ಬಿಜೆಪಿಯಲ್ಲಿ ಮುಸ್ಲಿಂ ಮಹಿಳೆಗೆ ಒಲಿದ ವಿಜಯದ ಮಾಲೆ !

ತ್ರಿಶೂರು : ತ್ರಿಶೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಮುಸ್ಲಿಂ ಮಹಿಳೆ ಮುಂತಾಸ್ ಅಚ್ಚರಿಯ ಗೆಲುವು ಸಾಧಿಸಿದ್ದಾರೆ. ಹಿಂದೂ ಜನಸಂಖ್ಯೆ ಅತ್ಯಧಿಕ ಇರುವ ನಗರಪಾಲಿಕೆಯ 35ನೇ ವಾರ್ಡಿನಲ್ಲಿ ಸ್ಪರ್ಧಿಸಿದ ಅವರು 80ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು.
ಇದು ಕಾಂಗ್ರೆಸ್ ನ ಸಿಟ್ಟಿಂಗ್ ವಾರ್ಡಾಗಿತ್ತಲ್ಲದೇ ಕಾಂಗ್ರೆಸ್ ಬಹುಮತ ಉಳ್ಳ ಪ್ರದೇಶವಾಗಿದೆ. ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕಾಂಗ್ರೆಸ್ ವಾರ್ಡನ್ನು ಕಸಿಯುವ ರಾಜಕೀಯ ತಂತ್ರದ ಭಾಗವಾಗಿ ಬಿಜೆಪಿಯಿಂದ ಮುಂತಾಸ್ ಅವರನ್ನು ಕಣಕ್ಕಿಳಿಸಲಾಗಿತ್ತು. ಈ ರಾಜಕೀಯ ಪ್ರಯೋಗ ಯಶಸ್ವಿಯಾಗಿದ್ದು, ಮುಸ್ಲಿಂ ಸಮಾಜವನ್ನು ಪಕ್ಷದ ಜತೆ ಜೋಡಿಸುವ ಪ್ರಯತ್ನಕ್ಕೆ ಬೆಂಬಲ ಸಿಕ್ಕಂತಾಗಿದೆ.
ವಿಜೇತ ಅಭ್ಯರ್ಥಿ ಮುಂತಾಸ್ ಕಳೆದ ಎಂಟು ವರ್ಷಗಳಿಂದ ಬಿಜೆಪಿ ಕಾರ್ಯಕರ್ತೆಯಾಗಿದ್ದರು
Post Views: 427





































