ಮಣಿಪಾಲ ಜ್ಞಾನಸುಧಾ :ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಅಲಿಶಾ ದ್ವಿತೀಯ

Picture of RB NEWS

RB NEWS

Bureau Report


ಮಣಿಪಾಲ: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಜನವರಿ 8ರಂದು ತುಮಕೂರಿನ ಎಂಪ್ರೆಸ್ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2024-25ನೇ ಸಾಲಿನ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವಕಾಲೇಜು ವಿದ್ಯಾನಗರದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅಲಿಶಾ ಕ್ಲಿಯಾಂತ ಬರ‍್ಬೋಜಾ ಇOಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿದ್ವಿತೀಯ ಸ್ಥಾನ ಗಳಿಸಿದ್ದಾರೆ.

ಮೂಡುಬೆಳ್ಳೆಯ ಎಡ್ವಿನ್ ರ‍್ಬೋಜಾ ಹಾಗೂ ಶಾಂತಿ ಪಿಂಟೋ ದಂಪತಿಯ ಪುತ್ರಿ.


ಸಾಧಕ ವಿದ್ಯಾರ್ಥಿನಿಯನ್ನು ಅಜೆಕಾರ್ ಪದ್ಮಗೋಪಾಲ್‌ಎಜ್ಯುಕೇಶನ್‌ಟ್ರಸ್ಟ್(ರಿ.)ನ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ, ಮಣಿಪಾಲ ಜ್ಞಾನಸುಧಾ ಪ್ರಾಶುಪಾಲರು, ಬೋಧಕ ಹಾಗೂ ಬೋಧಕೇತರ ವರ್ಗ ಅಭಿನಂದಿಸಿರುತ್ತಾರೆ.


ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top