ಕಾಮ್ರೇಡ್ ಸೀತಾರಾಮ ಯೆಚೂರಿ ನಿಧನ : ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಶ್ರದ್ದಾಂಜಲಿ
ಮಂಗಳೂರು: ಸಿಪಿಐಎಂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಸೀತಾರಾಮ ಯೆಚೂರಿ ಅಗಲಿಕೆ ದುಡಿಯುವ ಜನರ ರಾಜಕೀಯ ಚಳವಳಿಗೆ ಆಘಾತ ಉಂಟು ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಹಲವು ಸಮಾವೇಶ, ರ್ಯಾಲಿಗಳಲ್ಲಿ ಕಾಮ್ರೇಡ್ ಯೆಚೂರಿ ಭಾಗವಹಿಸಿದ್ದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ಮತೀಯ ಸಂಘರ್ಷ, ಕೋಮುರಾಜಕಾರಣದ ಕುರಿತು ಕಾಮ್ರೇಡ್ ಯೆಚೂರಿ ಕಳವಳ ಹೊಂದಿದ್ದರು. ಕೋಮುವಾದದ ವಿರುದ್ದ ನಡೆಸಬೇಕಾದ ಹೋರಾಟಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು. ದ.ಕ. ಜಿಲ್ಲೆಯ ಕಮ್ಯೂನಿಸ್ಟ್ ಚಳವಳಿ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ ಸೀತಾರಾಮ ಯೆಚೂರಿ ಅಗಲಿಕೆ ದಕ್ಷಿಣ ಕನ್ನಡ ಜಿಲ್ಲೆಯ ದುಡಿಯುವ ವರ್ಗದ ರಾಜಕಾರಣಕ್ಕೆ ದೊಡ್ಡ ನಷ್ಟ ಉಂಟಾಗಿದೆ. ಅವರ ನಿಧನಕ್ಕೆ ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.






































