ಬಿಜೆಪಿ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣ ಎನ್ಐಎ ತನಿಖೆ ನಡೆಸಲು ಬಿಜೆಪಿಗೆ ಇಚ್ಛಾಶಕ್ತಿ ಇಲ್ವ?
-ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್
ಬೆಂಗಳೂರು : ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ವಹಿಸಿರುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಕರ್ನಾಟಕದ ಕಾಂಗ್ರೆಸ್ ಹಿರಿಯ ಮುಖಂಡ ಬಿಕೆ ಹರಿಪ್ರಸಾದ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಎನ್ಐಎಯನ್ನು ದುರ್ಬಳಕೆ ಮಾಡಿಕೊಂಡು ರೌಡಿಗಳಿಗೆ ರಕ್ಷಣೆ ನೀಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಈ ಕ್ರಮವು ಕರ್ನಾಟಕವನ್ನು ಉತ್ತರ ಪ್ರದೇಶ ಮತ್ತು ಬಿಹಾರದಂತೆ ಮಾಡುವ ಭೀತಿ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಒಳಪಡಿಸಲು ಇಲ್ವ ಎಂದು ಪ್ರಶ್ನಿಸಿದರು.
ಎನ್ಐಎಯನ್ನು ದುರ್ಬಳಕೆ ಮಾಡಿಕೊಂಡು ರೌಡಿಗಳಿಗೆ ರಕ್ಷಣೆ ನೀಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಈ ಕ್ರಮವು ಕರ್ನಾಟಕವನ್ನು ಉತ್ತರ ಪ್ರದೇಶ ಮತ್ತು ಬಿಹಾರದಂತೆ ಮಾಡುವ ಭೀತಿ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಒಳಪಡಿಸಲು ಇಲ್ವ ಎಂದು ಪ್ರಶ್ನಿಸಿದರು.
ಸುಹಾಸ್ ಶೆಟ್ಟಿ, ಮಾಜಿ ಬಜರಂಗ ದಳ ಕಾರ್ಯಕರ್ತನಾಗಿದ್ದು, 2020ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೌಡಿಶೀಟರ್ ಎಂದು ಘೋಷಿತನಾಗಿದ್ದ. ಆದರೆ, ಈಗ ಬಿಜೆಪಿ ಅವನನ್ನು ‘ಹಿಂದೂ ಕಾರ್ಯಕರ್ತ’ ಎಂದು ವೈಭವೀಕರಿಸುತ್ತಿದೆ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ. “ಸುಹಾಸ್ ಶೆಟ್ಟಿಯ ಮೇಲೆ ಎರಡು ಕೊಲೆ ಪ್ರಕರಣಗಳಿವೆ-ಮೊಹಮ್ಮದ್ ಫಾಜಿಲ್ ಮತ್ತು ದಲಿತ ಯುವಕ ಕೀರ್ತಿಯ ಕೊಲೆ. ಇಂತಹ ರೌಡಿಗಳ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸುವುದು ಸರಿಯೇ? ಎನ್ಐಎ ಭಯೋತ್ಪಾದಕ ಕೃತ್ಯಗಳ ತನಿಖೆಗಾಗಿ ಇದೆ, ರಾಜಕೀಯ ಅಥವಾ ಪ್ರತೀಕಾರದ ಕೊಲೆಗಳಿಗಲ್ಲ” ಎಂದು ಅವರು ಪ್ರಶ್ನಿಸಿದ್ದಾರೆ.
ಕರ್ನಾಟಕ ಪೊಲೀಸರು ದೇಶದಲ್ಲೇ ದಕ್ಷತೆಗೆ ಹೆಸರುವಾಸಿಯಾಗಿದ್ದಾರೆ ಎಂದು ಹೇಳಿದರು. “ಮಹಾರಾಷ್ಟ್ರದ ನಂತರ ಕರ್ನಾಟಕ ಪೊಲೀಸರು ಅತ್ಯಂತ ಸಮರ್ಥರು. ಒಂದು ಕೊಲೆ ಪ್ರಕರಣವನ್ನು ತನಿಖೆ ಮಾಡಲು ಎನ್ಐಎ ಯಾಕೆ ಬೇಕು?” ಎಂದು ಆಕ್ಷೇಪಿಸಿದ ಅವರು, ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ಗೆ ಕೊಂಡೊಯ್ಯುವುದಾಗಿ ಹರಿಪ್ರಸಾದ್ ಘೋಷಿಸಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಕೋಮು ದ್ವೇಷವನ್ನು ವೈಭವೀಕರಿಸುವ ಒಂದು ದೊಡ್ಡ ಒಳಸಂಚು ನಡೆಯುತ್ತಿದೆ ಎಂದು ಆರೋಪಿಸಿದರು. ಸುಹಾಸ್ ಶೆಟ್ಟಿಯ ಕೊಲೆಯ ಜೊತೆಗೆ, ವಿನಾಯಕ ಬಾಳಿಗಾ ಹತ್ಯೆ ಪ್ರಕರಣವನ್ನು ಏಕೆ ಎನ್ಐಎಗೆ ವಹಿಸಲಿಲ್ಲ? ಬಾಳಿಗಾ ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತನಾಗಿದ್ದ. ಆತನ ಕೊಲೆಗೆ ಸೂತ್ರಧಾರನಾದ ನರೇಶ್ ಶೆಣೈ ಇನ್ನೂ ಸ್ವತಂತ್ರವಾಗಿ ತಿರುಗಾಡುತ್ತಿದ್ದಾನೆ” ಎಂದು ಹರಿಪ್ರಸಾದ್ ಅವರು ಆಕ್ಷೇಪಿಸಿದ್ದಾರೆ.
ಹರಿಪ್ರಸಾದ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಟೀಕಿಸಿದ್ದು, “ಫೇಕ್ ಎಂಟರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಎರಡು ವರ್ಷ ಗುಜರಾತ್ಗೆ ಹೋಗದಂತೆ ನಿಷೇಧ ಹೇರಿತ್ತು. ಆದರೆ ಈಗ ಅವರು ಎನ್ಐಎಯನ್ನು ದುರುಪಯೋಗ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು. ಒಟ್ಟಾರೆಯಾಗಿ, ಈ ತನಿಖೆಯಿಂದ ಕರ್ನಾಟಕದಲ್ಲಿ ಕೋಮು ಉದ್ವಿಗ್ನತೆ ಇನ್ನಷ್ಟು ಹೆಚ್ಚಾಗಬಹುದು ಎಂದು ಎಚ್ಚರಿಕೆ ನೀಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆ ಮಣಿಪುರದಂತೆ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹರಿಪ್ರಸಾದ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಟೀಕಿಸಿದ್ದು, “ಫೇಕ್ ಎನ್ ಕೌಂಟರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಎರಡು ವರ್ಷ ಗುಜರಾತ್ಗೆ ಹೋಗದಂತೆ ನಿಷೇಧ ಹೇರಿತ್ತು. ಆದರೆ ಈಗ ಅವರು ಎನ್ಐಎಯನ್ನು ದುರುಪಯೋಗ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು. ಒಟ್ಟಾರೆಯಾಗಿ, ಈ ತನಿಖೆಯಿಂದ ಕರ್ನಾಟಕದಲ್ಲಿ ಕೋಮು ಉದ್ವಿಗ್ನತೆ ಇನ್ನಷ್ಟು ಹೆಚ್ಚಾಗಬಹುದು ಎಂದು ಎಚ್ಚರಿಕೆ ನೀಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆ ಮಣಿಪುರದಂತೆ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ಐಎಗೆ ವಹಿಸಿರುವುದು ರಾಜಕೀಯ ಒತ್ತಡದಿಂದ ಕೂಡಿದ್ದು, ಇದು ಕರ್ನಾಟಕದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ಹರಿಪ್ರಸಾದ್ ಆತಂಕ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಈ ವಿಷಯವನ್ನು ಸುಪ್ರೀಂ ಕೋರ್ಟ್ಗೆ ಕೊಂಡೊಯ್ಯಲು ನಿರ್ಧರಿಸಿದೆ.






































