ಯುವ ಜನತೆಯನ್ನು ಸಂಘಟಿಸುವಲ್ಲಿ ಕ್ರೀಡೆ ಪ್ರೇರಣೆ: ಶಾಸಕ ಸುನೀಲ್ ಕುಮಾರ್

Picture of RB NEWS

RB NEWS

Bureau Report

ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಸ್ವರಾಜ್ ಮೈದಾನ, ಗಾಂಧಿ ಮೈದಾನ ಹಾಗೂ ಕಾರ್ಕಳ ತಾಲೂಕು ಕ್ರೀಡಾಂಗಣದಲ್ಲಿ ದಿ ಗ್ರೇಟ್ ಮರಾಠಾಸ್ ಕಾರ್ಕಳ ಇವರ ಆಶ್ರಯದಲ್ಲಿ ಉಡುಪಿ, ಮಂಗಳೂರು, ಕಾಸರಗೋಡು, ಶಿವಮೊಗ್ಗ ಚಿಕ್ಕಮಂಗಳೂರು ಜಿಲ್ಲೆಯ ಮರಾಠ ಸಮಾಜ ಬಂಧುಗಳ ಓವರ್ ಆರ್ಮ್ ಕ್ರಿಕೆಟ್ ಹಾಗೂ ಥ್ರೋ ಬಾಲ್ ಮತ್ತು 15 ವರ್ಷದ ಒಳಗಿನ ಮಕ್ಕಳಿಗೆ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಸ್ವರಾಜ್ ಮೈದಾನದ ಛತ್ರಪತಿ ಶಿವಾಜಿ ಮಹಾರಾಜರ ವೇದಿಕೆಯ ಉದ್ಘಾಟನೆಯನ್ನು ಮಾತನಾಡಿದರು.

ಇದೇ ಸಂದರ್ಭದಲ್ಲಿ ಶಿವಾಜಿ ಮಹಾರಾಜರ ಪುತ್ತಳಿಗೆ ಆರತಿ ಬೆಳಗಿಸಿ ತಿಲಕವನ್ನು ಇಟ್ಟು ಗೌರವ ಸಮರ್ಪಿಪಿದರು ಸುನೀಲ್ ಕುಮಾರ್ ಅವರು ಮಾತನಾಡಿ, ಐದು ಜಿಲ್ಲೆಯ ಮರಾಠ ಸಮುದಾಯದ ಜನತೆಯನ್ನು ಒಗ್ಗೂಡಿಸಿಕೊಂಡು ಕಾರ್ಕಳದಲ್ಲಿ ಕ್ರೀಡಾಕೂಟ ಆಯೋಜಿಸುವುದು ಅತ್ಯಂತ ಸಂತಸ ತಂದಿದೆ ಕ್ರೀಡೆಯ ಮೂಲಕ ಸಮಾಜದ ಬಲವರ್ಧನೆಯ ಕಾರ್ಯವಾಗಿದೆ ಎಂದರು.

ಸಭಾಧ್ಯಕ್ಷತೆಯನ್ನು ವಹಿಸಿದ ಸಮಾಜದ ಹಿರಿಯ ಉದ್ಯಮಿ ಕೆ ಉಮೇಶ್ ರಾವ್ ರವರು ಮಾತನಾಡಿ, ಕ್ರೀಡಾನಿಧಿಗೆ ಸಹಕರಿಸುವುದಾಗಿ ತಿಳಿಸಿದರು.

ಕೆ. ಕೆ. ಎಮ್. ಪಿ ಬೆಂಗಳೂರು ಇದರ ಉಪಾಧ್ಯಕ್ಷ ನಾಗೇಶ್ ರಾವ್ ವಂಡ್ಸೆ ಮಾತನಾಡಿ ಕಾರ್ಕಳದ ಸಮಾಜ ಬಂದುಗಳ ಶಿಸ್ತು ಹಾಗೂ ವ್ಯವಸ್ಥೆಗೆ ಮೆಚ್ಚುಗೆ ತಿಳಿಸಿದರು.

ಮುಂಡ್ಕೂರು ರಾಜಶ್ರೀ ಸಮೂಹ ಸಂಸ್ಥೆಯ ಮಾಲಕ ಜನ್ನೊಜಿ ರಾವ್, ಉದ್ಯಮಿಗಳಾದ ಅರುಣ್ ಕುಮಾರ್ ನಿಟ್ಟೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸುಭೋದ ರಾವ್,
ಸಿ. ಎ ಹರೀಶ್ ರಾವ್ ಮೋರೆ, ಕಾವೇರಿ ಕನ್ಸ್ಟ್ರಕ್ಷನ್ ಜೋಡುಕಟ್ಟೆ ಇದರ ಮಾಲಕರಾದ ರಮಾನಾಥ್ ರಾವ್ ತಾಮಸ, ಎಸ್ ಸತ್ಯಾರ್ಥಿ ರಾವ್ ವೀಡೆ,
ಸಂತೋಷ್ ರಾವ್ ಲಾಡ್ ಸಂತೋಷ್ ರಾವ್ ಕವಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರುತಿ ಶಿಂದೆ ಕಾರ್ಯಕ್ರಮ ನೆರವೇರಿಸಿದರು

ಮಹಿಳೆಯರಿಗಾಗಿ ನಡದ ತ್ರೋಬಾಲ್ ಕ್ರೀಡಾಕೂಟವನ್ನು ಛತ್ರಪತಿ ಶಿವಾಜಿ ಮಹಾರಾಜ್ ವೇದಿಕೆಯಲ್ಲಿ ಚಂದ್ರಕಲಾ. ಜೆ.ರಾವ್, ರಾಜಶ್ರೀ ಸಮೂಹ ಸಂಸ್ಥೆ ಮುಂಡ್ಕೂರು ಇವರು ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿಗೆ ಆರತಿ ಬೆಳಗಿಸಿ ತಿಲಕವನ್ನು ಇಡುವ ಮೂಲಕ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಡಾ. ಪಲ್ಲವಿ ಕೀರ್ತನ್ ಕುಮಾರ್ ಅಸೋಸಿಯೇಟ್ ಪ್ರೊಫೆಸರ್ ಇಂಜಿನಿಯರಿಂಗ್ ವಿಭಾಗ ನಿಟ್ಟೆ ಇವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಡಾ. ಸುಮತಿ ರಾವ್ ಪವಾರ್ ಅಸೋಸಿಯೇಟ್ ಪ್ರೊಫೆಸರ್ ಇಂಜಿನಿಯರಿಂಗ್ ವಿಭಾಗ ನಿಟ್ಟೆ ವೇದಾವತಿ ಎನ್ ದೈಹಿಕ ಶಿಕ್ಷಕರು ಸುಂದರ ಪುರಾಣಿಕ ಪ್ರೌಢಶಾಲೆ ಕಾರ್ಕಳ, ಸುಶೀಲ ರಾವ್ ಪವಾರ್ ಅಧ್ಯಕ್ಷರು ಮರಾಠ ಸಮಾಜ ಕೊಪ್ಪ, ಶೋಭಾ ವಿಠ್ಠಲ್ಜಿ ರಾವ್ ಜಾಧವ್ ಸೇವಾ ಪ್ರತಿನಿಧಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ,
ನಾಗವೇಣಿ ರಾವ್ ಸೆಪ್ಟೆಕರ್ ಸಾಣೂರು, ಕುಸುಮ ಸುಧಾಕರ್ ರಾವ್ ಬಹುಮಾನ್ ಕಾರ್ಕಳ, ಜಯಂತಿ ದಿನೇಶ್ ರಾವ್ ಕವಡೆ ಕಾಳಿಕಾಂಬ ಕಾರ್ಕಳ, ರಾಜೇಶ್ವರಿ ತಮಾಸ ಮಾಜಿ ಅಧ್ಯಕ್ಷರು ಮೀಯಾರು ಗ್ರಾಮ ಪಂಚಾಯತ್ ಕಾರ್ಕಳ, ರಾಜೇಶ್ವರಿ ಪ್ರಕಾಶ್ ರಾವ್ ಕವಡೆ ಕಾಳಿಕಾಂಬ ಕಾರ್ಕಳ ಉಪಸ್ಥಿತರಿದ್ದರು.

ದಿಶಾ ರಾವ್ ವೀಡೆ ನಿರೂಪಿಸಿದರು. ಶಕುಂತಲಾ ರಾವ್ ಕವಡೆ ಸ್ವಾಗತಿಸಿದರು.

ಬಹುಮಾನ ವಿತರಣೆ ಸಮಾರೋಪ ಸಮಾರಂಭವು ಸ್ವರಾಜ್ ಮೈದಾನದ ಛತ್ರಪತಿ ಶಿವಾಜಿ ಮಹಾರಾಜ್ ವೇದಿಕೆಯಲ್ಲಿ ನಡೆಯಿತು.

ಸಭಾಧ್ಯಕ್ಷತೆ ವಹಿಸಿದ ದಿ ಗ್ರೇಟ್ ಮರಾಠ ಟೀಂನ ಸ್ಥಾಪಕ ಹಾಗೂ ಕೆ. ಕೆ. ಎಂ. ಪಿ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಕೆ ಬಿ ಕೀರ್ತನ್ ಕುಮಾರ್ ಲಾಡ್ ರವರು ಮಾತನಾಡಿ, ಕ್ರೀಡಾ ಕೂಟದ ಯಶಸ್ಸು ದಿ ಗ್ರೇಟ್ ಮರಾಠ ತಂಡದ ಸದಸ್ಯರಿಗೆ ಹಾಗೂ ಕ್ರೀಡಾಪಟುಗಳಿಗೆ ಮತ್ತು ಸಮಾಜ ಬಂಧುಗಳಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಬೋಳ ಪ್ರಶಾಂತ್, ವಕೀಲ ಸದಾನಂದ ಸಾಲಿಯಾನ್, ಕೆ.ಕೆ. ಎಂ.ಪಿ ಉಡುಪಿ ಜಿಲ್ಲೆ ಅಧ್ಯಕ್ಷ ಪ್ರಕಾಶ್ ರಾವ್ ಕವಡೆ, ಚಿರಾಗ್ ರಾವ್ ಹೋಟೆಲ್ ಚಿರಾಗ್ ಬಜಗೋಳಿ ಸಂತೋಷ್ ರಾವ್ , ಅಧ್ಯಕ್ಷರು ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಾಹಕಾರ ಸಂಘ ಕಾರ್ಕಳ
ಸಂತೋಷ್ ಲಾಡ್ ಕಾರ್ಕಳ, ಸತ್ಯಾರ್ಥಿ ರಾವ್ ವಿಡೆ ರಮನಾಥ ರಾವ್ ತಮಾಸ ರಾಜಾರಾಮ ರಾವ್ ಉಪಸ್ಥಿತರಿದ್ದರು.

ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.

ಬಹುಮಾನ ವಿತರಣಾ ಕಾರ್ಯಕ್ರಮ ನಿರೂಪಣೆಯನ್ನು ಸಂತೋಷ್ ರಾವ್ ಕವಡೆ ನಿರ್ವಹಿಸಿದರು.‌

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top