ಮಧು ಮೇಹ /ಸಕ್ಕರೆ ಕಾಯಿಲೆಯನ್ನು ಹತೋಟಿಗೆ ಇಟ್ಟುಕೊಳ್ಳುವ ವಿಧಾನ
RB NEWS
Bureau Report
ಮಧು ಮೇಹ /ಸಕ್ಕರೆ ಕಾಯಿಲೆ ಇದನ್ನು ಹೇಗೆ ಹತೋಟಿಯಲ್ಲಿ ಇಟ್ಟು ಕೊಳ್ಳಬಹುದು
ಮೊಬೈಲ್ ನ ಯು ಟ್ಯೂಬ್ ನಲ್ಲಿ ಅನೇಕ ವೈದ್ಯರು ಮತ್ತು ಮಧು ಮೇಹದ ಬಗ್ಗೆ ತಿಳಿದುಕೊಂಡಿರುವ ಮಹನೀಯರು ತಿಳಿಸಿರುವ ಮಾಹಿತಿಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುತ್ತಿದ್ದೇನೆ.
ಮುಖ್ಯವಾಗಿ ಹೆಚ್ಚಿನವರ ಅಭಿಪ್ರಾಯದಂತೆ ಬೆಳಿಗ್ಗೆ ಎದ್ದ ತಕ್ಷಣ ಹಲ್ಲುಜ್ಜಿ ಹಿಂದಿನ ದಿನ ನೀರಿನಲ್ಲಿ ಹಾಕಿರುವ ಮೆಂತೆ ಬೀಜವನ್ನು ನೀರಿನೊಂದಿಗೆ ತಿನ್ನುವುದು [2 ಟೀ ಚಮಚದಷ್ಟು ಮೆಂತೆ ] ನಂತರ 45 ನಿಮಿಷ ನಡಿಗೆ ವಾಕಿಂಗ್ ಮಾಡುವುದು. ಮನಸ್ಸಿನಲ್ಲಿ ಯಾವುದೇ ಒತ್ತಡವನ್ನು ಇಟ್ಟುಕೊಳ್ಳದಿರುವುದು .”ನನ್ನನ್ನು ನಾನು ಪ್ರೀತಿಸುವುದು “ಇದು ಬಹಳ ಮುಖ್ಯ. ನನ್ನ ಗುರುಸಮಾನರಾದ ಹರಿದಾಸ ಬಿ.ಸಿ .ರಾವ್ ಶಿವಪುರ ಅವರು ಹೇಳುವಂತೆ “ಈ ದಿನ ಈ ಕ್ಷಣ, ಈ ಗಳಿಗೆ ಅಮೂಲ್ಯ ಅದು ಅನನ್ಯ, ಇಂದು ನನ್ನದು ಇರುವುದನ್ನು ಚೆನ್ನಾಗಿ ಬಳಸಿಕೊಂಡು ಅದರಿಂದ ಖುಷಿ ಪಡಬೇಕು.ನಾಳೆ ಎನ್ನುವುದು ಖಾಲಿ ಹಾಳೆ . ನನ್ನ ಜೊತೆಗೆ ನಾನು ಸಮಯ ಕಳೆಯುವುದು. ಚೆನ್ನಾಗಿ ನಿದ್ದೆ ಮಾಡುವುದು ಮಲಗುವ ಒಂದು ಗಂಟೆ ಮೊದಲು ಟಿ .ವಿ .ಮೊಬೈಲ್ ನಿಂದ ದೂರವಿರಬೇಕು. ದಿನಕ್ಕೆ 2 ರಿಂದ 3 ಲೀಟರ್ ನೀರು ಕುಡಿಯ ಬೇಕು .ಮದ್ಯ ಪಾನ ಮತ್ತು ಸೋಕಿಂಗ್ ಬಿಡಬೇಕು. ಈ ರೀತಿ ಮಾಡಿದಾಗ 8 ರಿಂದ 9 ತಿಂಗಳ ಒಳಗೆ ಮದ್ದು ನಿಲ್ಲಿಸಬಹುದು .
ನಾವು ತಿನ್ನಬಾರದ ಹಣ್ಣು ಮತ್ತು ತರಕಾರಿಗಳೆಂದರೆ ಮಣ್ಣಿನ ಒಳಗೆ ಬೆಳೆದ ಗೆಡ್ಡೆಗಳು ಬಟಾಟೆ, ಗೆಣಸು ಬೀಟ್ರೋಟ್ ಸಿಹಿ ಕುಂಬಳ ಕ್ಯಾರ್ರೆಟ್; ಬಾಳೆ ಹಣ್ಯ ಹಲಸಿನ ಹಣ್ಣು ಸೀತಾಫಲ,ವಾಟರ್ ಮೇಲೋನ್
ತಿನ್ನ ಬಹುದಾದ ಹಣ್ಣುಗಳು ನೇರಳೆ ಹಣ್ಣು, ಕಿವಿ ಹಣ್ಣು ಕಿತ್ತಳೆ, ಮೂಸಂಬಿ,ಪೇರಳೆ ಕಾಯಿ
ಜ್ಯೂಸ್,ಪೌಡರ್, ಅಮೃತ ಬಳ್ಳಿ ಚೂರ್ಣ, ನಿಶಾ ಕಟಕಾದಿ ಕಷಾಯ ಇತ್ಯಾದಿ ಹೀಗೆ ಇನ್ನೂ ಹಲವಾರು ವಿಷಯಗಳು ಸೇರಲಿವೆ