ನಲ್ಲೂರು ಕಾಸಾಯಿಖಾನೆ ಪ್ರಕರಣಕ್ಕೆ ಹೊಸ ತಿರುವು : ದನ-ಕರುಗಳನ್ನು ಮಾರಾಟ ಮಾಡಿದ ಸಂಘ ಪರಿವಾರದ ಕಾರ್ಯಕರ್ತನ ಬಂಧನ

Picture of RB NEWS

RB NEWS

Bureau Report

ಪ್ರಕರಣಕ್ಕೆ ಹೊಸ ತಿರುವು

ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ ಎಂ.ಎಸ್

ಆರೋಪಿ ಶಿವಪ್ರಸಾದ್ ಪೊಲೀಸರ ವಿಚಾರದ ವೇಳೆಗೆ ಕೆಲ ಮಹತ್ವ ಅಂಶಗಳನ್ನು ಬಾಯಿ ಬಿಟ್ಟಿದ್ದಾನೆ.‌ಜಾನುವಾರು ಬ್ರೋಕರ್ ಆಗಿ ದುಡಿಯುತ್ತಿರುವ ಶಿವಪ್ರಸಾದ್ ದನಗಳನ್ನು ಮಾರಾಟ ಮಾಡುವ ನೆಪದಲ್ಲಿ ಸಾಕು ದನ ಹಾಗೂ ಕರುಗಳನ್ನು ಖರೀದಿಸಿ ಹೆಚ್ಚಿನ‌ಬೆಲೆಗೆ ಅವುಗಳನ್ನು ಕಾಸಾಯಿಖಾನೆಗೆ ಮಾರಾಟ‌ಮಾಡುತ್ತಿದ್ದನು.‌ ಅವುಗಳಲ್ಲಿ ನಲ್ಲೂರಿನ ಆಶ್ರಫ್ ಆಲಿಗೂ ಮಾರಾಟಮಾಡಿದ್ದನು.‌
ಶಿವಪ್ರಸಾದ ಓರ್ವ ಸಂಘ ಪರಿವಾರದ ಕಾರ್ಯಕರ್ತನಾಗಿದ್ದಾನೆ. ತಾನು ಯಾರಿಗೆಲ್ಲ ದನ ಹಾಗೂ ಕರುಗಳನ್ನು ಮಾರಾಟ ಮಾಡುತ್ತಿದ್ದನೋ ಆ ವಿಚಾರವನ್ನು ಸಂಘ ಪರಿವಾರದ ಇತರಿಗೆ ಗೊತ್ತು ಪಡಿಸಿ ಪೊಲೀಸರಿಗೆ ಮಾಹಿತಿ ರವಾನೆ ಮಾಡುತ್ತಿದ್ದರು ಎಂಬ ಅಂಶ ಬಯಲಾಗಿದೆ.
ಆರೋಪಿ ಶಿವಪ್ರಸಾದ್ ನನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ‌ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಘಟನೆಯ ಕುರಿತು….

ಕಾರ್ಕಳ: ನವಂಬರ್ 11ರಂದು ನಲ್ಲೂರಿನ ಅಶ್ರಪ್ ಆಲಿ ಎಂಬವನ ಮನೆಗೆ ಕಾರ್ಕಳ ಗ್ರಾಮಾಂತರ ಪೊಲೀಸರು ದಾಳಿ ನಡೆದಿದ್ದರು.

ಅಕ್ರಮ ಕಾಸಾಯಿಖಾನೆ ತಲೆಎತ್ತಿದ್ದು, ಅದರಲ್ಲಿ ಅಕ್ರಮವಾಗಿ ದನಗಳನ್ನು ಕೂಡಿ ಹಾಕಿ ಕಡಿದು ಮಾಂಸ ಮಾಡಲಾಗಿತ್ತು. ಸುಮಾರು 60 ಕೆ.ಜಿ ಮಾಂಸ ಹಾಗೂ ಹೋರಿಯನ್ನು ಕಟ್ಟಿ ಹಾಕಿದ್ದು ಅದಲ್ಲದೇ ಅಲ್ಲೇ ರಕ್ತದ ಕುರುಹು ಮತ್ತು ದನದ ತ್ಯಾಜ್ಯಗಳು ಪತ್ತೆಯಾಗಿದೆ.
ಈ ಕುರಿತು ಆರೋಪಿಗಳ‌ ವಿರುದ್ಧ‌ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸುದಾಖಲಾಗಿತ್ತು.

ಸಂಘಪರಿವಾರ ಆಗ್ರಹ


ಪೋಲಿಸ್ ಇಲಾಖೆ ಮತ್ತು ಸರಕಾರಕ್ಕೆ ನಾವು ಅಗ್ರಹವನ್ನು ಮಾಡುತ್ತಿದ್ದೇವೆ. ತಕ್ಷಣ ಅಶ್ರಪ್ ನನ್ನು ಬಂದಿಸಬೇಕು ಮತ್ತು ಅವನ ಮನೆಯನ್ನು, ಗೋವನ್ನು ಕಡಿದ ಜಾಗವನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ವಿಶ್ವಹಿಂದು ಪರಿಷದ್ ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ಮುಖಂಡರು ಆಗ್ರಹಿಸಿದ್ದರು.

ಆಗ್ರಹ ಹೆಚ್ಚಿದಂತೆ ಪೊಲೀಸರ ತನಿಖೆಯ ಮಟ್ಟ ಚುರುಕು ಆಗಿದ್ದು, ನೈಜ ಆರೋಪಿಯನ್ನು ಬಂಧಿಸಿ ಶಾಂತಿ ಸುವ್ಯವಸ್ಥೆ ಕಾಪಾಡಿರುವ ಕ್ರಮಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top