ಮಹಾಲಕ್ಷ್ಮೀಯ ಅಮಾನುಷ ಹತ್ಯೆ ಪೂರ್ವ ಯೋಜಿತ: ಆರೋಪಿ ಆತ್ಮಹತ್ಯೆಗೆ ಶರಣು

Picture of RB NEWS

RB NEWS

Bureau Report

ಸೆಪ್ಟೆಂಬರ್ 3 ರಂದು ಪ್ರೇಯಸಿ ಮಹಾಲಕ್ಷ್ಮೀಯನ್ನು ಹತ್ಯೆ ಮಾಡಿದ್ದೇನೆ ಎಂದು ಆರೋಪಿ ಮುಕ್ತಿ ರಂಜನ್ ರಾಯ್ ಉಲ್ಲೇಖಿಸಿದ್ದಾನೆ.

ಸೆ.3 ರಂದು ಆಕೆಯ ಮನೆಗೆ ಹೋದಾಗ ಕೃತ್ಯ ಎಸಗಿದ್ದೇನೆ. ವೈಯಕ್ತಿಕ ವಿಚಾರಗಳಿಗೆ ಆಕೆ ಜೊತೆ ಜಗಳವಾಯಿತು. ಆಗ ಆಕೆ ಹಲ್ಲೆ ನಡೆಸಿದಳು. ಇದರಿಂದ ಕೋಪಗೊಂಡು ಆಕೆಯನ್ನು ಕೊಂದೆ. ಆ ಬಳಿಕ 59 ಪೀಸ್ ಮಾಡಿ ಫ್ರಿಡ್ ನಲ್ಲಿ ಇರಿಸಿದ್ದೆ. ಆಕೆಯ ವರ್ತನೆಯಿಂದ ಬೇಸತ್ತು ಕೃತ್ಯ ಎಸಗಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದನು.‌

ಮೊದಲು ಮಹಾಲಕ್ಷ್ಮಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಆಕೆಯನ್ನ ಆ್ಯಕ್ಸಲ್ ಬ್ಲಡ್‌ನಿಂದ ಕತ್ತರಿಸಿದ್ದಾನೆ. ಬಾತ್ ರೂಂನಲ್ಲಿ ಆಕೆ ದೇಹವನ್ನ ಪೀಸ್ ಪೀಸ್ ಮಾಡಿದ್ದಾನೆ. ನಂತರ ಫ್ರಿಡ್ಜ್‌ ಮಹಾಲಕ್ಷ್ಮಿ ಮೃತದೇಹದ 53 ಪೀಸ್‌ಗಳನ್ನು ತುಂಬಿದ್ದಾನೆ. ಸಾಕ್ಷಿ ನಾಶಪಡಿಸಲು ಬಾತ್ ರೂಂನಲ್ಲಿ ಆ್ಯಸಿಡ್ ಹಾಕಿ ಕ್ಲೀನ್ ಮಾಡಿದ್ದಾನೆ

ಭೀಕರ ಕೊಲೆಯ ಪ್ರಮುಖ ಶಂಕಿತ ಆರೋಪಿಯಾಗಿದ್ದ ರಂಜನ್. ಈತನ ಮೇಲೆ ತನಿಖಾ ತಂಡಕ್ಕೆ ಹೆಚ್ಚು ಅನುಮಾನ ಇತ್ತು. ಮಹಾಲಕ್ಷ್ಮಿ ಜೊತೆ ಶೋರೂಂನಲ್ಲಿ ಸ್ಟೋರ್ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದ. ಮಹಾಲಕ್ಷ್ಮಿ ಕೊಲೆ ದಿನವಾದ ಸೆ.3 ರಿಂದ ಈತನ ಮೊಬೈಲ್ ಕೂಡ ಸ್ವಿಚ್ ಆಫ್‌ ಆಗಿತ್ತು.

ಬೆಂಗಳೂರನ್ನೂ ಬಿಟ್ಟು ಈತ ಬೇರೆ ಕಡೆ ಎಸ್ಕೆಪ್ ಆಗಿದ್ದ. ಕಾಲ್ ರಿಟೇಲ್ ನಲ್ಲೂ ಮಹಿಳೆ ಈತನ ಜೊತೆ ಹೆಚ್ಚು ಸಂಪರ್ಕವಿರೋದು ಗೊತ್ತಾಗಿತ್ತು.

ತನಿಖೆ ಪ್ರಾರಂಭವಾದ ವೇಳೆ ಈತನ ಸುಳಿವು ಇರಲಿಲ್ಲ. ಹೀಗಾಗಿ, ಈತನ ಫೋನ್ ಕಾಲ್ ಜಾಡು ಹಿಡಿದು ಪೊಲೀಸರ ತಂಡ ಹೊರಮಹಾ ಲಕ್ಷ್ಮೀ ಪೊಲೀಸರಿಗೆ ಸಿಗುವ ಮುನ್ನವೇ ತನ್ನ ಊರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಡಿಸಾದ ಭೂನಿಪುರ ಎಂಬ ಗ್ರಾಮದಲ್ಲಿ ನೇಣಿಗೆ ಶರಣಾಗಿದ್ದಾನೆ. ಆತ್ಮಹತ್ಯೆ ಬಗ್ಗೆ ದುಸೂರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top