ಲಿಖಿತ ದೂರು ಕೇಳಿದ ಬಂಟ್ವಾಳ ಎಸ್‌ಐ ಕೋಲ್ಕರ್

Picture of RB NEWS

RB NEWS

Bureau Report

ಭಾಗ-18


ಇಸ್ಮಾಯಿಲ್ ಹತ್ಯಾ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದವರು ಇಸ್ಮಾಯಿಲ್ ಅಪಹರಣವಾದ ದಿನದಂದು ಬಂಟ್ವಾಳದಲ್ಲಿ ಸಬ್‌ಇನ್ಸ್ಪೆಕ್ಟರ್ ಆಗಿದ್ದ ಎಸ್.ಬಿ. ಕೋಲ್ಕರ್. ಆ ಸಂದರ್ಭದಲ್ಲಿ ಬಂಟ್ವಾಳ ಪರಿಸರದಲ್ಲಿ ವದಂತಿಗಳದ್ದೇ ಕಾರುಬಾರು. ನೇತ್ರಾವತಿ ನದಿಯಲ್ಲಿ ಗೋಣಿ ಚೀಲವೊಂದು ತೇಲಿಕೊಂಡು ಬಂದು ತುಂಬೆ ಬಳಿ ದಡ ಸೇರಿದೆ ಎಂದು ಬಂಟ್ವಾಳ ಠಾಣೆಗೆ ಮಾಹಿತಿ ಬಂದಿತ್ತು. ಇಸ್ಮಾಯಿಲ್ ಅವರ ಗುಂಗಿನಲ್ಲೇ ಇದ್ದ ಎಸ್‌ಐ ಕೋಲ್ಕರ್ ಮತ್ತವರ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಅದೊಂದು ನಾಯಿಯ ಶವವಾಗಿತ್ತು. ಅದನ್ನು ವಿಲೇವಾರಿ ಮಾಡಿ ಠಾಣೆಗೆ ಬಂದು ಕುಳಿತುಕೊಳ್ಳುವಷ್ಟರಲ್ಲಿಯೇ ಸರಪಾಡಿ ನೇತ್ರಾವತಿ ನದಿ ಮಧ್ಯದಲ್ಲಿ ಮೃತದೇಹವೊಂದು ಕಲ್ಲಿನ ಕೊರಕಲಿನಲ್ಲಿ ಸಿಲುಕಿಕೊಂಡಿದೆ ಎಂದು ಮಾಹಿತಿ ಬಂದಾಗ ಎಸ್‌ಐ ಕೋಲ್ಕರ್ ಅವರು ಅದೊಂದು ನಾಯಿಯ ಶವ ಎಂದು ಹೇಳಿದರು ಎಂಬ ಮಾಹಿತಿಯು ಸೋರಿಕೆಯಾಗಿ ಪೊಲೀಸರ ಮೇಲೆಯೇ ಸಾರ್ವಜನಿಕರಿಗೆ ಸಂಶಯ ಹೆಚ್ಚುವಂತೆ ಮಾಡಿತ್ತು. ಸುಮಾರು ಒಂದು ವರ್ಷಕ್ಕಿಂತಲೂ ಅಧಿಕ ಸಮಯದಿಂದ ಬಂಟ್ವಾಳ ಎಸ್‌ಐಯಾಗಿ ಕರ್ತವ್ಯ ನಿರ್ವಹಿಸಿದ್ದ ಕೋಲ್ಕರ್ ಅವರು ಇಡೀ ಪ್ರಕರಣದ ಆಳ ಅಗಲ ಅರಿತಿದ್ದರು. ಆದರೆ ಪ್ರಕರಣದ ತನಿಖೆಯ ಜವಾಬ್ದಾರಿ ಸಿಓಡಿ ಕೈಯ್ಯಲ್ಲಿದ್ದುದರಿಂದ ಮತ್ತು ಸಿಓಡಿ ಅಧಿಕಾರಿಗಳು ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ನಂಬದೇ ಇದ್ದುದರಿಂದ ಅವರು ಕೇವಲ ಕಾಟಾಚಾರಕ್ಕೆ ಕರ್ತವ್ಯ ನಿರ್ವಹಿಸುವಂತಾಗಿತ್ತು. ಆದರೂ ಅವರು ಆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಸಾಕ್ಷಿಗಳಾಗಿದ್ದರು. ಅವರೂ ಸೇರಿದಂತೆ ಕೆಲವು ಸಾಕ್ಷಿದಾರರು ನ್ಯಾಯಾಲಯದಲ್ಲಿ ಸಿಓಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದಂತಹ ಆರೋಪ ಪಟ್ಟಿಯಲ್ಲಿ ದಾಖಲಿಸಿದ್ದ ಹೇಳಿಕೆಯ ಆಧಾರದಲ್ಲಿಯೇ ಸಾಕ್ಷö್ಯ ನುಡಿದಿದ್ದರು. ಅದರ ವಿವರಗಳು ಈ ರೀತಿ ಇತ್ತು.


71ನೇ ಸಾಕ್ಷಿ ಡಾ. ಮುರಳೀಧರ ರಾವ್ ಅವರು ತಮ್ಮ ಹೇಳಿಕೆಯಲ್ಲಿ ನಾನು ಬಳ್ಳಾರಿ ಸರಕಾರಿ ಆಸ್ಪತ್ರೆಯಲ್ಲಿ ಅಸಿಸ್ಟೆಂಟ್ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದೇನೆ. ತಾ. 10-9-1976ರಂದು ಬೆಳಗಿನ ಜಾವ 4.15 ಗಂಟೆಯ ಹೊತ್ತಿಗೆ ಶ್ರೀಧರ ಭಟ್ಟರು ಗಾಯಾಳು ಶಂಕರ ಭಟ್ ಎಂಬವರನ್ನು ನಮ್ಮ ಆಸ್ಪತ್ರೆಗೆ ಕರೆದು ತಂದರು. ಶಂಕರ ಭಟ್ಟರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿದೆವು’ ಎಂದು ಹೇಳಿದರು. ಇವರಿಗೆ ಯಾವುದೇ ಅಡ್ಡ ವಿಚಾರಣೆ ಇರಲಿಲ್ಲ. ಏರ್‌ಫೋರ್ಸ್ನಲ್ಲಿದ್ದರು 71ನೇ ಸಾಕ್ಷಿ ಲಹರಿಯವರು ನ್ಯಾಯಾಲಯದಲ್ಲಿ ಸಾಕ್ಷಿ ಹೇಳುತ್ತಾನಾನು ಬೆಂಗಳೂರಿನಲ್ಲಿ ಇಂಡಿಯನ್ ಏರ್‌ಫೋರ್ಸ್ನಲ್ಲಿ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಕೇಸಿನ ವಿಚಾರಣೆಯಲ್ಲಿ 29ನೇ ಸಾಕ್ಷಿ ದೊರೈರಾಜ್ ಮತ್ತು 30ನೇ ಸಾಕ್ಷಿ ನಾರಾಯಣ ಎಂಬವರು ಯಲಹಂಕ ಎಂಬಲ್ಲಿ ಏರ್ ಫೋರ್ಸ್ನ ದೋಬಿಗಳಾಗಿ ಕೆಲಸ ಮಾಡುತ್ತಾರೆ. ಅವರು ಸಾಧಾರಣ 12 ವರ್ಷಗಳಿಂದ ಈಚೆಗೆ ದೋಬಿ ಕೆಲಸ ಮಾಡುತ್ತಾರೆ. 31ನೇ ಸಾಕ್ಷಿ ನಂಜಪ್ಪ ಎಂಬವರು ರೂಮ್ ಬಾಯ್ ಆಗಿ ಕೆಲಸ ಮಾಡುತ್ತಾರೆ. ಪುರಂದರ ಭಟ್ಟರು ಏರ್ ಫೋರ್ಸ್ನಲ್ಲಿ 10 ವರ್ಷಗಳ ಹಿಂದೆ ಇದ್ದರು ಎಂದು ಹೇಳಿ ಪುರಂದರ ಭಟ್ಟರ ಡಿಸ್ಚಾರ್ಜ್ ಸರ್ಟಿಫಿಕೇಟನ್ನು ತೋರಿಸಿದರು. ಇವರಿಗೂ ಅಡ್ಡ ವಿಚಾರಣೆ ಇರಲಿಲ್ಲ.


71ನೇ ಸಾಕ್ಷಿ ಎಸ್. ಬಿ. ಕೋಲ್ಕರ್ ಅವರು ತಮ್ಮ ಹೇಳಿಕೆಯಲ್ಲಿ ನಾನು 1975ನೇ ಇಸವಿಯಿಂದ 1976ನೇ ಇಸವಿ ಎಪ್ರಿಲ್‌ವರೆಗೆ ಬಂಟ್ವಾಳದಲ್ಲಿ ಫುಡ್ ಮೊಬೈಲ್ ಸ್ಕಾ÷್ವಡ್‌ನ ಸಬ್‌ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದೆ. ಆ ಬಳಿಕ ಸೆಪ್ಟಂಬರ್ 23ನೇ ತಾರೀಕಿನವರೆಗೆ ಬಂಟ್ವಾಳ ಪೊಲೀಸ್ ಸ್ಟೇಶನ್‌ನ ಸಬ್‌ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದೆ. ನನಗೆ ಕಲ್ಲಡ್ಕದ ಕೆ.ಎಂ. ಇಸ್ಮಾಯಿಲ್ ಅವರ ಪರಿಚಯ ಚೆನ್ನಾಗಿತ್ತು’ ಎಂದು ಹೇಳಿದರು. ಲಿಖಿತ ದೂರು ಕೇಳಿದೆ ತಾ. 5-9-1976ರಂದು ಬೆಳಿಗ್ಗೆ ಸಾಧಾರಣ 9 ಗಂಟೆಗೆ ಈ ಕೇಸಿನ 1ನೇ ಸಾಕ್ಷಿ ನರಸಿಂಹ ಮಡಿವಾಳ, ಸದಾನಂದ ಪೈ, ಪದ್ಮನಾಭ ರೈ, ರಹಿಮಾನ್ ಮೊದಲಾದವರು ಬಂಟ್ವಾಳ ಪೊಲೀಸ್ ಸ್ಟೇಶನ್‌ಗೆ ಬಂದರು. 4ನೇ ತಾರೀಕಿನ ದಿನ ರಾತ್ರಿ 11 ಗಂಟೆಗೆ ಪೊಲೀಸ್ ನಿಶಾನಿಯಿರುವ ಜೀಪೊಂದು ಪುತ್ತೂರು ಕಡೆಯಿಂದ ಬಂದು, ಇಸ್ಮಾಯಿಲ್ ಅವರನ್ನು ಜೀಪಿನಲ್ಲಿ ಕುಳ್ಳಿರಿಸಿಕೊಂಡು ಪುತ್ತೂರು ಕಡೆಗೆ ಹೋಯಿತೆಂದೂ, ಅದು ತನಕ ಇಸ್ಮಾಯಿಲ್ ಅವರು ಮರಳಿ ಬಂದಿಲ್ಲವೆAದೂ, ಹಾಗೆ ಪೊಲೀಸ್ ಸ್ಟೇಶನ್‌ಗೆ ಬಂದುದಾಗಿಯೂ ನರಸಿಂಹ ಮಡಿವಾಳ ಅವರು ನನಗೆ ತಿಳಿಸಿದರು. ಈ ಬಗ್ಗೆ ಲಿಖಿತ ದೂರನ್ನು ಕೊಡಬೇಕೆಂದು ನಾನು ಅವರಿಗೆ ಹೇಳಿದೆ. ಅದರಂತೆ 1ನೇ ಸಾಕ್ಷಿ ನರಸಿಂಹ ಮಡಿವಾಳ ಅವರು ಹೆಳಿದಂತೆ ರಹಿಮಾನ್ ಅವರು ದೂರನ್ನು ಬರೆದರು. ಅದಕ್ಕೆ ನರಸಿಂಹ ಮಡಿವಾಳ ಸಹಿ ಹಾಕಿ ನನ್ನಲ್ಲಿ ಕೊಟ್ಟರು. ಆ ಬಗ್ಗೆ ನಂಬ್ರ 106/76 ಆಗಿ ರಿಜಿಸ್ತಿç ಮಾಡಿದೆ’ ಎಂದು ಕೋಲ್ಕರ್ ವಿವರಿಸಿದರು. ಕೂಡಲೇ ತಾವು ಎಲ್ಲಾ ಪೊಲೀಸ್ ಸ್ಟೇಶನ್‌ಗಳಿಗೆ ಈ ಕುರಿತು ಫೋನ್ ಮೂಲಕ ವಿವರ ಕೊಟ್ಟುದಾಗಿ ತಿಳಿಸಿದ ಕೋಲ್ಕರ್ ಅವರುಆ ಬಳಿಕ ಕಲ್ಲಡ್ಕಕ್ಕೆ ಹೋಗಿ ಸುಮಾರು 10 ಗಂಟೆ ಸಮಯಕ್ಕೆ ಇಸ್ಮಾಯಿಲ್ ಅವರ ಅಂಗಡಿಗೆ ಹೋದೆ. ಅಲ್ಲಿ 1ನೇ ಸಾಕ್ಷಿ ನರಸಿಂಹ ಮಡಿವಾಳರ ಸ್ಟೇಟ್‌ಮೆಂಟ್’ ಪಡೆದುಕೊಂಡೆ. ಆ ಬಳಿಕ ಸುತ್ತಮುತ್ತಲಿನ ಸ್ಥಳದ ವಿಷಯದಲ್ಲಿಅಬ್ಸರ್ವೇಶನ್ ಯಾದಾಸ್ತು’ ತಯಾರು ಮಾಡಿದೆ. ಅನಂತರ ನಾನು ಅಲ್ಲಿಂದ ಪುತ್ತೂರಿಗೆ ಹೋಗಿ ಅಲ್ಲಿ ಪ್ರಯಾಣಿಕರ ಬಂಗ್ಲೆಯಲ್ಲಿ ಮೋಚಿಯೊಡನೆ ಮೊದಲಿನ ದಿನ ಅಲ್ಲಿ ಯಾವುದೇ ಪೊಲೀಸ್ ಅಧಿಕಾರಿಗಳಿದ್ದರೇ ಎಂಬುದನ್ನು ವಿಚಾರಿಸಿದೆ. ಪುತ್ತೂರಿನಲ್ಲಿರುವ ಪೆಟ್ರೋಲ್ ಬಂಕ್‌ಗಳಲ್ಲಿ ಹಿಂದಿನ ದಿನ ವಾಹನಗಳಿಗೆ ಪೆಟ್ರೋಲ್ ಹಾಕಿದ ವಿಷಯಗಳನ್ನು ನಾನು ವಿಚಾರಿಸಿದೆ’ ಎಂದು ವಿವರಿಸಿದರು.


ಡಿಎಸ್‌ಪಿಯವರಿಗೆ ತಿಳಿಸಿದೆ


ಅನಂತರ ನಾನು ಪುತ್ತೂರು ಸರ್ಕಲ್ ಇನ್ಸ್ಪೆಕ್ಟರ್‌ರವರ ಆಫೀಸಿಗೆ ಹೋಗಿ ಅಲ್ಲಿ ಅವರನ್ನು ಕಂಡೆ. ಕಲ್ಲಡ್ಕದಲ್ಲಿ ನಡೆದ ವಿಷಯವನ್ನು ಅವರಿಗೆ ತಿಳಿಸಿದೆ. ಅವರಿಂದ ಪುತ್ತೂರು ಡಿಎಸ್‌ಪಿಯವರು ಉಪ್ಪಿನಂಗಡಿ ಬಂಗ್ಲೆಯಲ್ಲಿರುವ ವಿಷಯ ತಿಳಿದ ಮೇರೆಗೆ ನಾನು ಉಪ್ಪಿನಂಗಡಿ ಪ್ರಯಾಣಿಕರ ಬಂಗ್ಲೆಗೆ ಹೋಗಿ ಅಲ್ಲಿ ಡಿಎಸ್‌ಪಿಯವರನ್ನು ಕಂಡು ಈ ವಿಷಯವನ್ನೆಲ್ಲಾ ಹೇಳಿದೆ. ಅವರು ಹೇಳಿದಂತೆ ಶಿರಾಡಿ ಕಡೆಗೆ ನಾನು ಹೋಗಿ ವಿಚಾರಿಸಿದರೂ ಯಾವ ಸುಳಿವೂ ಸಿಕ್ಕಲಿಲ್ಲ. ನಾನು ಮರಳಿ ಉಪ್ಪಿನಂಗಡಿಗೆ ಬಂದು ಡಿಎಸ್‌ಪಿಯವರಿಗೆ ಈ ವಿಷಯ ತಿಳಿಸಿದೆ’ ಎಂದು ಅವರು ತಿಳಿಸಿದರು.


ಆ ಬಳಿಕ ತಾವು ಬಂಟ್ವಾಳಕ್ಕೆ ಮರಳಿದುದಾಗಿ ಹೇಳಿದ ಅವರು ಸಾಯಂಕಾಲದ ಹೊತ್ತಿಗೆ ಇನ್‌ಚಾರ್ಜ್ ಎಸ್‌ಪಿ ಬೋಂಸ್ಲೆ ಅವರು ಮತ್ತು ಪುತ್ತೂರು ಡಿಎಸ್‌ಪಿ ಭಾಸ್ಕರ ಅವರು ಬಂಟ್ವಾಳಕ್ಕೆ ಬಂದು ಸರ್ಚ್ ಪಾರ್ಟಿ ನೇಮಕ ಮಾಡಿದರು. ನಾನು ಈ ಕೇಸಿನ ತನಿಖೆಯನ್ನು ಮುಂದುವರಿಸಿ ತಾ. 6-9-76ರಂದು ಕಲ್ಲಡ್ಕದ ಶಾಂತಾರಾಮ ಎಂಬವರನ್ನು ವಿಚಾರಿಸಿದೆ. ಆ ಬಳಿಕ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇಸ್ಮಾಯಿಲ್ ಅವರ ಹಾಗೂ ಜೀಪಿನ ಬಗ್ಗೆ ಹುಡುಕಾಡಿದೆ. ತಾ. 7-9-76ರಂದು ಈ ಕೇಸಿನ ತನಿಖೆಯನ್ನು ಪುತ್ತೂರು ಡಿಎಸ್‌ಪಿ ಭಾಸ್ಕರ ಅವರು ತೆಗೆದುಕೊಂಡರು. ಆ ಬಳಿಕ ನಾನು ಈ ಕೇಸಿನ ತನಿಖೆಯಲ್ಲಿ ಡಿಎಸ್‌ಪಿಯವರಿಗೆ ಸಹಕರಿಸಿದೆ’ ಎಂದು ವಿವರಿಸಿದರು. ಮೃತದೇಹವನ್ನು ಗುರುತಿಸಿದೆ ತಾ 8-9-76ರಂದು ಸರಪಾಡಿ ಗ್ರಾಮದಲ್ಲಿ ಇಸ್ಮಾಯಿಲ್ ಅವರ ಬಗ್ಗೆ ತಪಾಸಣೆ ಮಾಡುತ್ತಿದ್ದ ಸಮಯ ಸಾಧಾರಣ ರಾತ್ರಿ 7.30ಗಂಟೆಯ ಹೊತ್ತಿಗೆ ನೇತ್ರಾವತಿ ಹೊಳೆಯಲ್ಲಿ ಒಂದು ಮೃತದೇಹ ಉಂಟೆAದು ಗಾಳಿಸುದ್ದಿ ಸಿಕ್ಕಿತು. ಕೂಡಲೇ ನಾನು ಹೊಳೆಯ ದಡಕ್ಕೆ ಬಂದಾಗ ಅಲ್ಲಿ ಅಬ್ದುಲ್ ಹಮೀದ್ ಹಾಗೂ ಇಬ್ರಾಹಿಂರವರು ಸಿಕ್ಕಿದರು. ನಾವೆÀಲ್ಲರೂ ದೋಣಿಯೊಂದರಲ್ಲಿ ಹೊತ್ತಿಸಿದ ಪೊಟ್ರೋಮ್ಯಾಕ್ಸ್ ಸಮೇತ ಹೆಣವಿದ್ದ ಸ್ಥಳಕ್ಕೆ ಹೋದೆವು. ಹೆಣವು ಒಂದು ಕಲ್ಲಿಗೆ ಸಿಕ್ಕಿಕೊಂಡು ಬಿದ್ದುದನ್ನು ಕಂಡೆ. ಕೂಡಲೇ ಅದರ ಮುಖವನ್ನು ಎತ್ತಿ ನೋಡಿದಾಗ ಅದು ಮೃತ ಇಸ್ಮಾಯಿಲ್ ಅವರ ದೇಹವಾಗಿತ್ತೆಂದು ಗುರುತಿಸಿದೆ. ಅನಂತರ ನನ್ನೊಂದಿಗಿದ್ದ ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಸ್ಥಳದಲ್ಲಿ ಹೆಣವನ್ನು ಕಾಯಲು ನಿಲ್ಲಿಸಿದೆ ಮತ್ತು ಈ ಸಂಗತಿಯನ್ನು ಮೇಲಧಿಕಾರಿಗಳಿಗೆ ತಿಳಿಸಲು ದಡಕ್ಕೆ ಬಂದೆ’ ಎಂದವÀರು ತಿಳಿಸಿದರು.


ನಾನು ದಡಕ್ಕೆ ಬಂದಾಗ ಡಿಎಸ್‌ಪಿ ಭಾಸ್ಕರ ಅವರು ಮೃತ ಇಸ್ಮಾಯಿಲ್ ಅವರ ಸಂಬAಧಿಕರು ಮತ್ತು ಸ್ನೇಹಿತರೊಡನೆ ಅಲ್ಲಿಗೆ ಬಂದರು. ಆ ಬಳಿಕ ನಾವೆಲ್ಲರೂ ದೋಣಿಯಲ್ಲಿ ಮೃತದೇಹ ಇದ್ದಲ್ಲಿಗೆ ಹೋದೆವು. ಆಗ ಮೃತದೇಹವನ್ನು ಮೃತರ ಸಂಬAಧಿಕರು ಗುರುತಿಸಿದರು. ಈ ಬಗ್ಗೆ ಡಿಎಸ್‌ಪಿ ಭಾಸ್ಕರ ಅವರು ಒಂದು ರಿಪೋರ್ಟ್ ಬರೆದು ನನ್ನ ಕೈಗೆ ಕೊಟ್ಟರು. ನಾನು ಕೂಡಲೇ ಬಂಟ್ವಾಳ ಠಾಣೆಗೆ ಬಂದು ಅದನ್ನು ಕ್ರೆöÊಂ ನಂಬ್ರ 106ಎ ಎಂಬುದಾಗಿ ಕೇಸ್ ರಿಜಿಸ್ಡರ್ ಮಾಡಿದೆ. ಮರಣೋತ್ತರ ಶಸ್ತç ಪರೀಕ್ಷೆ ಮಾಡಲು ಡಾಕ್ಟರರು ಬರಬೇಕೆಂದು ಡಿಎಸ್‌ಪಿಯವರು ಕೊಟ್ಟ ಇಂಟಿಮೇಶನ್‌ನ್ನು ಬಂಟ್ವಾಳ ಸರಕಾರಿ ಆಸ್ಪತ್ರೆ ಡಾಕ್ಟರರಿಗೆ 3 ಗಂಟೆ ರಾತ್ರಿಗೆ ಕೊಟ್ಟ. ಸಾಧಾರಣ 5 ಅಥವಾ 5.30. ಗಂಟೆ ಸಮಯ ಫೊಟೋಗ್ರಾಫರ್, ಸರಕಾರಿ ಆಸ್ಪತ್ರೆಯ ಡಾಕ್ಟರ್ ಮತ್ತು ನಾನು ಮೃತದೇಹವಿದ್ದ ಸ್ಥಳಕ್ಕೆ ಹೋದೆವು’ ಎಂದು ಕೋಲ್ಕರ್ ವಿವರಿಸಿದರು. ಅಗ ಅಲ್ಲಿ ಡಿಎಸ್‌ಪಿ ಭಾಸ್ಕರ ಅವರು ಮೃತದೇಹದ ಮೇಲೆ ಇನ್‌ಕ್ವೆಸ್ಟ್ ಪ್ರೊಸೀಡಿಂಗ್ಸ್ ಮಾಡಲು ಅರಂಭಿಸಿದ್ದರೆAದು ಹೇಳಿದ ಕೋಲ್ಕರ್ ಅವರು ಬೆಳಿಗ್ಗೆ 8 ಗಂಟೆಗೆ ಇನ್‌ಕ್ವೆಸ್ಟ್ ಪ್ರೊಸೀಡಿಂಗ್ಸ್ ಆದ ಮೇಲೆ ಡಾಕ್ಟರರು ಮರಣೋತ್ತರ ಶಸ್ತç ಚಿಕಿತ್ಸೆ ನಡೆಸಿದರು. ಆ ಬಳಿಕ ಮೃತದೇಹವನ್ನು ಸಂಬAಧಿಕರಿಗೆ ಬಿಟ್ಟುಕೊಡಲಾಯಿತು. ಬಳಿಕ ನಾನು ಬಂಟ್ವಾಳಕ್ಕೆ ಬಂದು, ಕಲ್ಲಡ್ಕಕ್ಕೆ ಹೋಗಿ ಬಂದೋಬಸ್À್ತ ಡ್ಯೂಟಿಯಲ್ಲಿ ನಿರತನಾದೆ.


ಅನಂತರ ಡಿಎಸ್‌ಪಿ ಭಾಸ್ಕರ್ ಅವರೊಂದಿಗೆ ಈ ಕೇಸಿನ ತನಿಖೆಯಲ್ಲಿ ತಾ. 23-9-76ರವರೆಗೆ (ಟ್ರಾನ್ಸ್ಫರ್ ಆಗುವವರೆಗೆ) ಸಹಕರಿಸಿದೆ’ ಎಂದು ಹೇಳಿದರು.
ಅಡ್ಡ ವಿಚಾರಣೆಯಲ್ಲಿ ನರಸಿಂಹ ಮಡಿವಾಳ ಅವರು ಬಂದು ತಮ್ಮಲ್ಲಿ ಬಾಯ್ದೆರೆಯಾಗಿ ಹೇಳಿದ ವಿಷಯವನ್ನು ತಾವು ಬರೆದಿಟ್ಟಿಲ್ಲವೆಂದೂ, ಅವರು ಹೇಳಿದ ಪ್ರಕಾರ ಇಸ್ಮಾಯಿಲ್ ಅವರು ಕಾಣೆಯಾಗಿದ್ದಾರೆಂದು ಮಾತ್ರ ತಮಗೆ ತಿಳಿದುಬಂತೆoದೂ, 1ನೇ ಸಾಕ್ಷಿ ನರಸಿಂಹ ಮಡಿವಾಳ ಅವರು ಲಿಖಿತ ದೂರು ಕೊಟ್ಟೊಡನೆ ಅವರ ಹೇಳಿಕೆಯನ್ನು ರೆಕಾರ್ಡ್ ಮಾಡಲಿಲ್ಲವೆಂದೂ ತಿಳಿಸಿದರು.


ಸ್ಟೇಶನ್‌ನಲ್ಲಿ ಹೇಳಿಕೆ ಪಡೆದಿಲ್ಲ


ನರಸಿಂಹ ಮಡಿವಾಳರ ಜತೆಯಲ್ಲಿದ್ದ ಸದಾನಂದ ಪೈ, ಅಬ್ದುಲ್ ರಹಿಮಾನ್, ಪದ್ಮನಾಭ ರೈ ಮೊದಲಾದವರ ಹೇಳಿಕೆಗಳನ್ನು ಪೊಲೀಸ್ ಸ್ಟೇಶನ್‌ನಲ್ಲಿ ಪಡೆದಿಲ್ಲ ಎಂದು ಆರೋಪಿ ಪರ ವಕೀಲರ ಪ್ರಶ್ನೆಗಳಿಗೆ ಉತ್ತರ ನೀಡಿದ ಕೋಲ್ಕರ್ ಅವರು, ತಾವು ಕಲ್ಲಡ್ಕಕ್ಕೆ ಹೋದೊಡನೆ ಪ್ರಥಮತ: ಮಾಡಿದ ಕೆಲಸವೆಂದರೆ ನರಸಿಂಹ ಮಡಿವಾಳರ ಹೇಳಿಕೆ ಪÀಡೆದುದಾಗಿತ್ತೆಂದು ತಿಳಿಸಿದರು.
ತಾವು ಬಳಿಕ ಅಬ್ಸರ್ವೇಶನ್ ಯಾದಾಸ್ತು ತಯಾರು ಮಾಡಿದುದಾಗಿಯೂ, ತಾವು ಹೋಗುವಾಗ ಇಸ್ಮಾಯಿಲ್ ಅವರ ಅಂಗಡಿಯು ತೆರೆದಿತ್ತೆಂದೂ, ಅಂಗಡಿಯಲ್ಲಿ ಮೃತರ ಸಂಬAಧಿಕರು ಇದ್ದರೆಂದೂ, ಅವರ ಹೇಳಿಕೆಗಳನ್ನು ತಾವು ಪಡೆದಿರುವುದಿಲ್ಲವೆಂದೂ , ಅಂಗಡಿಯ ಒಳಗಿನ ವಿಷಯಗಳ ಕುರಿತು ತಾವು ಯಾವ ರೆಕಾರ್ಡ್ಗಳನ್ನು ಮಾಡಿಲ್ಲವೆಂದೂ ಉತ್ತರಿಸಿದರು.
ಮೃತರ ಭಾವಚಿತ್ರವೊಂದನ್ನು ಅವರ ಮನೆಯಲ್ಲಿ ತಾವು ನೋಡಿರುವುದಾಗಿಯೂ, ಆದರೆ ಮೃತರ ಭಾವಚಿತ್ರವನ್ನು ಸರ್ಚ್ಪಾರ್ಟಿಯವರಿಗೆ ತಾವು ಕೊಟ್ಟರುವುದಿಲ್ಲವೆಂದೂ, ಸಾಕ್ಷಿ ಅಡ್ಡ ಸವಾಲುಗಳಿಗೆ ಉತ್ತರ ನೀಡಿದರು.


ತಾವು ಮೃತ ದೇಹದ ಗುರುತು ಹಿಡಿದ ವಿಷಯದಲ್ಲಿ, ಮತ್ತಿತರ ವಿಷಯಗಳ ಬಗ್ಗೆ ಪುತ್ತೂರು ಡಿಎಸ್‌ಪಿ ಹಾಗೂ ಸಿಓಡಿ ಡಿಎಸ್‌ಪಿಯವರು ತಮ್ಮ ಪ್ರತ್ಯೇಕ ಹೇಳಿಕೆ ಪಡೆದಿಲ್ಲವೆಂದು ಹೇಳಿದ ಕೋಲ್ಕರ್ ಅವರು ಕಲ್ಲಡ್ಕಕ್ಕೆ ಹೋದ ಬಳಿಕ ತಾವು ಸದಾನಂದ ಪೈ ಮೊದಲಾದವರ ಹೇಳಿಕೆಗಳನ್ನು ಪಡೆದುದಿಲ್ಲವೆಂದು ಹೇಳಿದರು.


ಬಂಟ್ವಾಳ ಪೊಲೀಸ್ ಸ್ಟೇಶನ್‌ನ ಫುಡ್ ಮೊಬೈಲ್ ಸ್ಕಾ÷್ವಡ್‌ಗೆ 1975 ಎಪ್ರಿಲ್‌ವರೆಗೆ ಮಾತ್ರ ಜೀಪ್ ಇತ್ತೆಂದೂ, ಆ ಬಳಿಕ ಜೀಪಿನ ಸೌಕರ್ಯ ಇರಲಿಲ್ಲವೆಂದೂ, ಬಂಟ್ವಾಳ ಸರ್ಕಲ್ ಇನ್ಸ್ಪೆಕ್ಟರ್‌ರವರ ಜೀಪಿನ ಬಣ್ಣ ಲೈಟ್ ಗ್ರೀನ್ ಆಗಿತ್ತೆಂದೂ, ಸದ್ರಿ ಜೀಪನ್ನು 4-5 ದಿನಗಳವರೆಗೆ ಸಿಓಡಿ ಪೊಲೀಸರು ಪರೀಕ್ಷೆ ಬಗ್ಗೆ ತೆಗೆದುಕೊಂಡು ಹೋಗಿದ್ದರೆಂದೂ, ಆ ಬಳಿಕ ತಾವು 23-9-76ರಂದು ವರ್ಗವಾಗಿ ಹೋಗುವವರೆಗೆ ಮತ್ತು ಈಗಿನ ತನಕ ಆ ಜೀಪನ್ನು ತಾನು ಕಂಡಿರಲಿಲ್ಲವೆAದೂ ಸಾಕ್ಷಿಯವರು ಆರೋಪಿ ಪರ ವಕೀಲರ ಪ್ರಶ್ನೆಗಳಿಗೆ ಉತ್ತರಿಸುತ್ತಾ ತಿಳಿಸಿದರು.
ತಾ. 6-9-76ರಂದು 2ನೇ ಆರೋಪಿ ಪುರಂದರ ಭಟ್ಟರು ಮೋಟಾರು ಸೈಕಲಿನಲ್ಲಿ ಹೋಗುತ್ತಿದ್ದಾಗ ಅವರನ್ನು ಪೊಲೀಸ್ ಸ್ಟೇಶನಿಗೆ ತಂದು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿತ್ತು ಎಂಬುದನ್ನು ಸಾಕ್ಷಿಯವರು ನಿರಾಕರಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top