ಚಾರಣಕ್ಕೆ ಹೋದ ಯುವಕ ಯಮಪಾದ ಸೇರಿದ

Picture of RB NEWS

RB NEWS

Bureau Report

ಮೂಡುಬಿದಿರೆ: ಸ್ನೇಹಿತನೊಂದಿಗೆ‌ ಚಾರಣಕ್ಕೆ‌ ಹೋದ ಯುವಕನೊಬ್ಬ ಹೃದಯಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಐತಿಹಾಸಿಕ ಹಿನ್ನಲ್ಲೆಯುಳ್ಳ ಕೋಣಾಜೆ ಕಲ್ಲು ಎಂಬಲ್ಲಿ ಸಂಭವಿಸಿದೆ.‌

ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪ್ಪಾಡಿ ನಿವಾಸಿಯಾಗಿದ್ದು, ಮಂಗಳೂರಿನಲ್ಲಿ ರಾವ್ ಅಂಡ್ ರಾವ್ ಚಾರ್ಟೆಡ್ ಅಕೌಟೆಂಟ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ, ಮನೋಜ್ ಎನ್ (25 ವರ್ಷ) ಮೃತ ದುರ್ದೈವಿ.

ತನ್ನ ಸ್ನೇಹಿತ ಕಾಸರಗೋಡಿನ ಕಾರ್ತಿಕ್ ಎಂಬುವರೊಂದಿಗೆ ಸೆ.17ರ ಬೆಳಿಗ್ಗೆ 6-20 ಗಂಟೆಗೆ ಮೂಡಬಿದಿರೆಯ ಪಡುಕೊಣಾಜೆ ಗ್ರಾಮದ ಕೊಣಾಜೆ ಕಲ್ಲು ಎಂಬಲ್ಲಿಗೆ ಚಾರಣಕ್ಕೆ ಹೋಗಿದ್ದನು.

ಅವರಿಬ್ಬರು ಬೆಳಿಗ್ಗೆ ಸುಮಾರು 8-30 ಗಂಟೆಗೆ ಕೊಣಾಜೆ ಕಲ್ಲಿನ ತುದಿಗೆ ತಲುಪಿದ್ದಂತೆ ಮನೋಜ್ ರವರು ವಾಂತಿ ಮಾಡಿಕೊಂಡು ಸುಸ್ತಾಗಿ ಅಸ್ವಸ್ಥಗೊಂಡು ಮಾತನಾಡದ ಸ್ಥಿತಿಯಲ್ಲಿದ್ದನು. ಅದನ್ನು ಕಂಡು ಕಾರ್ತಿಕ್ ಕೂಡಲೇ 108 ಅಂಬುಲೆನ್ಸ್ ಗೆ ಕರೆಮಾಡಿ ಮನೋಜ್ ನನ್ನು ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರ ಸಹಾಯದೊಂದಿಗೆ 108 ಅಂಬುಲೆನ್ಸ್ ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಮೂಡಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದನು.

ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯಾಧಿಕಾರಿಯವರು ಮನೋಜ್ ರವರು ಮೃತಪಟ್ಟಿರುವುದಾಗಿ ಘೋಷಿಸಿರುತ್ತಾರೆ.

ಈ ಬಗ್ಗೆ ಮೃತ ಮನೋಜ್ ಎನ್ ರವರ ತಂದೆ ತನ್ನ ಮಗ ಮನೋಜ್ ರವರು ಹೃದಯಾಘಾತದಿಂದ ಮೃತಪಟ್ಟಿರಬಹುದಾಗಿದ್ದು ಎಂಬುದಾಗಿ ನೀಡಿದ ದೂರಿನಂತೆ ಮೂಡಬಿದ್ರೆ ಪೊಲೀಸ್ ಠಾಣಾ ಯು.ಡಿ.ಆರ್ 44/2025 ಕಲಂ 194 ಬಿ.ಎನ್.ಎಸ್.ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.

.


.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top