ಮಾಜಿಶಾಸಕ ರಘುಪತಿ ಭಟ್ ಅವರಿಗೆ ಶಾಸಕ ಹಾಗೂ ಪಕ್ಷದ ಮುಖಂಡ ವಿ.ಸುನೀಲ್ ಕುಮಾರ್ ಎಚ್ಚರಿಕೆಯ ಸಂದೇಶ

Picture of RB NEWS

RB NEWS

Bureau Report

ಉಡುಪಿ : ಮಾಜಿಶಾಸಕ ರಘುಪತಿ ಭಟ್ ಅವರು 24 ಗಂಟೆಯೊಳಗೆ ರಾಜಕೀಯ ನಿವೃತ್ತಿ ಘೋಷಿಸಬೇಕು, ಇಲ್ಲದಿದ್ದರೆ ಅವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ವಿ. ಸುನೀಲ್ ಕುಮಾರ್ ಉಡುಪಿಯಲ್ಲಿ ಹೇಳಿದ್ದಾರೆ.

ಮಾಜಿಶಾಸಕ ರಘುಪತಿ ಭಟ್ ಅವರಿಗೆ ಶಾಸಕ ಹಾಗೂ ಪಕ್ಷದ ಮುಖಂಡ ವಿ.ಸುನೀಲ್ ಕುಮಾರ್ ಎಚ್ಚರಿಕೆಯ ಸಂದೇಶ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಘುಪತಿ ಭಟ್ ಸ್ವಯಂ ನಿವೃತ್ತಿ ಘೋಷಿಸದಿದ್ದರೆ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು, ನಾವು ನಮ್ಮ ಅಭ್ಯರ್ಥಿ ಗೆಲ್ಲುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ, ನಾವು ಇನ್ನೂ ಅವರ ನಿವೃತ್ತಿ ಘೋಷಣೆಯ ನಿರೀಕ್ಷೆಯಲ್ಲಿದ್ದೇವೆ, ನಾವು ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಅಸಮಾಧಾನ ಇದ್ದರೆ, ಅನ್ಯಾಯ ನಡೆದರೆ ಪಕ್ಷ ತನ್ನ ಚೌಕಟ್ಟಿನೊಳಗೆ ನಿರ್ಧಾರವನ್ನು ಸರಿಪಡಿಸುತ್ತದೆ.” ಎಂದಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top