ಮೂಡುಬಿದಿರೆ :
ವೇಣೂರು ಭಗವಾನ್ ಬಾಹುಬಲಿ ಮೂರ್ತಿಯ ಮಹಾಮಸ್ತಕಾಭಿಷೇಕಕ್ಕೆ ಆಗಮಿಸುತ್ತಿದ್ದ ಭಕ್ತಾದಿಗಳು ಮತ್ತು ಪ್ರವಾಸಿಗರು ಎಲ್ಲರಿಗೂ ರುಚಿಯಾದ ಉಪಾಹಾರ ಹಾಗೂ ಊಟವನ್ನು ತಯಾರಿಸಿ ಕೊಟ್ಟಿರುವುದು ಶಿರ್ತಾಡಿಯ ರಾಜೇಂದ್ರ ಕುಮಾರ್ ಜೈನ್ ಮತ್ತು ಅವರ ತಂಡ.ಅವರು ಮೂಲತಃ ಅಳದಂಗಡಿಯವರಾಗಿರುತ್ತಾರೆ.
ರಾಜೇಂದ್ರ ಜೈನ್ ಅವರನ್ನು ಮಾತಾಡಿಸಿದಾಗ,
ಪ್ರತಿ ದಿನ ಆರವತ್ತೈದರಿಂದ ಎಪ್ಪತ್ತು ಮಂದಿ ಸಹಾಯಕರು ಕೆಲಸ ಮಾಡುತ್ತಿದ್ದಾರೆ.ದಿನದಲ್ಲಿ ಬೆಳಿಗ್ಗೆ ಮತ್ತು ಸಂಜೆಯ ಉಪಾಹಾರ ,ಮಧ್ಯಾಹ್ನದ ಊಟ ತಯಾರಿಸುವುದಷ್ಟೆ. ರಾತ್ರಿಯ ಉಪಾಹಾರವನ್ನು ಸುಮಾರು ಹತ್ತರಿಂದ ಹನ್ನೆರಡು ಸಾವಿರ ಮಂದಿಗೆ ಬೇಕಾಗುವಷ್ಟು ಮಾಡಲಾಗುತ್ತದೆ,ಕಡಿಮೆಯಾಯಿತೆಂದರೆ ಅದನ್ನು ರೆಡಿ ಮಾಡಲಾಗುವುದು.ಮಧ್ಯಾಹ್ನ ಊಟವೂ ಏಳೆಂಟು ಸಾವಿರ ಮಂದಿಗೆ ಬೇಕಾಗುವ ಹಾಗೆ ತಯಾರು ಮಾಡಲಾಗುತ್ತದೆ,ಎಂದರು.
ಕಳೆದ ಕೆಲವು ವರ್ಷಗಳಿಂದ ಜೈನ ಬಾಣಸಿಗರ ಪೈಕಿ ರಾಜೇಂದ್ರರಿಗೆ ಬಹಳ ಬೇಡಿಕೆ.ಅನೇಕ ಸಭೆ ಸಮಾರಂಭಗಳಲ್ಲಿ ರಾಜೇಂದ್ರರು ರಾಜೇಂದ್ರ ಅಡುಗೆ ಎನ್ನುವ ಮಾತು ಬೀಳುತ್ತಲೇ ಉಂಟು.
ಬಹಳ ಸಮಾಧಾನಿ,ಮೆದು ಮಾತಿನ ರಾಜೇಂದ್ರ ಕುಮಾರ್ ಅವರ ಅಡುಗೆ ಪಾಕ ಎಲ್ಲರಿಗೂ ರುಚಿಸುವಂತೆ ಅವರು ಕೂಡಾ ಎಲ್ಲರಿಗೂ ಹಿಡಿಸುತ್ತಿದ್ದಾರೆ.ಸಂತೋಷ.
–ವಿ. ಕೆ. ವಾಲ್ಪಾಡಿ
.










































