ಬೀಗ ಹಾಕಿದ ಮನೆಗಳೇ ಈತನ ಟಾರ್ಗೆಟ್ !

Picture of RB NEWS

RB NEWS

Bureau Report

ಕಾರ್ಕಳ : ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೀಗ ಹಾಕಿದ್ದ ಖಾಲಿ ಮನೆಗಳ ಬೀಗ ಒಡೆದು ಕಳ್ಳತನ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿ ಮನೋತೋಷ್ ಕಾಯಲ್ (39), ತಂದೆ: ಧನಂಜಯ್ ಕಾಯಲ್ ಅವರನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ದಸ್ತಗಿರಿ ಮಾಡಿದ್ದಾರೆ.

ಆರೋಪಿಯ ಶಾಶ್ವತ ವಿಳಾಸ: ಆನಂದಪುರ, ಪುರ್ಬಪಾದ, ಲಕ್ಸ್ ಬಾಗಲ್, ಗೋಸಬಾ, ಸೌತ್–24 ಪರ್ಗನಾಸ್, ಪಶ್ಚಿಮ ಬಂಗಾಳ, ಪಿನ್–743370.
ಪ್ರಸ್ತುತ ವಿಳಾಸ: ನಾರ್ಲ ಮನೆ, ಮಳಲಿಕ್ರಾಸ್, ಮೊಗರು ಗ್ರಾಮ, ಗಂಜಿಮಠ, ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.

ಸದ್ರಿ ಆರೋಪಿಯು ಬೆಳಿಗ್ಗೆ ಸಮಯದಲ್ಲಿ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ, ಹಲವು ದಿನಗಳಿಂದ ಬೀಗ ಹಾಕಿರುವ ಖಾಲಿ ಮನೆಗಳನ್ನು ಗುರುತಿಸಿ ಬೀಗ ಒಡೆದು ಕಳ್ಳತನ ನಡೆಸುತ್ತಿದ್ದನು. ಈತನ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 143/2025 ಕಲಂ 331(3), 305 ಭಾರತೀಯ ನ್ಯಾಯ ಸಂಹಿತೆ–2023 ರಂತೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಮನೆಯಲ್ಲಿದ್ದ ಬ್ಯಾಟರಿಯನ್ನು ಕಳ್ಳತನ ಮಾಡಿರುವುದು ಪತ್ತೆಯಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ರವರ ಮಾರ್ಗದರ್ಶನದಲ್ಲಿ, ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ ಅವರ ನಿರ್ದೇಶನದಂತೆ, ಸಿಪಿಐ ಕಾರ್ಕಳ ಮಂಜಪ್ಪ ಅವರ ನೇತೃತ್ವದಲ್ಲಿ ಕಾರ್ಕಳ ಗ್ರಾಮಾಂತರ ಪಿಎಸ್‌ಐ ಪ್ರಸನ್ನ ಎಂ.ಎಸ್., ಪಿಎಸ್‌ಐ ಸುಂದರ, ಎಎಸ್‌ಐ ಪ್ರಕಾಶ, ಎಎಸ್‌ಐ ಸುಂದರ ಗೌಡ, ಹೆಡ್ ಕಾನ್ಸ್‌ಟೇಬಲ್‌ಗಳಾದ ರುದ್ರೇಶ್ ಹಾಗೂ ಚಂದ್ರಶೇಖರ್, ಪೊಲೀಸ್ ಕಾನ್ಸ್‌ಟೇಬಲ್‌ಗಳಾದ ಸಂತೋಷ್, ಮಾಂತೇಶ್ ಮತ್ತು ಜಿಲ್ಲಾ ಹಾಗೂ ಸಿಡಿಆರ್ ವಿಭಾಗದ ಸಿಬ್ಬಂದಿ ದಿನೇಶ್ ಅವರನ್ನೊಳಗೊಂಡ ತಂಡವು ಆರೋಪಿಯನ್ನು ಬಂಧಿಸಿದೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top