ನ್ಯಾಯಾಲಯದ ವಿಚಾರಣೆಯ ಹಂತದಲ್ಲಿ ಪರಶುರಾಮ ಥೀಮ್ ಪಾಕ್೯ ವಿವಾದ : ವಿಚಲಿತಗೊಂಡ ಶಾಸಕ ವಿಸುನೀಲ್ ಕುಮಾರ್ – ಮುನಿಯಾಲು ಉದಯಕುಮಾರ್ ಶೆಟ್ಟಿ ಆರೋಪ

Picture of RB NEWS

RB NEWS

Bureau Report

ಉಡುಪಿ : ಪರಶುರಾಮ ಥೀಮ್ ಪಾರ್ಕಿನಲ್ಲಿ ನಡೆದಿರುವ ಕಳ್ಳತನವು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದ್ದು ಇದೊಂದು ಪೂರ್ವಯೋಜಿತ ಕೃತ್ಯದಂತೆ ಕಾಣುತ್ತಿದೆ ಎಂದು ಕಾಂಗ್ರೆಸ್ ಮುಖಂಡ‌ ಮುನಿಯಾಲು ಉದಯಕುಮಾರ್ ಶೆಟ್ಟಿ ಆರೋಪಿಸಿದ್ದಾರೆ.
ಉಡುಪಿಯ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,
ಕಳ್ಳತನ ನಡೆದು ಅದಕ್ಕೆ ಸಂಬಂಧಪಟ್ಟವರು ಪೊಲೀಸ್ ಠಾಣೆಗೆ ದೂರು ದಾಖಲಿಸುವ ಮೊದಲೇ ಸುನಿಲ್ ಕುಮಾರ್ ತನ್ನ ಫೇಸ್ ಬುಕ್ ನ ಮುಖಾಂತರ ಕಳ್ಳತನದ ಮಾಹಿತಿಯನ್ನು ಹಂಚಿಕೊಳ್ಳಲು ಹೇಗೆ ಸಾಧ್ಯವಾಯಿತು..? ಕಳ್ಳತನದ ಪ್ರಥಮ ಮಾಹಿತಿ ಸುನಿಲ್ ಕುಮಾರ್ ಗೆ ಹೇಗೆ ದೊರಕಿತು…? ಎಂದು ಇದೇ‌ ಸಂದರ್ಭದಲ್ಲಿ ಪ್ರಶ್ನೆ ಮುಂದಿಟ್ಟಿದ್ದರು.‌

ಘಟನೆ ನಡೆದ ಮರುದಿನ ಸುನಿಲ್ ಕುಮಾರ್ ಮತ್ತು ತಂಡ ಪರಶುರಾಮ ಬೆಟ್ಟದ ಮೇಲೆ ಹೋಗಿ ಮಾಧ್ಯಮದ ಮುಂದೆ ಮಾತನಾಡಿದ ವಿಚಾರಗಳು ಇದು ಪೂರ್ವ ಯೋಜಿತ ಕೃತ್ಯ ಎನ್ನುವುದಕ್ಕೆ ಸಾಕ್ಷಿ ನುಡಿಯುತ್ತಿದೆ.

ಮೊದಲಿಗೆ ಕಳ್ಳತನ ನಡೆಸಿ ನಂತರ ಇವರದೇ ತಂಡ ಬೆಟ್ಟದ ಮೇಲೆ ಹೋಗಿ ಅದನ್ನು ಪರಿಶೀಲನೆ ನಡೆಸಿ ನಂತರ ಅಲ್ಲಿ ಸ್ವಚ್ಚತಾ ಕಾರ್ಯವನ್ನು ನಡೆಸಿ ಕಾರ್ಯಕ್ರಮ ಮಾಡುತ್ತೇವೆ ಎಂದಿರುವುದು ಏನನ್ನು ಸೂಚಿಸುತ್ತದೆ…?

ಉಮಿಕಲ್ ಬೆಟ್ಟದ ಮೇಲೆ ಮತ್ತೆ ಭವ್ಯವಾದ ಪರಶುರಾಮನ ಪ್ರತಿಮೆ ನಿರ್ಮಾಣ ಆಗಬೇಕೆಂದು ನಾನು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದೇನೆ, ನನ್ನ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು 5 ಲಕ್ಷ ರೂಪಾಯಿ ಮೊತ್ತವನ್ನು ಪಾವತಿಸುವಂತೆ ನಿರ್ದೇಶನ ನೀಡಿದ್ದು ಅದರಂತೆ ನಾನು ಮೊತ್ತವನ್ನು ಪಾವತಿಸಿ ಮುಂದಿನ ಆದೇಶಕ್ಕೆ ಕಾಯುತ್ತಿದ್ದೇನೆ.

ನನ್ನ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಿಂದ ಕಂಗೆಟ್ಟಿರುವ ಶಾಸಕರು ಸಾರ್ವಜನಿಕರ ಗಮನವನ್ನು ತನ್ನೆಡೆ ಇಂತಾ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಥೀಮ್ ಪಾರ್ಕ್ ಯೋಜನೆಯನ್ನು ಆರಂಭಿಸುವಾಗಲೇ ಸುನಿಲ್ ಕುಮಾರ್ ರವರು ಮೋಸ ವಂಚನೆಯನ್ನು ಮಾಡದೆ ಪ್ರಾಮಾಣಿಕವಾಗಿ ಪ್ರತಿಮೆ ನಿರ್ಮಿಸುತ್ತಿದ್ದಾರೆ ಇಂದು ಇಂತಹ ದುಸ್ಥಿತಿ ಬರುತ್ತಿರಲಿಲ್ಲ.

ಪರಶುರಾಮ ಥೀಮ್ ಪಾರ್ಕ್ ಆವರಣದಲ್ಲಿ ಸಿ ಸಿ ಕ್ಯಾಮೆರಾವನ್ನು ಅಳವಡಿಸಬೇಕೆಂದು ಹೋರಾಟಗಾರರು ಜಿಲ್ಲಾಡಳಿತಕ್ಕೆ ಮನವಿಯನ್ನು ಮಾಡಿರುತ್ತಾರೆ, ಆದರೆ ಇನ್ನೂ ಕೂಡ ಸಿ ಸಿ ಕ್ಯಾಮೆರವನ್ನು ಅಳವಡಿಸದೇ ಇರುವುದು ಜಿಲ್ಲಾಡಳಿತದ ಬೇಜವಾಬ್ದಾರಿಯಾಗುತ್ತದೆ, ಅಲ್ಲಿ ನಡೆಯುತ್ತಿರುವ ಎಲ್ಲಾ ಘಟನೆಗಳಿಗೂ ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತವೇ ಹೊಣೆ ಆಗುತ್ತದೆ.

ಪ್ರಕರಣವು ನ್ಯಾಯಾಲಯದಲ್ಲಿರುವುದರಿಂದ ಪರಶುರಾಮ ಥೀಮ್ ಪಾರ್ಕ್ ಸುತ್ತಮುತ್ತ ಸ್ವಚ್ಛತಾ ಕಾರ್ಯವನ್ನು ಜಿಲ್ಲಾಡಳಿತವೇ ನಡೆಸಿ ಅಲ್ಲಿನ ಸುರಕ್ಷತೆಯನ್ನು ಕಾಪಾಡಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಶುಭದರಾವ್, ಗೋಪಿನಾಥ ಭಟ್, ಮಹಿಳಾ ಘಟಕದ ಅಧ್ಯಕ್ಷೆ ಭಾನು ಭಾಸ್ಕರ್, ಪ್ರದೀಪ್ ಬೇಲಾಡಿ, ಯೋಗೀಶ್ ಇನ್ನಾ ಮೊದಲಾದವರು ಉಪಸ್ಥಿಯರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top