ಬೇಡಿಕೆಗೆ ಸಿಗದ ಸ್ಪಂದನೆ : ಸಾರ್ವಜನಿಕರಿಂದಲೇ ತಾತ್ಕಾಲಿಕ ತಂಗುದಾಣ ನಿರ್ಮಾಣ

Picture of RB NEWS

RB NEWS

Bureau Report

ಕಾರ್ಕಳ : ಕಳೆದೆರಡು ವರ್ಷಗಳಿಂದ ಕಾರ್ಕಳದ ಸಾಣೂರಿನಿಂದ ಮಂಗಳೂರಿನ ಬಿಕರ್ನಕಟ್ಟೆಯ ವರೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧ ಕಾಮಗಾರಿಯ ನೆಪವಾಗಿಟ್ಟುಕೊಂಡು ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಪ್ರಯಾಣಿಕರ ತಂಗುದಾಣ ಮತ್ತು ರಿಕ್ಷಾ ತಂಗುದಾಣವನ್ನು ಕೆಡವಲಾಗಿತ್ತು.

ದಿನಂಪ್ರತಿ ಬಸ್ಸಿನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳು ,ಅಧ್ಯಾಪಕರು ಹಾಗೂ ಇನ್ನಿತರ ಪ್ರಯಾಣಿಕರು ರಸ್ತೆ ಬದಿಯಲ್ಲಿಯೇ ಬಿಸಿಲು ಮಳೆಗೆ ಬಸ್ಸಿಗಾಗಿ ಕಾಯಬೇಕಾಗಿದ್ದು, ಕಳೆದ ಎರಡು ವರ್ಷಗಳಿಂದ ತೀರಾ ತೊಂದರೆ ಅನುಭವಿಸುತ್ತಾ ಬಂದಿದ್ದಾರೆ.

ಈ ಬಗ್ಗೆ ಹಲವಾರು ಬಾರಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರಿಗೆ, ಜಿಲ್ಲಾಧಿಕಾರಿಯವರಿಗೆ, ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಹೊಸ ತಂಗುದಾಣ ನಿರ್ಮಾಣ ಆಗುವವರೆಗೆ ಕನಿಷ್ಠ ಪಕ್ಷ ಪ್ರಯಾಣಿಕರ ಅನುಕೂಲಕ್ಕಾಗಿ ತಾತ್ಕಾಲಿಕ ನೆಲೆಯಲ್ಲಿಯೂ ಕೂಡ ಯಾವುದೇ ಅನುಕೂಲವನ್ನು ಕಲ್ಪಿಸಿಲ್ಲ.

ಹೊಸ ಪ್ರಯಾಣಿಕರ ತಂಬುದಾಣಗಳನ್ನು ನಿರ್ಮಾಣ ಮಾಡಲು ಇನ್ನೂ ಕೂಡ ಸ್ಥಳ ನಿಗದಿ ಮಾಡಲು ರಾಷ್ಟ್ರೀಯ ಹೆದ್ದಾರಿ ಇಲಾಖೆ ಮೀನ ಮೇಷ ಎಣಿಸುತ್ತಿದ್ದು, ತೀರಾ ಬೇಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದೆ.

ಹೆದ್ದಾರಿ ಇಲಾಖೆಯ ಜನ ವಿರೋಧಿ ನೀತಿಯಿಂದ ಅನುಸರಿಸುತ್ತಿದ್ದು, ಇದರಿಂದ ಬೇಸತ್ತ ಸ್ಥಳೀಯ ರಿಕ್ಷಾ ಮಾಲಕ ಚಾಲಕರು, ಸಾಣೂರು ಯುವಕ ಮಂಡಲದ ಸಹಭಾಗಿತ್ವದೊಂದಿಗೆ ಬಿಸಿಲಿನ ಬೇಗೆಯಿಂದ ಹೆದ್ದಾರಿ ಬದಿಯಲ್ಲಿ ನಿಲ್ಲಲು ನೆರಳು ಬಲೆ ಮತ್ತು ಮರದ ಕಂಬಗಳಿಂದ ಸಾಣೂರಿನಲ್ಲಿ ತಾತ್ಕಾಲಿಕ ಪ್ರಯಾಣಿಕರ ತಂಗುದಾಣ ನಿರ್ಮಿಸಿ ನಾಗರಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕಳೆದ ನಾಲ್ಕು ತಿಂಗಳಿನಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದುದರಿಂದ, ಹೆದ್ದಾರಿ ಕಾಮಗಾರಿಗೆ ತಡೆಯುಂಟಾಗಿತ್ತು.

ಕಳೆದ ಒಂದು ತಿಂಗಳಿನಿಂದ ಗುತ್ತಿಗೆದಾರ ದಿಲೀಪ್ ಬಿಲ್ಡ್ ಕಾನ್ ಕಂಪನಿಯವರು ಹೆದ್ದಾರಿ ಕಾಮಗಾರಿಯನ್ನು ಆರಂಭಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top