ಕಾರ್ಕಳ ರಾಮಕ್ಷತ್ರಿಯ ಸಾಮೂಹಿಕ ಬ್ರಹ್ಮೋಪದೇಶ





ಕಾರ್ಕಳ: ಇಲ್ಲಿನ ರಾಮಕ್ಷತ್ರಿಯ ಸಂಘ(ರಿ)ದ ಆಶ್ರಯದಲ್ಲಿ ಮತ್ತು ಶ್ರೀರಾಮ ಚಾರಿಟೇಬಲ್ ಟ್ರಸ್ಟ್ ನ ಸಹಕಾರದೊಂದಿಗೆ ಶ್ರೀರಾಮ ಸಭಾಭವನ ಬಂಡಿಮಠ, ಕಾರ್ಕಳದಲ್ಲಿ ರಾಮಕ್ಷತ್ರಿಯ ವಟುಗಳ ಸಾಮೂಹಿಕ ಬ್ರಹ್ಮೋಪದೇಶವು ಮಂಗಳೂರಿನ ಪ್ರಸಿದ್ಧ ಬಾಲಂಭಟ್ ಮನೆತನದ ರಾಮಕ್ಷತ್ರಿಯ ಕುಲಪುರೋಹಿತ ರಾದ ವಿದ್ವಾನ್ ಡಾ. ಸತ್ಯಕೃಷ್ಣ ಭಟ್ ರವರ ನೇತೃತ್ವದ ಪುರೋಹಿತರ ತಂಡದಿಂದ ಧಾರ್ಮಿಕ ವಿಧಿವಿಧಾನಗಳಿಂದ ಶಾಸ್ತ್ರೋಕ್ತವಾಗಿ ಜರುಗಿತು.

ರಾಮಕ್ಷತ್ರಿಯ ಸಮಾಜದ ಪ್ರತಿಭಾವಂತೆಬಾಲಕಿ ಅಂಶಿಕ ಕಾರ್ಕಳ ಅವರ ಸಾಕ್ಸೋಪೋನ್ ವಾದನ, ವೇದಘೋಷ ಪಂಡಿತರ ವೇದಘೋಷಗಳಿಂದ ವಟುಗಳಿಗೆ ಆಶೀರ್ವಾದ ಎಲ್ಲರ ಗಮನ ಸೆಳೆಯಿತು.






ನಂತರ ನಡೆದ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಗುರುಪ್ರಸಾದ್ ರಾವ್ ಅಜೆಕಾರ್ ಮಾತನಾಡಿ, ಸಂಘದ ಮುಂದಿನ ಕಾರ್ಯಕ್ರಮದಲ್ಲೂ ಸಮಾಜಬಾಂಧವರ ಸಹಕಾರ ಸದಾ ಇರಲೆಂದು ಆಶಿಸಿ, ಕೃತಜ್ಞತಾ ನುಡಿಗಳನ್ನಾಡಿದರು.
ಧಾರ್ಮಿಕ ಉಪನ್ಯಾಸವನ್ನು ವಿದ್ವಾನ್ ಡಾ.ಸತ್ಯಕೃಷ್ಣ ಭಟ್ ರವರು ನೀಡಿ, ರಾಮಕ್ಷತ್ರಿಯ ಸಂಘ, ಕಾರ್ಕಳ ಹಮ್ಮಿಕೊಂಡ ಈ ಕಾರ್ಯಕ್ರಮ ಸಾರ್ಥಕತೆಯನ್ನು ಪಡೆದುಕೊಂಡಿದೆ. ಬಾಲಂಭಟ್ ಮನೆತನ ಹಾಗೂ ರಾಮಕ್ರತ್ರಿಯ ಕುಲಬಾಂಧವರಿಗೆ ಸುಮಾರು 100 ವರ್ಷಗಳ ಆವಿನಾಭವ ಸಂಬಂಧವಿದೆ. ಶಂಕರಾಚಾರ್ಯರು ಅಂದು ಹೇಳಿದ ಸತ್ಯವಾದ ಮಾತನ್ನು ನೆನಪಿಸಿಕೊಳ್ಳುತ್ತಾ ಬ್ರಾಹ್ಮಣ ಮತ್ತು ಕ್ಷತ್ರಿಯರು ಇಬ್ಬರೂ ಸರಿಯಾಗಿ ನಡೆದುಕೊಂಡರೆ ಇಡೀ ಜಗತ್ತು ಸರಿಯಾಗಿ ನಡೆದುಕೊಂಡು ಹೋಗಲು ಸಾಧ್ಯ ಅದಕ್ಕಾಗಿ ನಾವು, ನಮ್ಮನ್ನು ತೊಡಗಿಸಿಕೊಳ್ಳಬೇಕು ಹಾಗೂ ಕ್ಷತ್ರಿಯರು ರಾಜಕೀಯದಲ್ಲೂ ತೊಡಗಿಸಿಕೊಳ್ಳಬೇಕೆಂದು ಹೇಳಿದರು. ಎಲ್ಲರೂ ವೈಯಕ್ತಿಕ ಸ್ವಾರ್ಥ ಬಿಟ್ಟು ಸಂಘ ಸಂಸ್ಥೆಯ ಜೊತೆಗೂಡಿ ನಡೆದರೆ ಗೌರವ ಹಾಗೂ ಪ್ರಭುತ್ವ ಸಾಧಿಸಲು ಸಾಧ್ಯ ಎಂದರು.
ಬ್ರಹ್ಮೋಪದೇಶ ಪಡೆದ ಇವರೆಲ್ಲರೂ ಸಮಾಜಕ್ಕೆ ಕೊಡುಗೆಯಾಗಲಿ ಎಂದು ಶುಭಾಶೀರ್ವಾದವನ್ನು ನೀಡಿದರು.
ಸಂಘದ ವತಿಯಿಂದ ವಿದ್ವಾನ್ ಡಾ. ಸತ್ಯಕೃಷ್ಣ ಭಟ್ ರವರನ್ನು ಶಾಲು ಹೊದಿಸಿ, ಸ್ಮರಣಿಕೆ, ಹಣ್ಣುಹಂಪಲುಗಳನ್ನು ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಶ್ರೀರಾಮ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಪಾರ್ಥಸಾರಥಿ, ರಾಮಕ್ಷತ್ರಿಯ ಸಂಘದ ಉಪಾಧ್ಯಕ್ಷ ಅಂಬಾಪ್ರಸಾದ್, ಕಾರ್ಯದರ್ಶಿ ಪ್ರವೀಣ್.ಕೆ ಉಪಸ್ಥಿತರಿದ್ದರು.
19 ವಟುಗಳಿಗೆ ಬ್ರಹ್ಮೋಪದೇಶ ಮಾಡಲಾಯಿತು. ಅಪಾರ ಸಂಖ್ಯೆಯಲ್ಲಿ ಸಮಾಜಬಾಂಧವರು ಭಾಗವಹಿಸಿದ್ದರು.
ಬಿ.ಮನಮೋಹನ ರಾವ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.





















