ಮೂಡುಬಿದಿರೆ ಹೋಬಳಿ ಘಟಕದ ಪದಗ್ರಹಣ ಸಮಾರಂಭ

Picture of RB NEWS

RB NEWS

Bureau Report

ಮೂಡುಬಿದಿರೆ: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮೂಡುಬಿದಿರೆ ತಾಲೂಕು ಘಟಕದ ಆಶ್ರಯದಲ್ಲಿ ಮೂಡುಬಿದಿರೆ ಹೋಬಳಿ ಮಟ್ಟದ ಪದಗ್ರಹಣ ಸಮಾರಂಭ ಅಗೋಸ್ತು 3 ರಂದು ಸಮಾಜ ಮಂದಿರದಲ್ಲಿ ನಡೆಯಿತು. ಹೋಬಳಿ ಘಟಕದ ಎಲ್ಲಾ ಪದಾಧಿಕಾರಿ ಸದಸ್ಯರಿಗೆ ಸಾಹಿತ್ಯ ಪರಿಷತ್ತಿನ ಶಾಲನ್ನು ಹಾಕಿ ದಕ್ಷಿಣ ಕನ್ನಡ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಶ್ರೀನಾಥ್ ಎಂ.ಪಿ. ಸ್ವಾಗತಿಸಿದರು. ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಶ್ರೀನಾಥ್ ರವರು ಮಾತನಾಡಿ ಅಧಿಕಾರ ವಿಕೇಂದ್ರೀಕರಣಕ್ಕಾಗಿ ಹೋಬಳಿ ಘಟಕ ರಚಿಸುತ್ತಿದ್ದೇವೆ. ಎಳನೀರಿ ನಂತಹ ಅತ್ಯಂತ ಹಿಂದುಳಿದ ಪ್ರದೇಶದಲ್ಲಿ ಸಾಹಿತ್ಯ ಸಮ್ಮೇಳನ ಮಾಡಿ ಸೂಕ್ತ ರಸ್ತೆಗಾಗಿಯೂ ಜಿಲ್ಲಾ ಆಡಳಿತದ ಎದುರು ಬೇಡಿಕೆ ಇಟ್ಟಿದ್ದೇವೆ. ವಿದ್ಯಾರ್ಥಿಗಳು ಇದ್ದಲ್ಲಿಗೆ ಸಾಹಿತ್ಯ ಪರಿಷತ್ತು ಇಂದು ಹೋಗುತ್ತಿದೆ. ಹಿರಿಯ ಸಾಹಿತಿಗಳ ಮನೆ ಭೇಟಿ ಮಾಡಿ ಅತ್ಯಂತ ಅಪೂರ್ವ ಅನುಭವವನ್ನು ಹೊಂದುತ್ತಿದ್ದೇವೆ ಎಂದು ಸಂತಸಪಟ್ಟರು. ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಸೌಮ್ಯ ಮಾತನಾಡಿ ಶಿಕ್ಷಕರ ಪ್ರೇರಣೆಯಿಂದ ಕನ್ನಡ ಭಾಷೆ, ಸಾಹಿತ್ಯ ಬೆಳೆಯಲು ಸಾಧ್ಯ ಎಂದರು.ಕ.ರಾ.ಸ.ನೌ.ಸಂಘದ ಅಧ್ಯಕ್ಷ ನಾಗೇಶ್ ಎಸ್ ವೇದಿಕೆಯಲ್ಲಿ ಹಾಜರಿದ್ದರು. ಕ.ಸಾ.ಪ. ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹೋಬಳಿ ಘಟಕದ ಅಧ್ಯಕ್ಷ ರಾಮಕೃಷ್ಣ ಶಿರೂರು ಸ್ವಾಗತಿಸಿದರು.ಗೌರವ ಕಾರ್ಯದರ್ಶಿ ಡಾ.ದೊರೆಸ್ವಾಮಿ ಕೆ.ಎನ್.ಕಾರ್ಯಕ್ರಮ ನಿರೂಪಿಸಿದರು. ನಾಗರತ್ನ ಶಿರೂರು ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top