ಕಾರ್ಕಳ : ರಾಮಕ್ಷತ್ರಿಯ ಸಂಘ (ರಿ) ಕಾರ್ಕಳ, ಇವರ ವತಿಯಿಂದ ಸಮಾಜಭಾಂದವರ ಒಗ್ಗೂಡುವಿಕೆಯಲ್ಲಿ ಎ.17ರಂದು ಶ್ರೀ ರಾಮ ನವಮಿ ಆಚರಣೆಯನ್ನು ಕಾರ್ಕಳದ ಬಂಡೀಮಠ ಶ್ರೀ ರಾಮ ಸಭಾಭವನದಲ್ಲಿ ನಡೆಸಲಾಯಿತು.
ಪುರೋಹಿತರ ಮೂಲಕ ಅಶೋಕ್ ಕುಮಾರ್ ಕೆ. ಎಸ್ ಜೋಡುರಸ್ತೆ ದಂಪತಿಗಳಿಂದ ಪೂಜಾ ವಿಧಿ ವಿದಾನಗಳನ್ನು ನೆರವೇರಿಸಲಾಯಿತು.
ರಾಮಕ್ಷತ್ರಿಯ ಮಹಿಳಾ ಸದಸ್ಯರಿಂದ ಭಜನೆ ಕಾರ್ಯಕ್ರಮ ನಡೆಸಿಕೊಡಲಾಯಿತು.
ಮಧ್ಯಾಹ್ನದ ವೇಳೆಗೆ ಮಹಾಪೂಜೆ , ಪ್ರಸಾದ ವಿತರಣೆ ಜರುಗಿತು.
ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಗುರುಪ್ರಸಾದ್ ರಾವ್ ಅಜೆಕಾರು ವಹಿಸಿದರು.
ಮರ್ಯಾದಾಪುರುಷೋತ್ತಮ ಶ್ರೀ ರಾಮ ಮತ್ತು ಆತನ ವ್ಯಕ್ತಿತ್ವ, ಆದರ್ಶಗಳು ಹಾಗೂ ಮನೆಮನೆಯಲ್ಲಿ ಆದರ್ಶಗಳನ್ನು ಪಾಲಿಸುವಂತೆ ತಿಳಿಸಿದರು.
ಕಾರ್ಯಕಾರಿ ಸಮಿತಿಯ ಸದಸ್ಯ ಹಾಗೂ ಕಾರ್ಕಳ ಭುವನೇಂದ್ರ ಪ್ರೌಢಶಾಲೆಯ ದೈಹಿಕ ಶಿಕ್ಷಕ ಸಂಜಯ್ ಕುಮಾರ್
ಉಪನ್ಯಾಸ ನೀಡಿದರು.
ಶ್ರೀ ರಾಮಕ್ಷತ್ರಿಯ ಸಂಘ ಮುಂಬೈ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಕಾರ್ಕಳ ಮೂಲದ ರವೀಂದ್ರನಾಥ್ ನೀರೆ ವೇದಿಕೆಯಲ್ಲಿ ಉಪಸ್ಥಿತರಿದ್ದು, ಇವರನ್ನು ಕಾರ್ಕಳ ಸಂಘದ ವತಿಯಿಂದ ಗೌರವಿಸಲಾಯಿತು.
ಗೌರವಾಧ್ಯಕ್ಷ ಹಾಗೂ ಕಾರ್ಕಳ ಶ್ರೀ ರಾಮ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಪಾರ್ಥಸಾರಥಿ, ಪ್ರಮುಖರಾದ ಪ್ರಸನ್ನ ಕೆ ಬಿ., ಅಂಬಾ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಮನವಮಿ ಆಚರಣೆ ಪ್ರಯುಕ್ತ ಅನ್ನದಾನ ಸೇವೆ ನೀಡಿದ ಸಂಘದ ಹಿರಿಯ ಸದಸ್ಯ ನಿವೃತ್ತ ಎಎಸ್ಐ ಸದಾಶಿವ ಕೆ, ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಮಹೇಶ ರಾವ್ ಬೈಲೂರು ಸ್ವಾಗತಿಸಿದರು. ವಿಜೇತ ರಾಣಿ ಅಂಡಾರು ಕಾರ್ಯಕ್ರಮ ನಿರೂಪಿಸಿದರು, ಸುಕೇಶ್ ರಾವ್ ಬೈಲೂರು ವಂದನಾರ್ಪಣೆಗೈದರು.








































