ವಾರ ಭವಿಷ್ಯ ದಿನಾಂಕ 04.05.2025 ರಿಂದ 10.05.2025 ರವರೆಗೆ
ವಶೇಷ ದಿನಗಳು : ದಿನಾಂಕ 06.05.2025 ರಂದು ಮೇಷ ರಾಶಿಗೆ ಬುಧನ ಪ್ರವೇಶ
ಮೇಷ : ಈ ತಿಂಗಳಲ್ಲಿ 14, 18 ಬಹಳ ಮಹತ್ವದ ದಿನವಾಗಿದೆ.ಗುರು ರಾಹು ,ಕೇತು ಇವರ ಸ್ಥಾನ ಬದಲಾವಣೆಯ ದಿನವಾಗಿದೆ. ಮನೆಯ ಸ್ಥಿತಿ –ಗತಿಗಳು ಸುಧಾರಿಸಲು ಹೆಚ್ಚಿನ ಪರಿಶ್ರಮದ ಅಗತ್ಯವಿದೆ. ಸಾಂಸಾರಿಕ ಸುಖ, ಹಣದ ಹೊಂದಾಣಿಕೆ,ಬಹಳ ಅಗತ್ಯವೆನಿಸಲಿದೆ. ಖರ್ಚು ವೆಚ್ಚಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕಿದೆ. ಸಾಡೇಸಾತ್ ಶನಿಯ ಪ್ರಭಾವ ಪದೇ ಪದೇ ಗಮನಕ್ಕೆ ಬರಲಿದೆ. ವಿಷ್ಣು ಸಹಸ್ರನಾಮ ಪಾರಾಯಣ ,ಗಣಪತಿ ದೇವರ ಅಥರ್ವ ಶೀರ್ಷ ಪಾರಾಯಣ ಅಗತ್ಯವಾಗಲಿದೆ. ಹಿರಿಯರ ಪ್ರೀತಿಯಿಂದ ಬಹಳ ದೂರಕ್ಕೆ ಹೋಗಿರುವ ನೀವು ಎಚ್ಚರದಿಂದ ಇರಬೇಕಿದೆ. ಆರೋಗ್ಯದ ಬಗ್ಗೆ ಆಗಾಗ ಕಿರಿಕಿರಿ ಆಗುತ್ತಿರುತ್ತದೆ.ವೃತ್ತಿ, ವ್ಯವಹಾರದಲ್ಲಿ ಎಚ್ಚರವಾಗಿರಿ. ರಾಹು ಲಾಭ ಕ್ಷೇತ್ರಕ್ಕೆ ಬರುತ್ತಿರುವುದರಿಂದ ಬರುವ ಆದಾಯಕ್ಕೆ ಕೊರತೆ ಇರುವುದಿಲ್ಲ.
ವೃಷಭ : ಮೇ 14 ರಿಂದ ನಿಮಗೆ ದೈವಾನುಗ್ರಹ ಪ್ರಾಪ್ತಿಯಾಗಲಿದೆ. ಕೇತು ಚತುರ್ಥಕ್ಕೆ ಬರುವುದರಿಂದ ಒಂದೂವರೆ ವರ್ಷಗಳ ಕಾಲ ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಎಚ್ಚರವಾಗಿರಬೇಕು. ಕರ್ಮ ಕ್ಷೇತ್ರಕ್ಕೆ ರಾಹುವಿನ ಪ್ರವೇಶವಾಗಲಿದೆ. ನಿಮ್ಮ ವ್ಯವಹಾರ,ಉದ್ಯೋಗದಲ್ಲಿ ಅನೇಕ ಬದಲಾವಣೆಗಳನ್ನು ನೋಡುವ ದಿನಗಳಾಗಿವೆ. ಶನಿ ಭಾಧಕಾಧಿಪತಿಯಾಗಿ ಲಾಭ ಕ್ಷೇತ್ರದಲ್ಲಿ ಇರುವುದರಿಂದ ಬರುತ್ತಿರುವ ಹಣ ನ್ಯಾಯಯುತವಾಗಿರಲಿ.ಹಂತ ಹಂತವಾಗಿ ಜೀವನದ ಮಧುರ ಕ್ಷಣಗಳನ್ನು ನೋಡಲಿದ್ದೀರಿ. ಧಾರ್ಮಿಕ ಮನೋಭಾವನೆಯಿಂದ ದೇವತಾ ಕಾರ್ಯಗಳು ನಡೆಯಲಿವೆ. ಅವಿವಾಹಿತರು ಹೊಂದಾಣಿಕೆಮನೋಭಾವವನ್ನು ತೋರಿದಲ್ಲಿ ಮಾತ್ರಾ ಕಂಕಣ ಬಲವನ್ನು ಪಡೆಯಬಹುದಾಗಿದೆ .
ಮಿಥುನ : ಅನೇಕ ಶುಭ ಫಲಗಳು ಇನ್ನು ಮುಂದಕ್ಕೆ ಅನುಭವಿಸಲಿದ್ದೀರಿ. ಕುಟುಂಬದವರ ಸಕಾಲಿಕ ಸಹಕಾರದಿಂದ ಕಾರ್ಯ ಸಾಧನೆ ಸಾಧಕವಾಗಲಿದೆ. ಸಂಚಾರ ವೃತ್ತಿ,ಕಮಿಷನ್ ಏಜೆಂಟರಿಗೆ ,ಹೊಟೇಲ್ ಉದ್ಯಮಿಗಳಿಗೆ,ಸಮಾಧಾನಕರವಾದ ಆದಾಯವಿರುತ್ತದೆ. ವಿವಾಹ ಸಂಬಂಧಿತ ಪ್ರಸ್ತಾವಗಳಿಗೆ ಹೆಚ್ಚಿನ ಪ್ರಯತ್ನ ಶೀಲತೆ ಅಗತ್ಯವಿದೆ. ಹಿರಿಯರ ಜೊತೆಗೆ ಬಹಳ ಹೊಂದಾಣಿಕೆ ಅಗತ್ಯವಿರುತ್ತದೆ. ಗೃಹಿಣಿಗೆ ಅನಾರೋಗ್ಯ,ಪಿತ್ತಕೋಶದ ಸಮಸ್ಯೆಯಿಂದಾಗಿ ಆರೋಗ್ಯ ಸಮಸ್ಯೆ ಉಂಟಾಗಲಿದೆ. ರಾಜಕೀಯ ವರ್ಗದವರಿಗೆ ಅನೇಕ ರೀತಿಯ ಸೌಲಭ್ಯಗಳು ಒದಗಿ ಬರಲಿದೆ. ಬೆಲೆಬಾಳುವ ವಸ್ತುಗಳು ಮನೆಗೆ ಬರಲಿವೆ.ಭೂಮಿ ಖರೀಧಿಸುವ ಸಾಧ್ಯತೆ ಇದೆ.
ಕರ್ಕಾಟಕ : ಮೇ 14 ,18 ರಂದು ಗುರುವಿನ ,ರಾಹು ಕೇತುವಿನ ಸ್ಥಾನ ಬದಲಾವಣೆ ಜೀವನದಲ್ಲಿ ಅನೇಕ ಏರಿಳಿತಗಳನ್ನು ತರಲಿದೆ. ಕೇತು ದ್ವಿತೀಯಕ್ಕೆ ,ರಾಹು ಅಷ್ಟಮಕ್ಕೆ, , ವ್ಯಯಕ್ಕೆ ಗುರು, ಬರುತ್ತಿರುವುದು, ನೀವು ಎಲ್ಲಾ ವಿಷಯಗಳಲ್ಲಿ ವ್ಯವಹಾರಗಳಲ್ಲಿ ಎಚ್ಚರವಾಗಿರುವಂತೆ ಸೂಚನೆ ಮಾಡುತ್ತಿದೆ. ಆಶ್ಲೇಷಾ ಬಲಿ ಸೇವೆ ಮಾಡುವುದು ಅಗತ್ಯವಾಗಿದೆ. ಆರ್ಥಿಕವಾಗಿ ನೀವು ಎಚ್ಚರವಾಗಿರಬೇಕು. ಯಾರಿಗೂ ಹಣ ಸಾಲ ಕೊಡುವುದು, ಜಾಮೀನು ಸಹಿ ಹಾಕುವುದು ಬೇಡವೇ ಬೇಡ. ಹಿರಿಯರ ಅನಾರೋಗ್ಯವನ್ನು ನೋಡುವ ಕಾಲಬಂದಿದೆ. ಆದಷ್ಟು ರಾತ್ರಿ ಪ್ರಯಾಣ ಬೇಡ. ಹೊರಗಿನ ಆಹಾರ ಬೇಡ. ವಿದೇಶ ಯಾತ್ರೆ ಮಾಡುವ ಯೋಗವಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ.
ಸಿಂಹ : ಗುರು ಲಾಭ ಕ್ಷೇತ್ರಕ್ಕೆ ಬರುತ್ತಿದ್ದಾನೆ. ಕೇತು ರಾಹುವಿನ, ಶನಿಯ ದೋಷಗಳು ಕಡಿಮೆಯಾಗಲಿದೆ. ಆದರೂ ಆರೋಗ್ಯದ ವಿಷಯದಲ್ಲಿ ಎಚ್ಚರವಾಗಿರಬೇಕು. ಸತಿ-ಪತಿಯರ ನಡುವೆ ಹೊಂದಾಣಿಕೆ ಎನ್ನುವುದು ಒಂದು ಸವಾಲಾಗಿ ಪರಿಣಮಿಸಲಿದೆ.. ಆರಂಭದಲ್ಲಿ ನೀನಿಲ್ಲದೆ ನಾನಿಲ್ಲ,ನಾನಿಲ್ಲದೆ ನೀನಿಲ್ಲ .,ನಂತರ ಒಂದೋ ನೀನಿರಬೇಕು ,ಇಲ್ಲಾ ನಾನಿರಬೇಕು. ವೈವಾಹಿಕ ಪ್ರೀತಿ ಪ್ರೇಮಗಳು ಕಲಹದಲ್ಲಿಯೇ ಮುಂದುವರಿಯಲಿದೆ. ವಿದ್ಯಾರ್ಥಿಗಳು ಬಹಳ ಎಚ್ಚರವಾಗಿರಬೇಕು. ಮೊಬೈಲ್ ನಿಂದ ದೂರವಿದ್ದಷ್ಟೂ ಒಳ್ಳೆಯದು.ಶನಿ ಅಪವಾದ ತರಲು ಕಾಯುತ್ತಿರುತ್ತಾನೆ. ಸಿಟ್ಟಿನ ಮೇಲೆ ಹಿಡಿತವಿರಲಿ.
ಕನ್ಯಾ : ಗುರು ,ರಾಹು ಕೇತುವಿನ ಸ್ಥಾನ ಬದಲಾವಣೆ ನಿಮ್ಮ ಜೀವನದಲ್ಲಿಯೂ ಹಲವಾರು ಬದಲಾವಣೆಯನ್ನು ತರಲಿದ್ದಾರೆ. ಉದ್ಯೋಗ ವ್ಯವಹಾರದಲ್ಲಿ ಕೆಲವೊಂದು ಬದಲಾವಣೆಗಳು ಬರಲಿವೆ.ಬರುವ ಆದಾಯದಲ್ಲಿ ಏರಿಕೆ ಆಗಲಿದೆ. ಅಷ್ಟಮದಲ್ಲಿ ವ್ಯಯಾಧಿಪತಿ ರವಿಯ ಜೊತೆಗೆ ರಾಶ್ಯಾಧಿಪತಿ ಬುಧನಿದ್ದಾನೆ. ನಿಮ್ಮ ಆರೋಗ್ಯದ ಬಗ್ಗೆ ಎಚ್ಚರದಿಂದಿರಬೇಕು. ಮೂರು ವ್ಯಕ್ತಿಗಳು ನಿಮ್ಮ ಮೇಲೆ ಅಪವಾದಗಳನ್ನು ತರಲು ಕಾಯುತ್ತಿದ್ದಾರೆ. ಭೂಮಿಯ ವ್ಯವಹಾರ ಮಾಡುವವರಿಗೆ ಉತ್ತಮ ಅವಕಾಶವಿದೆ. ಯಾವುದೇ ವ್ಯವಹಾರಗಳನ್ನು ಮಾಡುವಾಗ ಪುನರ್ ಚಿಂತನೆ ಮಾಡುವುದು ಅಗತ್ಯವಿದೆ. ಅಲರ್ಜಿಯ ಪೀಡೆ ಬರಲಿದೆ. ನೀವು ಮಾಡುತ್ತಿರುವ ಯಾವುದೇ ಉದ್ಯೋಗದಲ್ಲಿ ಎಲ್ಲವೂ ನಿಮ್ಮ ಮೂಗಿನ ನೇರದಲ್ಲಿಯೇ ಆಗಬೇಕು, ಎಂಬ ಹಠ ಬೇಡ.
ತುಲಾ : ಶುಭ ದಿನಗಳ ಆಗಮನಕ್ಕಾಗಿ ಕಾಯುತ್ತಿರುವ ನಿಮಗೆ ಇನ್ನೂ ಎರಡು ವಾರವಷ್ಟೆ ಬಾಕಿಯಿದೆ. ರುದ್ರ ಪಾರಾಯಣ ಆರಂಭ ಮಾಡಿರಿ. ತೃತೀಯಾಧಿಪತಿ ,6 ನೇ ಮನೆಯವನು 9ಕ್ಕೆ ಹೋಗುವ ಸಮಯ ಹಿರಿಯರಲ್ಲಿ ಜಗಳ ಬರುವ ಸಾಧ್ಯತೆಯೂ ಇರುತ್ತದೆ. ನೀವು ಮಾಡುತ್ತಿರುವ ಯಾವುದೇ ವ್ಯವಹಾರಗಳಲ್ಲಿ ಒತ್ತಡವಿರುತ್ತದೆ. ಹಣಕಾಸಿನ ವಿಚಾರಗಳಲ್ಲಿ ವಿವಾದಗಳು,ಸಮಸ್ಯೆಗಳು ,ಹುಟ್ಟು ಹಾಕಲಿವೆ. ಸಾಂಸಾರಿಕವಾಗಿ ಉತ್ತಮವಾದ ದಿನಗಳು ಬರಲಿವೆ. ನೀವು ಯಾವುದೇ ವ್ಯವಹಾರಗಳನ್ನು ಮಾಡುವಾಗ ಇನ್ನೊಬ್ಬರನ್ನು ಸೇರಿಸಿಕೊಂಡೇ ಮಾಡುವಿರಿ. ಯಾವಾಗಲೂ ಇದು ಒಳ್ಳೆಯದಲ್ಲ. ಕ್ರಯ ವಿಕ್ರಯಗಳಲ್ಲಿ ಪ್ರಗತಿಯನ್ನು ಸಾಧಿಸುವಿರಿ.
ವೃಶ್ಚಿಕ : ಗುರು ದ್ವಿತೀಯಾಧಿಪತಿ ಪಂಚಮಾಧಿಪತಿಯಾಗಿ ಅಷ್ಟಮಕ್ಕೆ ಹೋಗುವ ಸಮಯ ಬರುತ್ತದೆ.ರಾಹು ,ಸುಖ ಸ್ಥಾನ ಕ್ಕೆ ,ಕೇತು ಕರ್ಮ ಸ್ಥಾನಕ್ಕೆ ಹೋಗುವ ಸಮಯ ,ಗಣಪತಿ ,ಸುಬ್ರಹ್ಮಣ್ಯ ,ವಿಷ್ಣು ದೇವರ ಆರಾಧನೆ,ಜಪ ಮಾಡಿದಷ್ಟೂ ಉತ್ತಮ ದಿನಗಳು ನಿಮ್ಮದಾಗಲಿವೆ. ಪಂಚಮದಲ್ಲಿ ಶನಿ ಇರುವುದನ್ನು ಗಮನಿಸಿರಿ. ಎಲ್ಲರೂ ನಿಮ್ಮನ್ನು ಬೇಸರ ಮಾಡಲು ಕಾಯುತ್ತಿರುವರು. ಉಗ್ರ ನರಸಿಂಹ ದೇವರ ಜಪವೂ ಸಹಾಯ ಮಾಡಲಿದೆ. ಮುಂದಾಲೋಚನೆಯಿಂದ ಕೆಲಸ ಮಾಡಿರಿ .ಅನಿರೀಕ್ಷಿತವಾಗಿ ಮೇ 14 ರಿಂದ ಗುರು ಒಂದುವರ್ಷ ,ಶನಿ ಎರಡೂವರೆ ವರ್ಷ ರಾಹು ಕೇತು ಒಂದೂವರೆ ವರ್ಷಗಳ ಕಾಲ ತೊಂದರೆಗಳನ್ನು ಕೊಡುವ ಸಾಧ್ಯತೆ ಇದೆ . ಜಪವೊಂದೇ ಪರಿಹಾರವಾಗಿದೆ. ಕುಟುಂಬದವರು,ಹೊರಗಿನವರು ,ನಿಮ್ಮನ್ನು ದೂರ ಮಾಡುವ ಕಾಲವಾಗಿದೆ.
ಧನು : ಶುಭೋದಯದ ಕಾಲ ನಿಮ್ಮದಾಗಲಿದೆ. ಗುರು ಸಪ್ತಮಕ್ಕೆ ಬರುವ ಕಾಲ. ರಾಹು ತೃತೀಯಕ್ಕೆ ಕೇತು ಭಾಗ್ಯಕ್ಕೆ ಬರಲಿದ್ದಾರೆ. ಶನಿ ಸುಖ ಸ್ಥಾನದಲ್ಲಿಯೇ ಇರಲಿದ್ದು ಆರ್ಥಿಕವಾಗಿ ಖರ್ಚು-ವೆಚ್ಚಗಳು ಅಧಿಕವಾಗಿ ತೋರಿಬಂದರೂ ಸುಖ ಸೌಭಾಗ್ಯ ವೃದ್ಧಿಯಾಗಲಿದೆ.ಮಹತ್ವದ ಕೆಲಸಕಾರ್ಯಗಳ ಚಿಂತನೆ ನಡೆಯಲಿದೆ. ಗುರು ಭಾಧಕ ಸ್ಥಾನಕ್ಕೆ ಪ್ರವೇಶ ಮಾಡುವುದಾಗಿದೆ.ಕಂಕಣ ಭಾಗ್ಯದ ನಿರೀಕ್ಷೆಯಲ್ಲಿ ಇರುವವರಿಗೆ ಆಸೆ ನೆರವೇರುವ ಸಾಧ್ಯತೆ ಇರುತ್ತದೆ. ಉಷ್ಣ ಪಿತ್ತಾಧಿಕ್ಯದಿಂದ ದೇಹಾಯಾಸಕ್ಕೆ ಕಾರಣವಾಗಲಿದೆ. ಗೃಹ ನಿರ್ಮಾಣದ ಕೆಲಸ ಸ್ವಲ್ಪ ಕಾಲ ಸ್ತಗಿತಗೊಂಡರೂ ನಷ್ಟವಾಗದು.ಚಿನ್ನ ಬೆಳ್ಳಿ ವರ್ತಕರಿಗೆ ಲಾಭಾಂಶ ಹೆಚ್ಚಾಗಲಿದೆ. ಸಾಮಾಜಿಕವಾಗಿ ಸಕಾಲಿಕ ಪ್ರತಿಭೆ,ಯಶಸ್ಸು ಮತ್ತು ಗೌರವವನ್ನು ದ್ವಿಗುಣಗೊಳಿಸಲಿದೆ.
ಮಕರ : ದೈವಾನುಗ್ರಹದ ಕೊರತೆ ಒಂದು ವರ್ಷಗಳ ಕಾಲ ಮುಂದುವರಿಯಲಿದೆ.ರಾಹು ದ್ವಿತೀಯಾದಲ್ಲಿ ಕೇತು 6 ರಲ್ಲಿ ಇದ್ದು ಕೇತುವಿನ ಒಳ್ಳೆಯ ಫಲ ದೊರೆಯಲಿದೆ. ಶನಿಯೂ ನಿಮಗೆ ಶುಭ ಫಲವನ್ನುನೀಡಲಿದ್ದಾನೆ.ಕಾರ್ಯರಂಗದಲ್ಲಿ ನಿರ್ವಹಣೆಯ ಹೆಚ್ಚಿನ ಹೊಣೆಗಾರಿಕೆ ತಂದುಕೊಡಲಿದೆ. ಅವಿವಾಹಿತರಿಗೆ ವೈವಾಹಿಕ ಸಂಬಂಧಗಳು ಹಲವಾರು ತಡೆಗಳ ನಡುವೆ ಒದಗಿ ಬರಲಿದೆ. ಆಪ್ತರ ಕಾರ್ಯಗಳಿಗಾಗಿ, ಸಮಯ ವ್ಯರ್ಥವಾಗಲಿದೆ. ಸಂತಾನಾಪೇಕ್ಷಿಗಳಿಗೆ ಅವರ ಆಸೆ ಈಡೇರಲಿದೆ. ವೈದ್ಯರ ಸಲಹೆಯನ್ನು ಪಡೆಯಲು ಮರೆಯಬೇಡಿರಿ. ಆರ್ಥಿಕವಾಗಿ ಹೆಚ್ಚಿನ ಧನಾಗಮನವಿದ್ದರೂ ವಿವಿಧ ರೂಪದಲ್ಲಿ,ಖರ್ಚು ವೆಚ್ಚಗಳು ಅಗತ್ಯವಾಗಿದೆ.ಸಾಂಸಾರಿಕವಾಗಿ ಹೆಚ್ಚಿನ ಸಮಾಧಾನಕರ ವಾತಾವರಣ ಮನಸ್ಸಿಗೆ ಶಾಂತಿ ತಂದುಕೊಡಲಿದೆ.
ಕುಂಭ : ಪೂರ್ಣ ದೈವಾನುಗ್ರಹ ಪಡೆಯಲಿರುವ ನೀವು ವಿಶ್ವಾವಸು ಸಂವತ್ಸರದಲ್ಲಿ ಧನವಂತರಾಗಿ ಬಾಳುವಿರಿ. ನಿಮ್ಮ ಮಾತು ಎಲ್ಲರೂ ಒಪ್ಪುವಂತಾಗಿರುತ್ತದೆ. ಆದರೂ ದ್ವಿತೀಯಾದಲ್ಲಿ ಶನಿ ಇರುವುದರಿಂದ ಖರ್ಚು ವೆಚ್ಚಗಳ ವಿಷಯದಲ್ಲಿ ಇತಿಮಿತಿ ಇರುವುದು ಅವಶ್ಯವಾಗಿದೆ. ಹಣಕಾಸಿನ ವಿಷಯದಲ್ಲಿ ಆಡಂಬರ ಮಾಡುವ ಸ್ವಭಾವದವರು ನೀವಾಗಿದ್ದು ಹಿಡಿತ ನಿಮಗಿರಲಿ. ಪತ್ನಿಯ ಕಿರಿಕಿರಿ ಇದ್ದೇ ಇರುತ್ತದೆ. ಕುಟುಂಬದ ಸದಸ್ಯರ ಜೊತೆಗೆ ಭೇಧ ಭಾವ ತೋರದಿರಿ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಗುರು ನೀಡಲಿದ್ದಾನೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಲು ಮರೆಯಬೇಡಿರಿ.ಅವಿವಾಹಿತರಿಗೆ ವಿವಾಹಯೋಗ ಕೂಡಿಬರಲಿದೆ.
ಮೀನ : ಯೋಜನಾಬದ್ಧವಾದ ಕಾರ್ಯ ತಂತ್ರಗಳು ಯಶಸ್ವಿಯಾಗಲಿದೆ.ಆಸ್ತಿರತೆಯ ಭೀತಿ ಆಗಾಗ ಹಣಕಾಸಿನ ವಿಚಾರದಲ್ಲಿ ಪ್ರಮಾದಕ್ಕೆ ಕಾರಣವಾದೀತು. ಗುರುವಿನ ಅನುಗ್ರಹದಲ್ಲಿ ಏರಿಕೆಯಾಗಲಿದೆ. ವ್ಯಯದ ರಾಹು, ಖರ್ಚು ವೆಚ್ಚಗಳನ್ನು ವ್ಯತ್ಯಾಸವಾಗುವಂತೆ ಮಾಡಲಿದ್ದಾನೆ. ಕೇತು ಬರುವ ಆದಾಯದಲ್ಲಿ ಏರಿಕೆಯಾಗುವಂತೆ ಮಾಡಲಿದ್ದಾನೆ. ಪ್ರಯಾಣ ಮಾಡಲಿರುವ ನೀವು,ನಿಮ್ಮ ಉದ್ದೇಶ ಈಡೇರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ. ಪಾಲಿಗೆ ಬಂದದ್ದು ಪಂಚಾಮೃತ ಎನ್ನುವುದನ್ನು ಮರೆಯಬೇಡಿರಿ. ಆತ್ಮೀಯರ ಸಕಾಲಿಕ ನೆರವು ಹೆಚ್ಚಿನ ಕಾರ್ಯಸಿದ್ಧಿಗೆ ಸಾಧಕವಾಗಲಿದೆ. ಕುಲದೇವರ ದರ್ಶನ ಅಗತ್ಯವಾಗಿದೆ.

ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ತಿಳಿಸಲಾಗುವುದು. ವಿವಾಹ ಹೊಂದಾಣಿಕೆ /ವಾಸ್ತು ಸಲಹೆ ತಿಳಿಸಲಾಗುವುದು .






































