ದ. ಕ. ಮತ್ತು ಉಡುಪಿ ಜಿಲ್ಲೆಯ ಕಾಂಗ್ರೆಸ್ ಪಕ್ಷ ದಶಕಗಳಿಂದಲೂ ಮಣ್ಣುಮುಕ್ಕುತ್ತಲೇ ಬರುತ್ತಿದೆ ಹೊರತು ಬಿಜೆಪಿಯನ್ನು ಯಾವ ರೀತಿಯಲ್ಲಿ ಸೋಲಿಸಬೇಕೆನ್ನುವ ತಂತ್ರಗಾರಿಕೆ ಮಾಡಿದ್ದೇ ಇಲ್ಲ.
ಬಿಜೆಪಿಯವರು ತಮ್ಮ ಅಸ್ತಿತ್ವಕ್ಕಾಗಿ,ಗಳಿಸಿದ್ದನ್ನು ಉಳಿಸಿಕೊಂಡು ಮುಂದುವರಿಸುವುದಕ್ಕಾಗಲಿ ನಿತ್ಯವೂ ಏನೆಲ್ಲ ತಂತ್ರ ಮಾಡುತ್ತಿರುತ್ತದೆಯೋ ಅದು ,ಕಾಂಗ್ರೆಸ್ಸಿಗೆ ಪ್ರತೀ ಐದು ವರ್ಷಕ್ಕೊಮ್ಮೆ ಏನಾದರೂ ನೆನಪಿಗೆ ಬರುವುದು. ಯಾರೂ ಕೂಡ ಗಮನಿಸದ ಸಪ್ಪೆ ಸಂಗತಿಯನ್ನೆಲ್ಲ ರಾಶಿ ಹಾಕಿ ವಾಟ್ಸಪ್ ಮಾಡುವುದಷ್ಟೆ.
ಸೌಜನ್ಯ ಸಾವಿನ ಪ್ರಕರಣದ ಒಂದೇ ಒಂದು ಎಳೆಯನ್ನು ಕಾಂಗ್ರೆಸ್ ಪಕ್ಷ ಹಿಡಿದು ಜಿಲ್ಲೆ,ರಾಜ್ಯದಾದ್ಯಂತ ಸಂಚಲನ ಮಾಡಿಸುತ್ತ ಬರುತ್ತಿದ್ದರೆ ಬಹುಶಃ ಕರಾವಳಿಯಲ್ಲಿ ಎರಡೂ ಜಿಲ್ಲೆಗಳ ಎಲ್ಲ ಬಿಜೆಪಿ ಶಾಸಕರು ಎಂದೋ ಪಿಠಾರಿ ಕಟ್ಟುತ್ತಿದ್ದರು ,ದಶಕಗಳ ಹಿಂದಿನ ಕಾಂಗ್ರೆಸ್ ವೈಭವ ಮತ್ತೆ ಎದ್ದು ಬರುತ್ತಿತ್ತು.
ಬೆಳ್ತಂಗಡಿಯ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರ ಒಂಟಿ ಧ್ವನಿ ಅದು ಕಾಗೆಯ ಕೂಗಿನ ಹಾಗೇ ಆಗಿ ಮುಗಿಯುತ್ತಿತ್ತು ಹೊರತು ಕಾಂಗ್ರೆಸ್ ಅವರ ಕಾಳಜಿಯನ್ನು ಬೆಂಬಲಿಸಲಿಲ್ಲ. ತಾನು ಕೂಡಾ ಬಿಳಿ ವೇಸ್ಟಿ ಬಿಳಿ ಜುಬ್ಬಾಕ್ಕೆ ಮಾರುಹೋಯಿತು.
ಬಿಜೆಪಿ ಕೂಡಾ ಜಿಲ್ಲೆಗಳಲ್ಲಿ ಗೆದ್ದು ಬಂದಿರುವುದೇ ಕೊಲೆ ಪ್ರಕರಣಗಳನ್ನು ವಿರೋಧ ಪಕ್ಷದವರ ತಲೆಗೆ ಕಟ್ಟುವುದರಿಂದ ಹೊರತು ಬೇರಾವುದೇ ಕಾರ್ಯ ಶ್ರೇಷ್ಠತೆಯಿಂದಲ್ಲ ಎಂಬುದನ್ನು ಈ ಕಾಂಗ್ರೆಸ್ಸಿಗರು ಅರ್ಥಮಾಡಿಕೊಳ್ಳಬೇಕಾಗಿತ್ತು.
ಮೂಡುಬಿದಿರೆಯ ಹೂವಿನ ವ್ಯಾಪಾರಿ,ಬಂಟವಾಳದ ಮಡಿವಾಳ,ಸುರತ್ಕಲ್(ಮಂಗಳೂರು ಉತ್ತರ)ನಲ್ಲಿನ ಕೊಲೆ ಪ್ರಕರಣ ಎಲ್ಲ ಪ್ರಕರಣಗಳನ್ನೆ ಬಿಜೆಪಿ ವೈಭವೀಕರಿಸಿದ್ದು ಮಾತ್ರವಲ್ಲ ಕಾಂಗ್ರೆಸ್ ಕೃತ್ಯ ಎನ್ನಲಿಕ್ಕೂ ಹೇಸಲಿಲ್ಲ. ಉತ್ತರ ಕನ್ನಡದ ಮೇಸ್ತ ಸಾವು ಪ್ರಕರಣ ಇಡೀ ಕರಾವಳಿಯನ್ನೇ ಬಿಜೆಪಿ ಪರ ಮಾಡಿತು.
ಬಿ. ರಮಾನಾಥ ರೈಯವರು ಮಾಡಿರುವ ಕ್ಷೇತ್ರ ಅಭಿವೃದ್ಧಿ ಕೆಲಸ ನೋಡಿದರೆ ಅವರ ಪ್ರತಿಮೆ ನಿಲ್ಲಿಸಿದರೂ ಗೆಲ್ಲಲೇಬೇಕು. ಸಮಾಜಕ್ಕೆ ಯಾವುದೇ ಕೊಡುಗೆ ಪ್ರಚಾರವಿಲ್ಲದ ಹೈನುಗಾರಿಕೆ ಮತ್ತು ಕಲ್ಲಡ್ಕ ಡಾಕ್ಟರ್,ತಾನು ಎಂಬಂತಿದ್ದವರೊಬ್ಬರನ್ನು ಎದುರು ನಿಲ್ಲಿಸಿ ರೈಯವರನ್ನು ಸೋಲಿಸುವುದಕ್ಕೆ ಬಿಜೆಪಿ ಕಂಡುಹುಡುಕಿದ ತಂತ್ರಗಾರಿಕೆಯೆ ಕೊಲೆ ಸಾವಿನ ವೈಭವೀಕರಣ ಮತ್ತು ಆರೋಪವನ್ನು ಕಟ್ಟಿಕೊಡುವುದು.
ಕಾಂಗ್ರೆಸ್ಸ ಕೋಟೆಯಾಗಿದ್ದ ಮೂಡುಬಿದಿರೆ ಕ್ಷೇತ್ರವನ್ನು ಬಿಜೆಪಿ ತನ್ನ ಬಗಲಿಗೆ ಹಾಕ್ಕೊಳ್ಳಲಿಕ್ಕೆ ಕಂಡು ಹುಡುಕಿದ್ದೆ ಕೊಲೆ ಪ್ರಕರಣವನ್ನು ಎತ್ತಿಕಟ್ಟುವುದು.ಪ್ರಶಾಂತ ಪೂಜಾರಿಯ ಕೊಲೆಯನ್ನು ಕಾಂಗ್ರೆಸ್ ತಲೆಗೆ ಕಟ್ಟಿದ್ದರಿಂದ ಅಭಯಚಂದ್ರ ಸೋಲಬೇಕಾಯಿತು.ಹೀಗೆ ಪ್ರತಿ ಕ್ಷೇತ್ರದಲ್ಲಿನ ಅಸಹ್ಯ ಘಟನೆಯನ್ನು ಹುಡಕಿ ಹೆಕ್ಕಿ ತೆಗೆದು ಮೆರೆದಾಡಿಸಿದ್ದೇ ಬಿಜೆಪಿಯ ಯಶಸ್ವೀ ತಂತ್ರಗಾರಿಕೆ.ಧರ್ಮಸ್ಥಳದ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸೌಜನ್ಯಳ ಕೊಲೆ ಪ್ರಕರಣ ನಡೆದಿರುವುದು ಕೂಡಾ ಬಿಜೆಪಿ ಆಡಳಿತ ಕಾಲದಲ್ಲಿಯೆ.ಆ ಪ್ರಕರಣವನ್ನು ಕಾಂಗ್ರೆಸ್ ಕೈಗೆತ್ತಿಕೊಂಡಿದ್ದರೆ ಆಗಿನ ಸರಕಾವನ್ನೇ ಉರುಳಿಸುವುದಕ್ಕೆ ಸುವರ್ಣ ಅವಕಾಶವಿತ್ತು.ಆಗಿನ ಗೃಹ ಸಚಿವ ಆರ್. ಅಶೋಕ ಘಟನಾ ಸ್ಥಳಕ್ಕೆ ಮತ್ತು ಸಂತೃಸ್ಥರ ಮನೆಗೂ ಭೇಟಿ ನೀಡದೆ ನೇರವಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಿ ಹೆಗ್ಗಡೆಯವರಿಗೆ ಸಾಂತ್ವನ ನೀಡುವ ಅಗತ್ಯವಿದ್ದಂತೆ ವರ್ತಿಸಿದ್ದ ಸಂಗತಿಯನ್ನೂ ಈ ಕಾಂಗ್ರೆಸ್ ಎಬ್ಬಿಸಿಲ್ಲ. ಕಾರಣ ಕಾಂಗ್ರೆಸ್ಸಿಗೂ ಧರ್ಮಸ್ಥಳ ಬೇಕು.! ಕಾಂಗ್ರೆಸ್ಸಿನವರ ಲೆಕ್ಕಾಚಾರದಲ್ಲಿ ಹೆಗ್ಗಡೆಯವರಿಗೆ ತೊಂದರೆಯಾಗುವುದು ಎಂದು. ಕಾಂಗ್ರೆಸ್ಸು ಅವರನ್ನು ಬೇಕೆಂದೇ ಎಳೆದುಕೊಂಡಿದ್ದು!ಸೌಜನ್ಯಳ ಸಾವಿಗೆ ನ್ಯಾಯ ಸಿಗುವುದಕ್ಕೆ ಹೆಗ್ಗಡೆಯವರು ಈಗಲೂ ಬೆಂಬಲ ಕೊಡುತ್ತಿದ್ದಾರೆ.
ಒಬ್ಬ ವಸಂತ ಬಂಗೇರ ಅವರ ಹೋರಾಟಕ್ಕೆ ಕೆಪಿಸಿಸಿಯೇ ವಿರುದ್ಧವಾದರೆ ಅವರಾದರೂ ಏನು ಮಾಡಬಹುದು.ಆದರೂ ಬಂಗೇರ ತನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಿಲ್ಲ ಎನ್ನುವುದು ಮರೆಯುವಂತಿಲ್ಲ.
ಸೌಜನ್ಯಳ ಸಾವನ್ನು ರಾಜಕೀಯ ಪಕ್ಷವೊಂದು ನಿರ್ಲಕ್ಷಿಸುವುದೆಂದರೆ ಆ ಪಕ್ಷ ಬೇರೆ ರಾಜ್ಯದ ಮಹಿಳೆಯರ ಬೆತ್ತಲೆ ಪ್ರದರ್ಶನ ಮುಂತಾದುದಕ್ಕೆ ಬೊಬ್ಬೆ ಗಲಾಟೆ ಮಾಡುವುದೇಕೆ? ಅದು ಯಾವ ವೇಷದ ಮುಖವಾಡ? ರಾಜ್ಯದ ಜೀವಂತ ಪ್ರಕರಣವನ್ನು ಗಟಾರಕ್ಕೆಸೆದಿದ್ದ ಕಾಂಗ್ರೆಸ್ಸಿಗೆ ಹೊರ ರಾಜ್ಯ ಮಣಿಪುರದ ಪ್ರಕರಣ ಬಗ್ಯೆ ಮಾತಾಡಲು ನಿಜವಾಗಿಯಾದರೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರುಗೆ ನೈತಿಕತೆ ಇದೆಯೇ?
ಸೌಜನ್ಯ ಸಾವಿನ ನ್ಯಾಯುತ ತನಿಖೆಯ ಬಗ್ಗೆ ಹೋರಾಟ ಮಾತ್ರವಷ್ಟೇ ಅಲ್ಲ ಆ ಕೊಲೆಯ ನೈಜ ಹೊಣೆಗಾರಿಕೆಯನ್ನು ಅಂದಿನ ಬಿಜೆಪಿ ಸರಕಾರದ ಮೇಲೆಯೆ ಹಾಕಿ ಕಾಂಗ್ರೆಸ್ ಹೋರಾಟ ಮಾಡಬೇಕಾಗಿತ್ತು. ಕಾಂಗ್ರೆಸ್ಸಿಗೂ ಕಾಣುವುದ ಸೌಜನ್ಯಳ ಮೃತದೇಹವಲ್ಲ,ಬೇಕಾಗಿರುವುದು ಬಡ ಕುಟುಂಬದ ಹೆಣ್ಣಿನ ಸಾವಿಗೆ ನ್ಯಾಯ ಕೂಡಾ ಅಲ್ಲ. ಸೌಜನ್ಯ ಸಾವು ಪ್ರಕರಣದಲ್ಲಿ ಬಿಜೆಪಿ ಯಾವ ಪಾತ್ರ ವಹಿಸಿಕೊಂಡಿದೆಯೋ ಅದನ್ನೇ ಕಾಂಗ್ರೆಸ್ ಕೂಡಾ ಮುಖ ತಿಕ ಮುಚ್ಚಿಕೊಂಡು ಮಾಡಿಕೊಂಡೇ ಬಂದಿದೆ.
ಸೌಜನ್ಯ ಸಾವಿನ ಬಗ್ಯೆ ಧ್ವನಿಯೆತ್ತಿದ್ದನ್ನು ತಪ್ಪು ಎಂದು ಕಾಂಗ್ರೆಸ್ ಪಕ್ಷವು ತೀರ್ಮಾನಕ್ಕೆ ಬಂದು ಕೆ. ವಸಂತ ಬಂಗೇರ ಅವರಿಗೆ ಮಂತ್ರಿ ಸ್ಥಾನ ಕೊಡಲಿಲ್ಲ. ಜನಪ್ರಿಯ ಶಾಸಕನನ್ನು ಮೂಲೆಗೆ ತಳ್ಳುವಲ್ಲಿ ಕಾಂಗ್ರೆಸ್ ಪಕ್ಷವು ಆರ್ ಎಸ್ ಎಸ್ ಗುಂಪಿನವರ ಜೊತೆ ಒಪ್ಪಂದ ಮಾಡಿಕೊಳ್ಳುವಷ್ಟು ತನ್ನ ಸಿದ್ಧಾಂತವನ್ನು ಮರೆತಿತು. ತಾನೊಬ್ಬ ಸಮಾಜವಾದ ಸಿದ್ಧಾಂತದಿಂದ ಹೊರಬಂದಿರುವ ಮಾನವತಾವಾದಿ ಎಂದು ಕೊಳ್ಳುವ ಆಗಲೂ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ಕೂಡಾ ಅಧಿಕಾರದ ಗದ್ಗುಗೆಯ ಆಸೆಗೋಸ್ಕರ ತನ್ನ ಆತ್ಮೀಯ ಸ್ನೇಹಿತ ವಸಂತ ಬಂಗೇರ ಅವರನ್ನು ಮೂಲೆಗುಂಪು ಮಾಡಿದರು.
ಸಾಮಾನ್ಯ ಯುವಕನೆ ದುರು ಸೋಲೊಪ್ಪುವಂತೆ ಮಾಡಿದ ಕೀರ್ತಿಗೆ ಸಿದ್ಧರಾಮಯ್ಯ ಅಕ್ಷರಶಃ ಭಾಜನರಾದರು.
ಜಿಲ್ಲೆಯ ಇತರ ಯಾವುದೇ ಕೊಲೆ ಪ್ರಕರಣಕ್ಕಿಂತಲೂ ಸೌಜನ್ಯ ಪ್ರಕರಣ ಒಂದೇ ಈ ಎರಡು ಜಿಲ್ಲೆಗಳ ರಾಜಕೀಯ ಚಿತ್ರಣವನ್ನೇ ಬದಲಾಯಿಸಿಬಿಡುವಷ್ಟು ಗಾಢವಾದದ್ದಾಗಿತ್ತು. ಅಧಿಕಾರ ಹಾಗೂ ದರ್ಪವನ್ನು ವಿರೋಧಿಸುವ ತಾಕತ್ತಿನ ಹೋರಾಟವಾಗಿ ಜನರನ್ನು ಮತ್ತಷ್ಟು ರೊಚ್ಚಿಗೇಳಿಸುತ್ತಿತ್ತು. ಒಬ್ಬ ಮಹೇಶ ಶೆಟ್ಟಿ ತಿಮರೋಡಿಯವರ ಸಾಧನೆಯನ್ನು ರಾಜ್ಯ ಕಾಂಗ್ರೆಸ್ ಪಕ್ಷ ಸಮಿತಿಗೆ ಮಾಡುವುದಿರಲಿ ಒಂದಕ್ಷರದ ಮಾತಾಡುವುದಕ್ಕೂ ಆಗಲಿಲ್ಲ.
ಅಂಥ ನಾಚಿಕೆಯ,ಅವಮಾನದ ಪ್ರಸಂಗ ಕಾಂಗ್ರೆಸ್ ಇತಿಹಾಸಕ್ಕೆ ದೊಡ್ಡ ಕಳಂಕ.
ನಾವು ಕೂಡಾ ಹಿಂದೂಗಳು ಎನ್ನುವ ಕಾಂಗ್ರೆಸ್ ನಾಯಕರಿಗೆ ಸೌಜನ್ಯಅಥವಾ ಕರಾವಳಿ ಮಲೆನಾಡಿನ ಗೌಡ ಸಮುದಾಯದವರು ಯಾರು ಎಂದು ಗೊತ್ತಾಗಲಿಲ್ಲ ಎನ್ನುವುದು ನಾಚಿಕೆಯ ಸಂಗತಿ.ಸೌಜನ್ಯ ಪ್ರಕರಣವನ್ನು ವಸಂತ ಬಂಗೇರ ಮುಖಂಡತ್ವದಲ್ಲಿ ಜಿಲ್ಲೆ ,ರಾಜ್ಯದಾದ್ಯಂತ ಪ್ರತಿಭಟನೆಗಳಿಗೆ,ಆರೋಪವನ್ನು ಬೇರೆ ಪಕ್ಷದ ಮುಡಿಗೆ ಕಟ್ಟುವುದಕ್ಕೆ ಕೆಪಿಸಿಸಿಯವರು ಸಜ್ಜಾಗುತ್ತಿದ್ದರೆ ಇವತ್ತಿನ ಸಂದರ್ಭದಲ್ಲಿ ಬಿಜೆಪಿಯ ಯಾವನೇ ನಾಯಕ ಆಯ್ಕೆಯಾಗುತ್ತಿರಲಿಲ್ಲ. ಎರಡೂ ಜಿಲ್ಲೆಯಲ್ಲಿ ಬಿಜೆಪಿ ಧೂಳೀಪಟವಾಗಿಬಿಡುತ್ತಿತ್ತು.
(ಈ ಬರೆಹ ಬರೆದಿರುವುದು ಕಾಂಗ್ರೆಸ್ಸಿಗರ ರಾಜಕೀಯ ಕಾರ್ಯತಂತ್ರದ ವೈಫಲ್ಯ ಹೇಳುವುದಷ್ಟೆ ಆಗಿದೆ)
-ವಿ. ಕೆ. ವಾಲ್ಪಾಡಿ






































