ದೃಢ ಸಂಕಲ್ಪದಿಂದ ಗುರಿ ತಲುಪಲು ಸಾಧ್ಯ

Picture of RB NEWS

RB NEWS

Bureau Report

ವರದಿ: ಅನುಷ್ ಪಂಡಿತ್

ಬಿಸೆಂಟ್ ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾಯೋಜನೆ ದಿನಾಚರಣೆ ಜರುಗಿತು.


ಕಾರ್ಯಕ್ರಮವನ್ನುಮಂಗಳೂರು ವಿಶ್ವ ವಿದ್ಯಾನಿಲಯದ ನಿಕಟ ಪೂರ್ವ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ, ಹಂಪನಕಟ್ಟಾ ವಿ.ವಿ ಕಾಲೇಜಿನ ಪ್ರಾಣಿ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ ನಾಗರತ್ನ ಕೆ. ಎ ಉದ್ಘಾಟಿಸಿದರು.


ಅವರು ಮಾತನಾಡಿ ದೃಢ ಸಂಕಲ್ಪದಿಂದ ಮಾತ್ರ ಸಾಧನೆ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.


ರೀಲ್ಸ್ ಗಳನ್ನು ಒಳ್ಳೆಯ ವಿಚಾರಗಳಿಗೆ ಬಳಸಿಕೊಳ್ಳಿ,ಬ್ಲಾಡ್ ಡೊನೇಷನ್ , ಆಕ್ಸಿಡೆಂಟ್ ಅವಾರ್ನೆಸ್ ಇತ್ಯಾದಿ ವಿಷಯಗಳ ಸಂದೇಶ ನೀಡುವ ಸ್ಪರ್ಧೆಗಳಿಗೆ ರೀಲ್ಸ್ ಗಳನ್ನು ಉಪಯೋಗಿಸಿಕೊಳ್ಳಿ ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಅತಿಥಿಗಳಾಗಿ ಕೆನರಾ ಕಾಲೇಜಿನ ಉಪನ್ಯಾಸಕಿ, ನಿಕಟ ಪೂರ್ವ ಯೋಜನಾಧಿಕಾರಿ ಸೀಮಾ ಪ್ರಭು, ಡಬ್ಯುಎನ್. ಎಸ್ ಉಪಾಧ್ಯಕ್ಷೆ, ಬಿ ಡಬ್ಯು ಸಿ ಕರೆಸ್ಪೋಡೆಂಟ್ ಡಾ. ಮಂಜುಳಾ ಕೆ. ಟಿ ಪಾಲ್ಗೊಂಡರು.


ಕಾರ್ಯಕ್ರಮ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್ ಕುಮಾರ್ ಕೆ.ಸಿ ವಹಿಸಿದ್ದರು.ರಾಷ್ಟ್ರೀಯ ಸೇವಾಯೋಜನೆಯ ಯೋಜನಾಧಿಕಾರಿ ರವಿಪ್ರಭಾ, ರಾ. ಸೇ. ಯೋ ನಾಯಕಿರಾದ ಸಾಕ್ಷಿ ಡಿ. ಅಮೀನ್, ಮೇಘಶ್ರೀ, ಉಪನ್ಯಾಸಕಿ ಸ್ವಾತಿ, ಮತ್ತಿತರರು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ನಿಕಟ ಪೂರ್ವ ರಾಷ್ಟ್ರೀಯ ಸೇವಾಯೋಜನೆ ಸಂಯೋಜನಾಧಿಕಾರಿ, ಕೆನರಾ ಕಾಲೇಜಿನ ನಿಕಟ ಪೂರ್ವ ಯೋಜನಾಧಿಕಾರಿ ಸೀಮಾ ಪ್ರಭು ಅವರನ್ನು ಸನ್ಮಾನಿಸಲಾಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top