“ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಹಾಗೆನೆ,ಉಡುಪಿ ಜಿಲ್ಲೆಯಲ್ಲಿ ನಿಗದಿತ ಸಮಯದ ಚೌಕಟ್ಟಿನಲ್ಲೇ ಕೋಳಿ ಅಂಕ ನಡೆಯುತ್ತದೆ. ಸಂಜೆ ಆರು ಘಂಟೆಗೇ ಮುಗಿಸಬೇಕೆನ್ನುವ ಅಷ್ಟಾದರೂ ಷರತ್ತಿನಲ್ಲಿ ಜಾತ್ರೆ ,ಕೋಲ, ಆಯನದ ಪದ್ಧತಿಯನ್ನು ಆಚರಿಸುವುದಕ್ಕಾಗುತ್ತಿದೆ. ಆದರೆ,ದ. ಕ. ಜಿಲ್ಲೆಯಲ್ಲಿ ಕೋಳಿ ಅಂಕ ಎಂಬ ಪದವನ್ನೂ ಉಚ್ಚರಿಸುವುದು ಅಪರಾಧವಾಗಿದೆ. ಉಡಪಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಯಾಕೆ ಅಷ್ಟೊಂದು #ಜನಸ್ನೇಹಿ ಯಾಗಿದೆ? “
“ದ. ಕ. ಜಿಲ್ಲೆ ಬಹಳ ಸೆನ್ಸಿಟಿವ್ ಆಗಿದೆ.ಕ್ರೈಮ್ ತುಂಬಿದೆ. “ ಎನ್ನುವ ಉತ್ತರವಕೆಲವು ರಾಜಕಾರಣಿಗಳಿಂದ ಸಿಗುತ್ತದೆ. ದ. ಕ. ಜಿಲ್ಲೆಯಲ್ಲಿ ಔಷಧಿಗೆಂತಾದರೂ ಎರಡು ಸೀಟು ಕಾಂಗ್ರೆಸ್ ಗೆದ್ದುಕೊಂಡಿದೆ. ಉಡುಪಿ ಜಿಲ್ಲೆಯಲ್ಲಿ ಎಲ್ಲವೂ ಬಿಜೆಪಿ! ಒಂದು ಜಿಲ್ಲೆಯನ್ನು ಸೂಕ್ಷ್ಮ,ಅತಿ ಸೂಕ್ಷ್ಮ ಅಂತ ಗೊತ್ತುಮಾಡಬೇಕಾದಲ್ಲಿ ಅದರದ್ದೇ ಆದ ಮಾನದಂಡಗಳು ಬೇಕಲ್ಲವೇ? ಅಂಥದ್ದನ್ನು ರಾಜ್ಯ ಉಚ್ಚ ನ್ಯಾಯಾಲಯ ಅಥವಾ ರಾಜ್ಯ ಸರಕಾರ ಘೋಷಣೆ ಮಾಡಿದೆಯೇ? ಅದು ಸಾಧ್ಯವಿಲ್ಲ.ಒಂದು ಮತಗಟ್ಟೆ ವಲಯವನ್ನು ಹಾಗೆ ಪರಿಗಣಿಸಬಹುದು ಆದರೆ,ಇಡೀ ಜಿಲ್ಲೆಯನ್ನೇ ಹಾಗೆ ಹೇಳಿಕೊಂಡರೆ ಅಷ್ಟರಮಟ್ಟಿಗೆ ಅಲ್ಲಿಯ ಜನಜೀವನ ಮಟ್ಟ,ಕಾನೂನು ನಿರ್ವಹಣೆ ಎಲ್ಲವೂ ಕೆಟ್ಟು ಸುಟ್ಟುಹೋಗಿದೆ ಎಂದರ್ಥ. ಆ ಕೋಳಿ ಅಂಕವನ್ನು ನಾನೇನು ಬೆಂಬಲಿಸುವುದಿಲ್ಲ,ಅಲ್ಲಿ ಚಿತ್ರಹಿಂಸೆ ಇದೆ ಎನ್ನುವ ಕಾರಣವಿದೆ. ಆದರೂ ಸಹ , ಕಾಡಿನಲ್ಲಿ ಹುಲಿಯ ಕಾಟವಿದೆಯಂತ ದನಗಳನ್ನು ಮೇಯಲು ಬಿಡದಿರುವುದಕ್ಕೆ ಸಾಧ್ಯವೇ? ಬಿಡುತ್ತಾರಲ್ಲವೇ?
ಕೆಲವನ್ನು ಶಾಶ್ವತವಾಗಿ ನಿಷೇಧಿಸುವುದಕ್ಕೆ ಸಾಧ್ಯವಿಲ್ಲ/ಆಗುವಂಥದ್ದೂ ಅಲ್ಲ. ಅದೆಲ್ಲ ಜನರ ಜೀವನ ಪದ್ಧತಿಯಲ್ಲಿಯೆ ಅಳವಡಿಸಿಕೊಂಡು ಬಂದಿರುವಂಥದ್ದು. ಅಳುವ ಮಗುವನ್ನು ಸಮಾಧಾನಿಸುವುದಕ್ಕೆ ಪಿಸ್ತೂಲಿನ ನಳಿಗೆಯನ್ನು ತೋರಿಸಿದರೂ ಸಾಕಾಗುತ್ತದೆ. ಯಾಕೆ ಅಳುತ್ತಿ,ಅಳಬೇಡ, ಏನು ಬೇಕು,ಏನಾಗಿದೆ ನಿನಗೆ ಎಂದಿತ್ಯಾದಿ ಮೃದು ಮಾತುಗಳೊಡನೆ ಆ ಮಗುವನ್ನು ತೃಪ್ತಿಪಡಿಸುವುದಕ್ಕೆ ಸಾಧ್ಯವುಂಟು. ಮಗುವನ್ನು ಸಮಾಧಾನಿಸುವ,ಆಡಿಸುವುದರ ಪಾಠವೇ ಅದು. ಪಿಸ್ತೂಲಿನಿಂದ ಗುಂಡು ಹೊರಬಂದರೆ ತಾನು ನೋವನ್ನು ಪಡೆಯುತ್ತೇನೆ, ಸಾಯಬಲ್ಲೆ ಇತ್ಯಾದಿ ಭಯದ ಕಾರಣಕ್ಕಾಗಿ ಆ ಮಗು ತಾನು ಅಳುವುದನ್ನು ನಿಲ್ಲಿಸುತ್ತದೆ.
ನಮ್ಮ ರಾಜ್ಯದ ಕಾಂಗ್ರೆಸ್ ಸರಕಾರವು ಇಬ್ಬರು ಐಪಿಎಸ್ ಅಧಿಕಾರಿಗಳನ್ನು ಪಿಸ್ತೂಲಿನ ನಳಿಗೆಯ ರೀತಿ ಬಳಸಿಕೊಂಡಿರುತ್ತದೆ. ದ. ಕ. ಜಿಲ್ಲೆಯಲ್ಲಿ ಕೋಮುವಾದ ಗಲಭೆ ಇದೆ ಅನ್ನುವ ನೆಪ ಮುಂದಿಟ್ಟು ಜನರಿಗೆ ಅಹಿತಕರವಾದ ,ಬಲಾತ್ಕಾರದ ಕಾನೂನು ಹೇರಿಸುವಂತೆ ಮಾಡುತ್ತಿದೆ. ಕೋಳಿ ಅಂಕದ ಕಾರಣದಿಂದ ಜಿಲ್ಲೆಯಲ್ಲಿ ಅಹಿತಕರ ವಾತಾವರಣ ಬಲಗೊಳ್ಳುವುದು ಅನ್ನುವ ನಂಬಿಕೆ ಸರಕಾರದ್ದಾಗಿದ್ದರೆ ಜಿಲ್ಲೆಯಲ್ಲಿ ಕತ್ತಿ,ಚೂರಿ,ಹಾರೆ,ಪಿಕ್ಕಾಸು ಮುಂತಾದ ನಿತ್ಯ ಬಳಕೆಯ ಆಯುಧಗಳನ್ನೇ ಬಹಿಷ್ಕರಿಸಿ ಠಾಣೆಯಲ್ಲಿ ಅಡವಿಡಬೇಕಾಗುತ್ತತ್ತು. ಜಿಲ್ಲೆಯಲ್ಲಿನ ಅಹಿತಕರ ಚಟುವಟಿಕೆ ನಿಯಂತ್ರಿಸುವುದು,ಅಶಾಂತಿಯನ್ನು ಹುಟ್ಟದಂತೆ ಮಾಡುವುದು, ಲಾ ಆ್ಯಂಡ್ ಆರ್ಡರ್ ಅನುಷ್ಠಾನಕ್ಕೆ ತರುವುದು ಎಲ್ಲವೂ ಐ ಪಿ ಎಸ್ ಅಧಿಕಾರಿಗಳಿಗೆ ತಿಳಿದೇ ಇರುತ್ತದೆ. ಅವರದೇ ಅನುಭವದ ಮರ್ಜಿಯಲ್ಲಿ ಅವರು ಕೆಲಸ ಮಾಡಿಕೊಂಡಿರುತ್ತಾರೆ. ಸುಧೀರ್ ಕುಮಾರ್ ರೆಡ್ಡಿ ಮತ್ತು ಡಾ।ಅರುಣ್ ಕುಮಾರ್ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ಜನಸ್ನೇಹಿ ಎಂದು ಸಮಾಜದಲ್ಲಿ ಗುರುತಿಸಿಕೊಳ್ಳುವುದಕ್ಕೆ ಸರಕಾರ ಬಿಟ್ಟುಕೊಡುವುದಿಲ್ಲ. ಬಿಜೆಪಿಯನ್ನು ಮಡಚಿ ಹೆಡೆಮುರಿ ಕಟ್ಟಬೇಕೆನ್ನುವ ಒಂದು ಭ್ರಮೆಯಲ್ಲಿ ಸರಕಾರ ಯೆರ್ರಾಬಿರ್ರಿಯಾಗಿ ಯೋಚಿಸುತ್ತದೆ. ಮಂದಿನ ಅವಧಿಯಲ್ಲಿ ಆ ಇಬ್ಬರು ಐಪಿಎಸ್ ಅಧಿಕಾರಿಗಳು ಮುಂಭಡ್ತೆ ಪಡೆದು ವರ್ಗಾವಣೆಯಾಗುತ್ತಾರೆ ,ಅದನ್ನೇ ಅವರು ಬಯಸುತ್ತಾರೆ. ಈ ಕೋಳಿ ಅಂಕ ನಿಷೇಧವು ಸಾರ್ವಕಾಲಿಕವಾಗಿ ಮುಂದುವರಿಯಬಹುದೇ? ಪ್ರಶ್ನೆ. ನಾಳೆ ಡಿ. ಕೆ. ಶಿವ ಕುಮಾರ್ ಅವರು ಮುಖ್ಯಮಂತ್ರಿ( ಒಮ್ಮೆ ಆಗಬೇಕು)ಯಾದ ತರುವಾಯ ,ಜನರ ಭಾವನೆಗಳಿಗೆ ಧಕ್ಕೆ ತರುವುದಕ್ಕೆ ನನ್ನ ಸರಕಾರ ಹಾಗೂ ವೈಯಕ್ತಿಕವಾಗಿ ನಾನು ಕೂಡಾ ಇಚ್ತಿಸುವುದಿಲ್ಲ ಎಂದೇನಾದರೂ ,ಕೋಳಿ ಅಂಕಕ್ಕೂ ಕಾನೂನು ನಿಯಮಗಳ ಚೌಕಟ್ಚು ರಚಿಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರೆ ? ಜನ ನಿಂದಿಸುವುದು,ಬೈಯುವುದು ಆ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ. ರಾಜಕಾಣಿ ಹೇಗೂ ತನ್ನ ವರಸೆ ಬದಲಾಯಿಸಲೇಬೇಕು. ಯಾವುದೇ ಸರಕಾರವು ಕೂಡಾ ತಮ್ಮಲ್ಲಿನ ರಾಜಕೀಯ ಬೆಂಗನ್ನು (ಸೇಡು)ತೀರಿಸಿಕೊಳ್ಳಲು ಅಧಿಕಾರಿಗಳಿಗೆ ಭಯದ ರೂಪ ಕೊಡುವುದು ಖಂಡಿತ ತಪ್ಪು. ಆ ಇಬ್ಬರು ದಕ್ಷ ಹಾಗೂ ಶಿಸ್ತುಬದ್ಧ ಪೊಲೀಸ್ ಅಧಿಕಾರಿಗಳನ್ನು ಸಮಾಜದ ಬಹುತೇಕ ಜನರು ಅಸಮಾಧಾನದಿಂದಲೇ ಪ್ರೀತಿಸುವಂತೆ ಸರಕಾರ ಮಾಡಿದ್ದು ವಿಷಾದನೀಯ. ಜನಪ್ರತಿನಿಧಿ ಹಾಗೂ ಸ್ಪೀಕರ್ ಆಗಿರುವ ಯು. ಟಿ. ಖಾದರ್ ಅವರಿಗೆ ದ. ಕ. ಜಿಲ್ಲೆಯ ಜನಜೀವನ ಕ್ರಮ,ಜನಪದ ಆಚರಣೆ ಹಾಗೂ ಒಲವು, ಮಣ್ಣಿನ ವಾಸನೆ ಯಾವುದರದ್ದಾರೂ ಅರಿವಿದ್ದಿದ್ದರೆ, ಸ್ಪಂದನ, ಪ್ರೀತಿ ಕಾಳಜಿಯಿದ್ದಿದ್ದರೆ ಬಹುಶಃ ದ. ಕ. ಜಿಲ್ಲೆಯಲ್ಲಿ ಕೋಳಿ ಅಂಕ ಅದೊಂದು ನ್ಯಾಯ ಅನ್ಯಾಯದ ವಿಷಯವಾಗುತ್ತಿರಲಿಲ್ಲ. ಉಡುಪಿ ಜಿಲ್ಲೆಯನ್ನು ಹೋಲಿಸಿ ಬರೆಯುವುದಕ್ಕೂ ಅವಕಾಶವಿರುತ್ತಿದ್ದಿಲ್ಲ. ಇದೊಂದು ಅಭಿಪ್ರಾಯ ಮಾತ್ರ.