯಲ್ಲಿ ಇದ್ದು ಶುಭ ಫಲವನ್ನುನೀಡುತ್ತಿದ್ದಾರೆ.
ಮಕರ : ಕುಜ ಮಿಥುನ ರಾಶಿಗೆ ಬರುತ್ತಿದ್ದಾನೆ. ರವಿ ಜನ್ಮಕ್ಕೆ ಬರುತ್ತಿದ್ದಾನೆ. ಸಾಡೇ ಸಾತ್ ಶನಿಯ
ಪ್ರಭಾವ ಇನ್ನೂ ಮಾರ್ಚ್ ತಿಂಗಳ ಕೊನೆಯ ವರೆಗೆ ಇರುತ್ತದೆ. ತನ್ನವರೆ ತನಗೆ ವೈರಿಯಾದಾಗ
,ಭಾಧಕವಾದಾಗ ಸುಧರ್ಶನ ದೇವರನ್ನೆ ಪ್ರಾರ್ಥಿಸ ಬೇಕಾಗುತ್ತದೆ. ವೃತ್ತಿರಂಗದಲ್ಲಿ ಉತ್ತಮ ಧನಾಗಮನ
ಇದ್ದರೂ ತಮ್ಮವರ ಕಾರಣದಿಂದಲೇ ಸಮಸ್ಯೆಗಳು ಕಾಡಲಿವೆ. ತಂದೆ ,ತಾಯಿ ಮಕ್ಕಳೊಂದಿಗೆ ಮನಸ್ತಾಪ
ಶೀತಲ ಯುದ್ಧ ಮುಂದುವರಿಯುತ್ತಿರುತ್ತದೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ನಿಮ್ಮ ಅಕ್ರಮ
ವ್ಯವಹಾರವೊಂದು ಬೆಳಕಿಗೆ ಬರಲಿದೆ. ರಾಜಕೀಯ ಗಣ್ಯರಿಗೆ ಶುಭ ಫಲ ಲಭಿಸಲಿದೆ.
ಕುಂಭ : ದೀರ್ಘ ಕಾಲೀನ ಕಾರ್ಯಗಳಲ್ಲಿ ಲಾಭ ತಂದು ಕೊಡಲಿದೆ.ಧನಾಗಮನದಲ್ಲಿ ತೊಂದರೆ
ಇರಲಾರದು . ನಿಮ್ಮವರ ಜೊತೆಗೆ ಮನಸ್ತಾಪ ಬರದಂತೆ ಎಚ್ಚರವಹಿಸಿರಿ. ನಿಮ್ಮವಿಷಯದಲ್ಲಿ ಕೆಲವರಿಗೆ
ನ್ಯಾಯಾಲಯದಲ್ಲಿ ಇರುವ ಪ್ರಕರಣ ವಿಚಾರಣೆಗೆ ಬರಲಿದೆ. ಶನಿಯ ದೃಷ್ಟಿ ಕುಜನಿಗೆ ಬಿದ್ದಾಗ
ಹೀಗಾಗುವ ಸಾಧ್ಯತೆ ಇದೆ .ರವಿಯು ಸಪ್ತಮಾಧಿಪತಿ ವ್ಯಯಕ್ಕೆ ಬರುತ್ತಿದ್ದಾನೆ. ನಿಮ್ಮ ಸಂಗಾತಿ,
ಪಾಲುದಾರ ಬೇಸರಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಈಶ್ವರ ದೇವರ ಆಲಡೆ ದೇವರ ಪ್ರಾರ್ಥನೆ
ಅಗತ್ಯವಿದೆ. ಬೆಲೆಬಾಳುವ ವಸ್ತುಗಳ ಬಗ್ಗೆ ಎಚ್ಚರ ಇರಲಿ. ಮಹತ್ವದ ವಿಷಯಗಳಲ್ಲಿ ದುಡುಕದಿರಿ
ವಿದ್ಯಾರ್ಥಿಗಳಿಗೆ ಮೊಬೈಲ್ನಿಂದ ದೂರವಿರುವಂತೆ ಶುಕ್ರ ಸೂಚನೆ ಕೊಡುತ್ತಿದ್ದಾನೆ.
ಮೀನ : ಕುಜ ಸುಖ ಸ್ಥಾನಕ್ಕೆ ಬರುತ್ತಿದ್ದಾನೆ. ಸಾಡೇ ಸಾತ್ ಶನಿಯ ಪ್ರಭಾವದಲ್ಲಿ ಇದ್ದೀರಿ. ಗುರುವಿನ
ಅನುಗ್ರಹ ವಂಚಿತರಾಗಿದ್ದೀರಿ. ವಿಷ್ಣು ಸಹಸ್ರನಾಮ ಪಾರಾಯಣದಿಂದ ಮಾತ್ರವೇ ನಿಮ್ಮ ಎಲ್ಲಾ ರೀತಿಯ
ಸಮಸ್ಯೆಗಳು ಪರಿಹಾರವಾಗಲಿದೆ. ಸಹೋದರಿಯ ಆರೋಗ್ಯ ಸಮಸ್ಯೆ ನಿಮ್ಮನ್ನು ಚಿಂತೆಗೀ ಡುಮಾಡಲಿದೆ .
ಸರ್ಜೆರಿ ಮಾಡಬೇಕಾದ ಅವಶ್ಯಕತೆ ಬರುವ ಸಾಧ್ಯತೆ ಇದೆ. ದುರ್ಗೆಯ,ಚಾಮುಂಡಿಯ ಆರಾಧನೆಯಿಂದ
ಸಂಸಾರದಲ್ಲಿ ನೆಮ್ಮದಿ ಬರಲಿದೆ. ಉಳಿತಾಯವೆಲ್ಲಾ ಇಳಿತಾಯವಾಗದಂತೆ ಜಾಗ್ರತೆ ವಹಿಸಿರಿ. ದೃಢ
ನಿರ್ಧಾರ ಬಹಳ ಮುಖ್ಯ.ಬಡ್ಡಿಯ ಆಸೆಯಿಂದ ಯಾವುದೋ ಸಹಕಾರಿ ಬ್ಯಾಂಕಿನಲ್ಲಿ ಎಫ್ ಡಿ ಇಟ್ಟು
ಕಳೆದು ಕೊಳ್ಳುವ ಸಾಧ್ಯತೆ ಕಂಡು ಬರುತ್ತಿದೆ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು. ಜಾತಕವಿಲ್ಲದವರಿಗೆ
ಕವಡೆ ಮೂಲಕ ಪ್ರಸ್ತುತ ವಿಷಯ ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು
ತಿಳಿಸಲಾಗುವುದು. ವಿವಾಹ ಹೊಂದಾಣಿಕೆ/ವಾಸ್ತು ಸಲಹೆ ತಿಳಿಸಲಾಗುವುದು










































