ಕಾರ್ಕಳ : ನಗರ ಹೊರವಲಯ ಕರಿಯಕಲ್ಲು ಸೂರಾಲ್ ಎಂಬಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಕಾರೊಂದ ಮೇಲೆ ಚಿರತೆ ಎರಗಿ ಬಂದು ಪರಿಣಾಮವಾಗಿ ಕಾರು ಜಖಂ ಗೊಂಡಿದೆ.
ಸೂರಾಲ್ ನಿವಾಸಿ ಸೂರ್ಯಕಾಂತ ಸುವರ್ಣ ( 38) ಎಂಬವರು ಗುರುವಾರ ರಾತ್ರಿ ಸುಮಾರು 8.00 ಗಂಟೆಯ ವೇಳೆಗೆ ಕಾರಿನಲ್ಲಿ ಮನೆ ಕಡೆಗೆ ಹೋಗುತ್ತಿದ್ದರು.
ಅದೇ ಸಂದರ್ಭದಲ್ಲಿ ಸೂರಾಲ್ ತಿರುವಿನಲ್ಲಿ ಎದುರಿನಿಂದ ಮುನ್ನುಗಿ ಬಂದ ಚಿರತೆಯೊಂದು ಕಾರಿನ ಮೇಲೆ ಎರಗಿ ಬಿದ್ದು ಅಲ್ಲಿಂದ ಓಡಿ ಹೋಗಿದೆ.
ಚಿರತೆಯ ದಾಳಿಗೆ ಕಾರಿನ ಬಂಪರ್ ಜಖಂಗೊಂಡಿದೆಯಾದರೂ ಕಾರಿನ ಪ್ರಯಾಣಿಕ ಸೂರ್ಯಕಾಂತ ಸುವರ್ಣ ಅವರಿಗೆ ಯಾವುದೇ ರೀತಿಯಲ್ಲಿ ಗಾಯಗಳಾಗಿಲ್ಲ.
ಘಟನೆಯ ಕುರಿತು ಮಾಹಿತಿಯನ್ನು ಸೂರ್ಯಕಾಂತ ಸುವರ್ಣ ಅವರು ಆರ್.ಬಿ.ನ್ಯೂಸ್ ನೊಂದಿಗೆ ಹಂಚಿಕೊಂಡಿದ್ದಾರೆ.









































