ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರಿಗೆ ಕನ್ನಡ ಭವನದಿಂದ ವಿಶೇಷ ಗೌರವಾರ್ಪಣೆ

Picture of RB NEWS

RB NEWS

Bureau Report

ಆರ್. ಬಿ. ನ್ಯೂಸ್


ಕಾಸರಗೋಡು : ಕಾಸರಗೋಡು–ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರಿಗೆ ಕನ್ನಡ ಭವನ ವತಿಯಿಂದ ವಿಶೇಷ ಗೌರವಾರ್ಪಣೆ ಸಲ್ಲಿಸಲಾಯಿತು.
ಸಮ್ಮೇಳನ ಪ್ರಯೋಜಕರಾಗಿರುವ ಡಾ. ವಾಮನ್ ರಾವ್ ಬೇಕಲ್ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ. ವೆಂಕಟ್ರಮಣ ಹೊಳ್ಳ ಅವರ ಮುತುವರ್ಜಿಯಲ್ಲಿ ಈ ಸನ್ಮಾನ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ಶಾಲು ಹೊದಿಸಿ ಗೌರವಿಸಿದರು. ಗದಗ ಗೋವಿನಾಳದ ಶ್ರೀ ಶ್ರೀ ರಮೇಶ ಮಹಾಸ್ವಾಮಿಗಳು ಸ್ಮರಣಿಕೆ ನೀಡಿ ಆಶೀರ್ವದಿಸಿದರು. ಡಾ. ವಾಮನ್ ರಾವ್ ಬೇಕಲ್ ಹಾರಾರ್ಪಣೆಗೈದರು. ಎಡನೀರು ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಗೌರವಪತ್ರ ನೀಡಿ ಶುಭ ಹಾರೈಸಿದರು.
ಸನ್ಮಾನ ಪತ್ರವನ್ನು ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ವಾಚಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಡಾ. ಸುರೇಶ್ ನೆಗಳಗುಳಿ, ಕ.ರ.ವೇ ಕರ್ನಾಟಕ ರಾಜ್ಯ ಸಂಚಾಲಕ ನಂ. ವಿಜಯಕುಮಾರ್, ಶ್ರೀ ಜಯಾನಂದ ಪೆರಾಜೆ, ಕ.ಸಾ.ಪ ವಿಶಾಲಾಕ್ಷ ಪುತ್ರಕಳ, ಕನ್ನಡ ಭವನ ಗದಗ ಜಿಲ್ಲಾಧ್ಯಕ್ಷ ಸಂ. ನ. ತಮ್ಮನಗೌಡ್ರ, ಕನ್ನಡ ಭವನ ಗೌರವಾಧ್ಯಕ್ಷ ಪ್ರದೀಪ್ ಬೇಕಲ್, ಡಾ. ಬಾಲಕೃಷ್ಣ ಎಸ್. ಮದ್ದೋಡಿ, ಎಂ.ಐ.ಟಿ ಮಣಿಪಾಲದ ಪ್ರತಿನಿಧಿ ರಾಜೇಶ್ ಕೋಟೆಕಣಿ, ಸಂದ್ಯಾರಾಣಿ ಟೀಚರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮವು ಸಾಹಿತ್ಯಾಭಿಮಾನಿಗಳ ಸಮ್ಮುಖದಲ್ಲಿ ಹರ್ಷೋಲ್ಲಾಸದ ವಾತಾವರಣದಲ್ಲಿ ನೆರವೇರಿತು.


ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top