ಬೃಹತ್ ಗಾತ್ರದ ಟ್ಯಾಂಕ್ ನಲ್ಲಿ ಸಿಲುಕಿದ ಕಾರ್ಮಿಕರು: ರಕ್ಷಿಸಿದ ಅಗ್ನಶಾಮಕ‌ ದಳ

Picture of RB NEWS

RB NEWS

Bureau Report

ಸಾಣೂರು : ಮುರತ್ತಂಗಡಿ ಪ್ರಕೃತಿ ವಿದ್ಯಾ ಸಂಸ್ಥೆ ಬಳಿಯ ಗುಡ್ಡದ ಮೇಲಿರುವ ಟ್ಯಾಂಕ್ ನಲ್ಲಿ ಸ್ವಚ್ಛತೆಗೆಂದು ಇಳಿದಿದ್ದ ಇಬ್ಬರು ಕಾರ್ಮಿಕರು ಮೇಲೆ ಏರಲು ಅಸಾಧ್ಯವಾಗಿದ್ದು, ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ ಘಟನೆ ಸೋಮವಾರ ನಡೆದಿದೆ.

ಟ್ಯಾಂಕಿನಲ್ಲಿ ಸಿಲುಕಿಕೊಂಡ ಕಾರ್ಮಿಕರನ್ನು ಮುರತ್ತಂಗಡಿಯ ಸತೀಶ್ ( 35) ಸುನೀಲ್ (38) ಎಂದು ತಿಳಿದುಬಂದಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್ , ಸಹಾಯಕ ಅಗ್ನಿಶಾಮಕ ಅಧಿಕಾರಿ ಚಂದ್ರ ಶೇಖರ್, ಸಿಬ್ಬಂದಿಯವರಾದ ರೂಪೇಶ್ ಇರೂಡ್ಕರ್, ಹರಿಪ್ರಸಾದ್ ಶೆಟ್ಟಿಗಾರ್, ಸಂಜಯ್, ಭೀಮಪ್ಪ ನರಹಟ್ಟಿರವರು ಪಾಲ್ಗೊಂಡಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top