ಮೂಡುಬಿದಿರೆ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ
ಮೂಡುಬಿದಿರೆ: ಮೂಡಬಿದಿರೆ ಸಮಾಜ ಮಂದಿರದಲ್ಲಿರುವ ಶ್ರೀ ಸಾರ್ವಜನಿಕ ಗಣೇಶ ದೇವರ ವಿಸರ್ಜನಾ ಮೆರವಣಿಗೆ ಪ್ರಯುಕ್ತವಾಗಿ ಆಗಸ್ಟ್ 31 ರಂದು ಬೆಳಗ್ಗೆ 8:30 ಗಂಟೆಯಿಂದ ಹುಲಿ ಕುಣಿತ ಇತರ ಕಾರ್ಯಕ್ರಮಗಳು ಪೇಟೆಯಲ್ಲಿ ಪ್ರಾರಂಭವಾಗಲಿದೆ.
ಸಾರ್ವಜನಿಕರು ಬೆಳಗ್ಗೆಯಿಂದಲೇ ಮೂಡಬಿದಿರೆ ಪೇಟೆಗೆ ಬಂದು ವಾಹನಗಳನ್ನು ಪಾರ್ಕಿಂಗ್ ಮಾಡಬಾರದಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.
ಮಧ್ಯಾಹ್ನ 2-00 ಗಂಟೆಯ ನಂತರ ಸಂಚಾರದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡಿದ್ದು ಮೂಡಬಿದಿರೆಯ ಪೇಟೆಗೆ ವಾಹನಗಳು ಬಾರದಂತೆ ನಿರ್ಬಂಧಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ತಮ್ಮ ವಾಹನಗಳನ್ನು ಮೂಡಬಿದಿರೆ ನಗರಕ್ಕೆ ತರದೇ ಮೂಡಬಿದ್ರೆಯ ಹೊರವರ್ತುಲ (ಬೈಪಾಸ್) ರಸ್ತೆಯಲ್ಲಿ ವಿಸರ್ಜನ ಮೆರವಣಿಗೆ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳು ಮುಗಿಯುವವರೆಗೂ ಸಂಚರಿಸ ಬೇಕಾಗಿ ಪೊಲೀಸ್ ಇಲಾಖೆಯ ಪರವಾಗಿ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.







































