ಭಾರತೀಯ ಅಂಚೆ ಸಂದಾಯ ಬ್ಯಾಂಕ್ ಸಮಗ್ರ ರಕ್ಷಣಾ ಯೋಜನೆ

Picture of RB NEWS

RB NEWS

Bureau Report

ಮೂಡುಬಿದಿರೆ: ಭಾರತೀ ಯ ಅಂಚೆ ಇಲಾಖೆಯ ಪ್ರತಿಯೊಂದು ಕಚೇ ರಿಗಳಲ್ಲಿ ಆದಿತ್ಯ ಬಿರ್ಲಾ ಕ್ಯಾ ಪಿಟಲ್ ಅವರ ಸಮಗ್ರ ರಕ್ಷಣಾ
ಯೋಜನೆಯ ವೈಯಕ್ತಿಕ ಅಪಘಾತಗಳ ವಿರುದ್ಧರಕ್ಷಣಾ ಕವಚವನ್ನು ಜಾರಿಗೊಳಿಸಿದೆ.

ಈ ರಕ್ಷಣಾ ಕವಚದ ಮೂಲಕವಾಗಿ
ವೈ ಯಕ್ತಿಕ ಅಪಘಾತಕ್ಕೆ ವಿಮೆ ಮಾಡಿದ ವ್ಯಕ್ತಿಗೆ ಸಮಗ್ರ ಯೋ ಜನೆಯ ಫಲದೊರಕಲಿದೆ. ಅದೇ ರೀ ತಿ ಶಾಶ್ವತ ವೈಕಲ್ಯತೆಯ
ವಿರುದ್ಧಸುರಕ್ಷತೆ, ಶಾಶ್ವತ ಅಥವಾ ಭಾಗಶಹ ವೈಕಲ್ಯತೆಯ ವಿರುದ್ಧಸುರಕ್ಷತೆ, ಸುಟ್ಟ ಗಾಯಕ್ಕಾ ಗಿ ರಕ್ಷಣೆ, ಮಕ್ಕಳಿಗಾಗಿ ಶಿಕ್ಷಣ
ನಿಧಿ ಅಂತಹ ವೈಶಿಷ್ಟ್ಯ
ಗಳನ್ನು ಈ ಆರೋಗ್ಯ ವಿಮೆಯ ಯೋಜನೆ ಹೊಂದಿದೆ.

ಈ ಆರೋ ಗ್ಯ ವಿಮೆಯ ಯೋ ಜನೆಯಲ್ಲಿ 15 ಲಕ್ಷದ ಅಥವಾ 10 ಲಕ್ಷದ ವಿಮೆಯ ಮೊತ್ತವಿದಲ್ಲಿ ಅದಕ್ಕೆ ವೈಯಕ್ತಿಕ ಅಪಘಾತದಿಂದ
ರಕ್ಷಣೆ ದೊರಕಲಿದೆ. ಆದರೆ ವಿಮಾದಾರರ ವಯಸ್ಸು 18 ರಿಂದ 65 ವರ್ಷ ಗಳ ಮಿತಿಯನ್ನು ಹೊಂದಿದೆ. ಈ ಹಿಂದಿನ ಹಲವಾರು
ಕ್ಲೇಮ್ ಪಾವತಿಯ ಸಂದರ್ಭ ದಲ್ಲಿ ಬ್ಯಾಂಕಿನಿಂದ ತೊಂದರೆಗಳಾದಾಗ ನೇರವಾಗಿ ಅಂಚೆ ಇಲಾಖೆಯೇ ಡಿ ಪಿ ಟಿ ಮ್ಯಾಪಿಂಗ್
ಮೂಲಕ ಹಣವನ್ನು ಸಂದಾಯ ಮಾಡಿದೆ. ಅದೇ ರೀ ತಿ ಪ್ರಸ್ತುತ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ನ ಮೂಲಕ
ನೇರವಾಗಿ ಪೋಸ್ಟ್ ಮ್ಯಾನ್ ಗಳೇ ಈ ಯೋಜನೆಯ ರಿನಿವಲ್ ಮಾಡಲು ಅವಕಾಶ ನೀ ಡಲಾಗಿರುತ್ತದೆ. ಆದುದರಿಂದ ಅಂಚೆ
ಕಚೇರಿಗೆ ವಿಮಾದಾರರು ಬರುವ ಅಗತ್ಯವೂ ಇರುವುದಿಲ್ಲ ಎಂದು ಪುತ್ತೂರು ಅಂಚೆ ವಿಭಾಗದ ಮಾರುಕಟ್ಟೆ ವ್ಯವಸ್ಥಾಪಕ
ಗುರುಪ್ರಸಾದ್ ತಿಳಿಸಿರುತ್ತಾರೆ.

ಒಂದು ವೇ ಳೆ ಯಾವುದೇ ರೀತಿಯ ಸಂದಾಯ ಪಾವತಿಗೆ ತೊಂದರೆಗಳಿದ್ದಲ್ಲಿ ಕೇವಲ ನೂರು ರೂಪಾಯಿಯನ್ನು ಪಾವತಿಸಿ ಅಂಚೆ
ಇಲಾಖೆಯಲ್ಲಿ ಖಾತೆಯನ್ನು ತೆರೆದಲ್ಲಿ ಎಲ್ಲಾ ರೀ ತಿಯ ಪಾವತಿಗಳೂ ಸುಲಭ ಸಾಧ್ಯವಿದೆ. ಅಂಚೆ ಕಛೇ ರಿಯಲ್ಲಿ ಪಬ್ಲಿಕ್ ಪ್ರಾವಿಡೆಂಟ್
ಫಂಡ್ ನಂತಹ ಖಾತೆಯನ್ನು ತೆರೆದಲ್ಲಿ ಟ್ಯಾ ಕ್ಸ್ ನಿಂದ ಬಹಳಷ್ಟು ಉಳಿತಾಯವನ್ನು ಪಡೆಯಲು ಸಾಧ್ಯವಿದೆ. ಅದೇ ರೀ ತಿ
ಪೋಸ್ಟಲ್ ಲೈಫ್ ಇನ್ಶೂರೆನ್ಸ್ ಮಾಡುವುದರಿಂದ ಕೂಡ ಕಡಿಮೆ ಪ್ರೀಮಿಯಮ್ ನಿಂದ ಬಹಳಷ್ಟು ಲಾಭಗಳನ್ನು ವ್ಯಕ್ತಿಗಳು
ಹೊಂದಬಹುದಾಗಿದೆ.
ಗ್ರಾಮೀ ಣ ಜನತೆಗೆ ಬಹಳ ಉಪಯುಕ್ತವಾದಂತ ಗ್ರಾಮೀ ಣ ಪೋಸ್ಟಲ್ ಲೈ ಫ್ ಇನ್ಶುರೆನ್ಸ್ ಕೂಡ ಕಡಿಮೆ
ಪ್ರೀಮಿಯಂನಲ್ಲಿ ಹೆಚ್ಚು ಲಾಭಗಳಿಸುವ ಖಾತೆಯಾಗಿದೆ. ಈ ರೀತಿ ಹಲವಾರು ಸೌಲಭ್ಯಗಳನ್ನು ದೇಶದ ಎಲ್ಲಕಡೆಯೂ ಸಾಮಾನ್ಯ
ಜನರಿಗೆ ಅಂಚೆ ಇಲಾಖೆ ಒದಗಿಸುತ್ತಿದೆ. ಅಂಚೆ ಇಲಾಖೆ ಇಂದು ಬ್ಯಾಂಕ್ ರೀತಿ ಪರಿವರ್ತನೆ ಯಾಗಿದ್ದು ಅದರ ಪ್ರಯೋ ಜನ
ಎಲ್ಲರೂ ಪಡೆದುಕೊಳ್ಳಲು ಕೇ ಳಿಕೊಂಡರು.

ವರದಿ ರಾಯಿ ರಾಜಕುಮಾರ್ ಮೂಡುಬಿದಿರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top